ತಂದೆ-ತಾಯಿಯರು ನಮ್ಮ ಮಾಲೀಕರಲ್ಲ ಇದು ಎಷ್ಟು ಸತ್ಯವೋ ಅವರು ನಮ್ಮ ನೌಕರರಲ್ಲ ಎಂಬುದೂ ಅಷ್ಟೇ ಸತ್ಯವಾಗಿದೆ. ಈ ಜಗತ್ತಿನಲ್ಲಿ ಉಚಿತವಾಗಿ ಏನೂ ಸಿಗುವುದಿಲ್ಲ; ಆದರೆ ತಮ್ಮ ತಂದೆತಾಯಿಯರು ನಮಗೆ ಪ್ರತಿದಿನ ಅನ್ನ, ವಸ್ತ್ರ ಹಾಗೂ ಆಸರೆ ಉಚಿತವಾಗಿ ನೀಡುತ್ತಾರೆ. ಅವರು ಇತರ ಅನೇಕ ವಿಷಯಗಳನ್ನು ನೀಡುತ್ತಿರುತ್ತಾರೆ. ಅವರು ಒಳ್ಳೆಯ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡುತ್ತಾರೆ. ಅದಕ್ಕಾಗಿ ಪುಸ್ತಕಗಳನ್ನು ಹಾಗೂ ವಿವಿಧ ವಸ್ತುಗಳನ್ನು ನೀಡುತ್ತಾರೆ. ಅದರ ಬದಲಿಗೆ ನಾವೇನು ನೀಡುತ್ತೇವೆ ? ಒಂದು ಪೈಸೆಯನ್ನು ನೀಡುವುದಿಲ್ಲ, ಕೊಡಲು ಸಾಧ್ಯವಿಲ್ಲ.
ನಮಗೆ ಅನಾರೋಗ್ಯವಿದ್ದಾಗ ಅವರು ಹಗಲುರಾತ್ರಿ ನಮ್ಮ ಸೇವೆ ಮಾಡುತ್ತಾರೆ. ಚಿಕ್ಕಂದಿನಲ್ಲಿ ಮಲಮೂತ್ರ ಸ್ವಚ್ಛಗೊಳಿಸುವುದು, ಬಟ್ಟೆ ತೊಳೆಯುವುದು ಹೀಗೆ ಏನೆಲ್ಲ ಕೆಲಸಗಳನ್ನು ಮಾಡುತ್ತಾರೆ ಅದೆಲ್ಲವನ್ನು ಸ್ವಲ್ಪವು ಉದಾಸೀನ ಮಾಡದೆ ಕಿರಿಕಿರಿ ಮಾಡದೆ ತಮ್ಮ ಕರ್ತವ್ಯವೆಂದು ಅಲ್ಲದೆ ಪ್ರೇಮದಿಂದ ಮಾಡುತ್ತಾರೆ. ಅವರು ನಮಗಾಗಿ ತೆಗೆದುಕೊಂಡ ಪರಿಶ್ರಮವನ್ನು ಮರುಪಾವತಿಸಲು ಸಾಧ್ಯವಿಲ್ಲ. ಅದನ್ನು ಹಣದಿಂದ ಬೆಲೆಕಟ್ಟಲಾಗದು. ಆದರೆ ಅವರಿಗೆ ಗೌರವವನ್ನು ಕೊಟ್ಟು ಅವರು ಹೇಳಿದಂತಹ ಸೇವೆ ಹಾಗೂ ಕೆಲಸವನ್ನು ಮಾಡುವುದು ಅವರ ಬಗ್ಗೆ ಕೃತಜ್ಞತಾ ಬುದ್ಧಿಯನ್ನಿಟ್ಟು ವರ್ತಿಸುವುದು, ಒಳ್ಳೆಯ ಜ್ಞಾನವನ್ನು ನೀಡಿ ಅವರಿಗೆ ಹಾಗೂ ತಾವು ಆನಂದವನ್ನು ಪಡೆದುಕೊಳ್ಳುವುದು ನಮ್ಮ ಕೈಯಲ್ಲಿದೆ. ಮನುಷ್ಯನು ಕೈಯಲ್ಲಿರುವ ವಿಷಯವನ್ನು ಮಾಡುವುದಿಲ್ಲ. ಆಗ ವಿಷಯವು ಕೈಮೀರಿ ಹೋಗುತ್ತದೆ ನಾವು ತಂದೆ ತಾಯಿಯರ ಅಪೇಕ್ಷೆಯನ್ನು ಪೂರ್ಣಗೊಳಿಸಿದರೆ ಹಾಗೂ ನಮ್ಮಲ್ಲಿ ಒಳ್ಳೆಯ ಗುಣವನ್ನು ಹೆಚ್ಚಿಸಿದರೆ ಚಮತ್ಕಾರವಾಗುವುದು. (ಆಧಾರ : ಮಾಸಿಕ ‘ಮನಶಕ್ತಿ’)