ನ್ಯಾಯಾಲಯದ ಅವಮಾನ ಮಾಡಿದ್ದರಿಂದ ಅಪರಾಧವನ್ನು ನೋಂದಾಯಿಸಲು ಆದೇಶ
ಈ ರೀತಿಯಲ್ಲಿ ನ್ಯಾಯಾಲಯದ ಅಪಮಾನ ಮಾಡುವ ನ್ಯಾಯವಾದಿಗಳಿಗೆ ನ್ಯಾಯಾಲಯವು ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಜನತೆಗೆ ಅನಿಸುತ್ತದೆ !
ಚೆನ್ನೈ (ತಮಿಳುನಾಡು) – ಮದ್ರಾಸ ಉಚ್ಚ ನ್ಯಾಯಾಲಯ ಆರ್. ಡಿ. ಸಂಥನ ಕೃಷ್ಣನ್ ಎಂಬ ನ್ಯಾಯವಾದಿಯ ವಿರುದ್ಧ ನ್ಯಾಯಾಲಯದ ಅವಮಾನ ಮಾಡಿರುವ ಅಪರಾಧವನ್ನು ದಾಖಲಿಸಿದೆ. ನ್ಯಾಯವಾದಿ ಸಂಥನರವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯುತ್ತಿರುವ ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ಓರ್ವ ಮಹಿಳೆಯೊಂದಿಗೆ ಅಶ್ಲೀಲ ಹಾವಭಾವ ಮಾಡುತ್ತಿರುವುದು ಕಂಡುಬಂದಿದೆ. ಅವರ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರಿತವಾಗಿದೆ. ಆದುದರಿಂದ ನ್ಯಾಯಾಲಯವು ಅಪರಾಧವನ್ನು ದಾಖಲಿಸಿದೆ. ತಮಿಳುನಾಡು ಮತ್ತು ಪುದುಚೇರಿ ಬಾರ್ ಕೌನ್ಸಿಲ್ ನಿಂದ ಈ ನ್ಯಾಯವಾದಿಯನ್ನು ಅಮಾನತುಗೊಳಿಸಲಾಗಿದೆ.
#Lawyer gets ‘intimate’ with woman during virtual hearing, suspended from practicing https://t.co/BBW7V2qdN9
— India TV (@indiatvnews) December 22, 2021
ನ್ಯಾಯಾಲಯವು ಇದರ ಬಗ್ಗೆ ಹೇಳುತ್ತಾ ನ್ಯಾಯಾಲಯದ ಆಲಿಕೆಯ ಸಮಯದಲ್ಲಿ ಇಂತಹ ಸಂಗತಿಗಳು ಲಜ್ಜಾಸ್ಪದವಾಗಿ ಸಾರ್ವಜನಿಕ ಮಟ್ಟದಲ್ಲಿ ಪ್ರಸಾರವಾಗುತ್ತಿರುವಾಗ ನ್ಯಾಯಾಲಯವು ಮೂಕ ಪ್ರೇಕ್ಷಕನಂತೆ ಇರಲಾರದು. ಆದುದರಿಂದ ನ್ಯಾಯಾಲಯವು ಇದನ್ನು ಗಮನಿಸಿ ಅಪರಾಧ ತನಿಖಾ ವಿಭಾಗಕ್ಕೆ ತನಿಖೆ ಮಾಡುವ ಆದೇಶ ನೀಡಿದೆ.
ಆನ್ಲೈನ್ ಆಲಿಕೆಯ ಸಮಯದಲ್ಲಿ ನ್ಯಾಯವಾದಿಗಳಿಂದ ಮಾಡಲಾದ ಕೆಲವು ಅಯೋಗ್ಯ ಕೃತಿಗಳು
ನ್ಯಾಯಾಲಯದ ಆನ್ಲೈನ್ ಆಲಿಕೆಯ ಸಮಯದಲ್ಲಿ ಈ ಮೊದಲೂ ನ್ಯಾಯವಾದಿಗಳಿಂದ ಕೆಲವು ಅಯೋಗ್ಯ ಕೃತಿಗಳು ಘಟಿಸಿವೆ. ಇದರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಒಂದು ಆನ್ಲೈನ್ ಆಲಿಕೆಯ ಸಮಯದಲ್ಲಿ ಶ್ರೀಧರ ಭಟ್ಟ ಎಂಬ ಹೆಸರಿನ ನ್ಯಾಯವಾದಿಯು ಅರ್ಧ ನಗ್ನ ಅವಸ್ಥೆಯಲ್ಲಿ ಉಪಸ್ಥಿತರಿದ್ದರು. ಅವರಿಗೆ ಈ ಬಗ್ಗೆ ಅರಿವು ಮಾಡಿಕೊಟ್ಟ ನಂತರವೂ ಅವರು 20 ನಿಮಿಷಗಳವರೆಗೆ ಅದೇ ಸ್ಥಿತಿಯಲ್ಲಿದ್ದರು. ರಾಜಸ್ಥಾನ ಉಚ್ಚನ್ಯಾಯಾಲಯದ ಒಂದು ಆಲಿಕೆಯ ಸಮಯದಲ್ಲಿ ನ್ಯಾಯವಾದಿ ರಾಜೀವ ಧವನ ಎಂಬುವವರು ಹುಕ್ಕ (ತಂಬಾಕು ಸೇವಿಸುವ ಒಂದು ವಿಧ) ಸೇವಿಸುತ್ತಿರುವುದು ಕಂಡುಬಂದಿದೆ. ಜೂನ್ 2021 ರಂದು ನ್ಯಾಯವಾದಿ ಮತ್ತು ಕಾಂಗ್ರೆಸ್ ನೇತಾರರಾದ ಅಭಿಷೇಕ ಮನು ಸಿಂಘವಿರವರು ಪ್ಯಾಂಟ್ ಹಾಕದೆ ಆಲಿಕೆಗೆ ಆನ್ಲೈನ್ ಉಪಸ್ಥಿತರಿದ್ದರು.