ಧಾರ್ಮಿಕ ಮಾಹಿತಿಯನ್ನು ತಿಳಿದುಕೊಳ್ಳುವ ದಿಕ್ಕಿನತ್ತ ಹೆಚ್ಚುತ್ತಿರುವ ಹಿಂದೂಗಳ ಸೆಳೆತ !
‘ದೇವರಿಲ್ಲ’, ‘ಧರ್ಮವು ಅಫೀಮಿನ ಮಾತ್ರೆಯಾಗಿದೆ’, ಎಂದು ಹೇಳುವ ಸಾಮ್ಯವಾದಿಗಳಿಗೆ ಇದು ಕಪಾಳಮೋಕ್ಷ!
ಗೋರಖಪುರ (ಉತ್ತರ ಪ್ರದೇಶ) – ಇಲ್ಲಿನ ಪ್ರಸಿದ್ಧ ಗೀತಾ ಪ್ರೆಸ್ಸಿನ ಸ್ಥಾಪನೆಯ ನಂತರ 98 ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಕಳೆದ 5 ತಿಂಗಳಲ್ಲಿ ಭಾರಿ ಸಂಖ್ಯೆಯಲ್ಲಿ ಧಾರ್ಮಿಕ ಪುಸ್ತಕಗಳ ಮಾರಾಟವಾಗಿರುವ ಮಾಹಿತಿಯು ತಿಳಿದುಬಂದಿದೆ. ಮಾರಾಟವಾದ ಪುಸ್ತಕಗಳಲ್ಲಿ ಭಗವಾನ ಶ್ರೀರಾಮನಿಗೆ ಸಂಬಂಧಿಸಿದ ‘ರಾಮಚರಿತ ಮಾನಸ’, ಹಾಗೆಯೇ ‘ಶ್ರೀಮದ್ಭಗವದ್ಗೀತಾ’ ಇವುಗಳ ಪ್ರಮಾಣವು ಹೆಚ್ಚಿದೆ. ಗೀತಾ ಪ್ರೆಸ್ಸಿನ ಪ್ರತಿವರ್ಷ ಮಾರಾಟವಾಗುವ ಧಾರ್ಮಿಕ ಪುಸ್ತಕಗಳಿಗಿಂತಲೂ ಹೆಚ್ಚಿನ ಪುಸ್ತಕಗಳು ಕಳೆದ 5 ತಿಂಗಳಲ್ಲಿ ಮಾರಾಟವಾಗಿವೆ. 1923ರಲ್ಲಿಗೀತಾ ಪ್ರೆಸ್ಸಿನ ಸ್ಥಾಪನೆಯಾಗಿತ್ತು. ಧಾರ್ಮಿಕ ಮಾಹಿತಿಯನ್ನು ತಿಳಿದುಕೊಳ್ಳುವ ಕಡೆಗೆ ಹಿಂದೂಗಳಲ್ಲಿನ ಸೆಳೆತ ಹೆಚ್ಚಾಗಿದೆ.
गीता प्रेस ने तोड़े सारे रिकॉर्ड!#BhagwatGitahttps://t.co/6vbNBw3wnI
— tfipost.in (@tfipost_in) December 23, 2021
1. ಈ ವರ್ಷದ ಜೂನ್ ತಿಂಗಳಿನಲ್ಲಿ 4 ಕೋಟಿ 93 ಲಕ್ಷ ರೂಪಾಯಿಗಳು, ಜುಲೈನಲ್ಲಿ 6 ಕೋಟಿ 64 ಲಕ್ಷ ರೂಪಾಯಿಗಳು, ಆಗಸ್ಟನಲ್ಲಿ 6 ಕೋಟಿ 31 ಲಕ್ಷ ರೂಪಾಯಿಗಳು, ಸೆಪ್ಟೆಂಬರಿನಲ್ಲಿ 7 ಕೋಟಿ 60 ಲಕ್ಷ ರೂಪಾಯಿಗಳು, ಅಕ್ಟೋಬರಿನಲ್ಲಿ 8 ಕೋಟಿ 68 ಲಕ್ಷ ರೂಪಾಯಿಗಳು ಮತ್ತು ನವೆಂಬರಿನಲ್ಲಿ 7 ಕೋಟಿ 15 ಲಕ್ಷ ರೂಪಾಯಿಗಳ ಪುಸ್ತಕಗಳ ಮಾರಾಟವಾಯಿತು.
2. ಗೀತಾ ಪ್ರೆಸ್ಸಿನ ವಿಶ್ವಸ್ಥರು ‘ಹಿಂದೆ ಶ್ರೀ ರಾಮಜನ್ಮಭೂಮಿಯ ವಿವಾದದಿಂದಾಗಿ ಅದರ ಬಗ್ಗೆ ಯಾರೂ ತಿಳಿದುಕೊಳ್ಳುತ್ತಿರಲಿಲ್ಲ, ಆದರೆ ಈಗ ಅಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತಿರುವುದರಿಂದ ಜನರು ಆ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಚ್ಛಿಸುತ್ತಿದ್ದಾರೆ. ಹಾಗೆಯೇ ಜನರ ಧರ್ಮದ ಮೇಲಿನ ಶ್ರದ್ಧೆಯು ಹೆಚ್ಚುತ್ತಿದೆ’ ಎಂದು ಹೇಳಿದ್ದಾರೆ.