‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಜಿಹಾದಿ ಸಂಘಟನೆಯ ರಾಜಕೀಯ ಪಕ್ಷ ‘ಸೋಶಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಾಯಕ ನೂರುದ್ದೀನ್ ಫಾರೂಕಿ ಬೆದರಿಕೆ
ಇಂತಹ ಹೇಳಿಕೆ ನೀಡುವ ನಾಯಕನಿರುವ ಪಕ್ಷವನ್ನು ನಿಷೇಧಿಸಬೇಕು ! ಭಾಜಪ ಸರಕಾರವು ಅದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು
ಮೈಸೂರು – ಜಾತ್ಯತೀತತೆಯನ್ನು ನಾಶಪಡಿಸಲು ಮತ್ತು ರಾಜ್ಯದ ಶ್ರೀರಂಗಪಟ್ಟಣದ ಮಸೀದಿಯ ಜಾಗದಲ್ಲಿ ದೇವಾಲಯವನ್ನು ಕಟ್ಟಲು ಬಯಸಿದರೆ ಟಿಪ್ಪು ಸುಲ್ತಾನನ ಪ್ರತಿಯೊಬ್ಬ ಸೈನಿಕನು ನಿಮ್ಮ ಕಣ್ಣುಗಳನ್ನು ಕೀಳಲು ಸಿದ್ಧನಿದ್ದಾನೆ, ಎಂದು ನಾನು ಬಜರಂಗ ದಳ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹೇಳಲು ಬಯಸುತ್ತೇನೆ. ನೀವು ಎಷ್ಟೇ ದೊಡ್ಡ ದೇವಾಲಯ ಕಟ್ಟಿ ಅಲ್ಲಿ ‘ಅಲ್ಲಾ ಹು ಅಕಬರ್ನ ಘೋಷಣೆ ಮೊಳಗಲಿದೆ, ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಜಿಹಾದಿ ಸಂಘಟನೆಯ ರಾಜಕೀಯ ಪಕ್ಷವಾದ ‘ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್.ಡಿ.ಪಿ.ಐ.) ನಾಯಕ ನೂರುದ್ದೀನ್ ಫಾರೂಕಿ ಬೆದರಿಕೆ ನೀಡಿದ್ದಾನೆ. ಇಲ್ಲಿ ನಡೆದ ರ‍್ಯಾಲಿಯಲ್ಲಿ ಆತ ಮಾತನಾಡುತ್ತಿದ್ದನು. ಈ ಬಗ್ಗೆ ಗೃಹಸಚಿವ ಅರಗ ಜ್ಞಾನೇಂದ್ರ ಮಾತನಾಡುತ್ತಾ, ಈ ಪ್ರಕರಣದಲ್ಲಿ ಸೂಕ್ತ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಮೈಸೂರು ಪೊಲೀಸರಿಗೆ ಆದೇಶಿಸಲಾಗಿದೆ ಎಂದು ಹೇಳಿದರು.
SDPI’s Maulana Nooruddin Farooqui had threatened on December 6 that the members of Tipu’s soldiers would gouge their eyes out over reports of recital of Hanuman Chalisahttps://t.co/KsYchcNfvi
— OpIndia.com (@OpIndia_com) December 15, 2021
೧. ಈ ಕುರಿತು ‘ಟೈಮ್ಸ್ ನೌ ಜೊತೆ ಮಾತನಾಡಿ ಸ್ಪಷ್ಟೀಕರಣ ನೀಡಿದ ನೂರುದ್ದೀನ್ ಫಾರೂಕಿ, ಮಸೀದಿಯಲ್ಲಿ ಹಿಂದೂಗಳ ಗುಂಪೊಂದು ಹನುಮಾನ ಚಾಲೀಸಾ ಪಠಿಸುವ ಪ್ರಯತ್ನದ ವಿರುದ್ಧ ಪ್ರತಿಭಟಿಸಲಾಯಿತು. ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಶಾಸಕ ಯತ್ನಾಳರ ಈ ಹಿಂದಿನ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದೆ ಎಂದಿದ್ದಾನೆ.
೨. ಮತ್ತೊಂದೆಡೆ ಎಸ್.ಡಿ.ಪಿ.ಐ.ನ ಓರ್ವ ಹಿರಿಯ ಸದಸ್ಯರೊಬ್ಬರು ಮಾತನಾಡುತ್ತಾ, ಫಾರೂಕಿ ಅವರು ಕೇವಲ ರಾ.ಸ್ವ. ಸಂಘ ಸಂವಿಧಾನ, ಜಾತ್ಯತೀತತೆ ಮತ್ತು ಮಸೀದಿಯನ್ನು ನಾಶ ಮಾಡಲು ಬಂದರೆ, ಅವರ (ಅವರ ಸ್ವಯಂಸೇವಕರ) ಕಣ್ಣು ಕೀಳುವೆವು ಹೇಳಿದ್ದರು. ಈಶ್ವರಪ್ಪ ಹಾಗೂ ಅನಂತಕುಮಾರ ಹೆಗಡೆ ಇವರೂ ಈ ಹಿಂದೆ ಇದೇ ರೀತಿಯ ಹೇಳಿಕೆ ನೀಡಿದ್ದರು. ಅದಕ್ಕೆ ಹೋಲಿಸಿದರೆ ಫಾರೂಕಿ ಹೇಳಿಕೆ ದೊಡ್ಡದಲ್ಲ, ಎಂದು ಹೇಳಿದ್ದಾರೆ.
ಏನಿದು ಪ್ರಕರಣ ?ಮೈಸೂರಿನ ಕೆಲವು ಹಿಂದೂ ಸಂಘಟನೆಗಳಿಂದ ಶ್ರೀರಂಗಪಟ್ಟಣದ ಮಸೀದಿಯಲ್ಲಿ ಹನುಮಾನ ಚಾಲೀಸಾ ಪಠಿಸಲು ಆಯೋಜಿಸಲಾಗಿತ್ತು. ಈ ಸಂಘಟನೆಗಳ ಪ್ರಕಾರ, ಈ ಮಸೀದಿ ಸ್ಥಳದಲ್ಲಿ ಹಿಂದೆ ಹನುಮಂತನ ದೇವಾಲಯವಿತ್ತು. ಇದನ್ನು ವಿರೋಧಿಸಿ ಎಸ್.ಡಿ.ಪಿ.ಐ.ಯಿಂದ ಪ್ರತಿಭಟನೆ ನಡೆಸಲಾಗಿತ್ತು. ಆಗ ನೂರುದ್ದೀನ್ ಫಾರೂಕಿ ಈ ಬೆದರಿಕೆ ಹಾಕಿದ್ದನು. |