ಪಾಕಿಸ್ತಾನದಲ್ಲಿ ಹಿಂದೂಗಳ ಈ ಸ್ಥಿತಿಯನ್ನು ಬದಲಾಯಿಸಲು ಭಾರತ ಸರಕಾರ ಯಾವಾಗ ಪ್ರಯತ್ನಿಸುವುದು ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿಗೆ ಬರುತ್ತದೆ !- ಸಂಪಾದಕರು
ನವ ದೆಹಲಿ – ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಉಮರಕೋಟದ ಸತ್ರ ನ್ಯಾಯಾಲಯದ ಹೊರಗೆ ಓರ್ವ ಹಿಂದೂ ಮಹಿಳೆಯನ್ನು ಹಾಡುಹಗಲೇ ಎಲ್ಲರ ಎದುರು ಅಪಹರಿಸಿರುವ ಘಟನೆ ನಡೆದಿದೆ. ಈ ಘಟನೆಯ ಒಂದು ವಿಡಿಯೋ ಭಾಜಪದ ನಾಯಕ ಮನಜಿಂದರ್‍ಸಿಂಹ ಸಿರಸಾ ಇವರು ಟ್ವಿಟರ್ ನಲ್ಲಿ ಟ್ವೀಟ್ ಮಾಡುತ್ತಾ ಪ್ರಸಾರ ಮಾಡಿದ್ದಾರೆ. ಈ ಟ್ವೀಟ್‍ನಲ್ಲಿ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರನ್ನು ‘ಮೆನ್ಶನ್’ (ಸಂಬಂಧಿತ ವ್ಯಕ್ತಿಗಳಿಗೆ ಉದ್ದೇಶಿಸಿ) ಮಾಡಿದ್ದಾರೆ.
‘Hindu woman abducted in daylight in #Pakistan‘s #Sindh‘, says #BJP leader #ManjinderSinghSirsa, shares disturbing videohttps://t.co/uRp3OVX3XX
— TIMES NOW (@TimesNow) December 21, 2021
ಈ ಮಹಿಳೆಯ ಅಪಹರಣವಾಗುತ್ತಿರುವಾಗ ಆಕೆ ಅಲ್ಲಿದ್ದ ಜನರಲ್ಲಿ ಸಹಾಯಕ್ಕಾಗಿ ಯಾಚಿಸುತ್ತಿದ್ದಳು. ಆದರೂ ಯಾರು ಆಕೆಯ ಸಹಾಯಕ್ಕಾಗಿ ಮುಂದೆ ಬಂದಿಲ್ಲ, ಎಂಬುದು ಸಂಬಂಧಿತ ವಿಡಿಯೋದಲ್ಲಿ ಕಾಣುತ್ತಿದೆ.