ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ `ಡಿಫೆನ್ಸ್ ಅಂಡ್ ಡೆವಲಪ್‍ಮೆಂಟ್ ಆರ್ಗನೈಜೆಶನ್’ನ ವಿಜ್ಞಾನಿಯ ಬಂಧನ !

ನ್ಯಾಯವಾದಿಯ ಜೊತೆಯಲ್ಲಾದ ವಾಗ್ವಾದದಲ್ಲಿ ಅವರನ್ನು ಕೊಲ್ಲಲು ಬಾಂಬ್ ಇಡಲಾಗಿತ್ತು !

ಸೇನೆಗೆ ಆಯುಧಗಳನ್ನು ತಯಾರಿಸುವ `ಡಿಫೆನ್ಸ್ ಅಂಡ್ ಡೆವಲಪ್‍ಮೆಂಟ್ ಆರ್ಗನೈಜೆಶನ್’ನ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಇಂತಹ ಅಪರಾಧೀ ಪ್ರವೃತ್ತಿ ಹೊಂದಿದ್ದರೆ ಸಮಾಜಕ್ಕೆ ಅಪಾಯಕಾರಿ !- ಸಂಪಾದಕರು 

(ಎಡದಲ್ಲಿ ) ಡಿಫೆನ್ಸ್ ಅಂಡ್ ಡೆವಲಪ್‍ಮೆಂಟ್ ಆರ್ಗನೈಜೆಶನ್’ನ ವಿಜ್ಞಾನಿ  ಭಾರತ ಭೂಷಣ ಕಟಾರಿಯಾ

ನವ ದೆಹಲಿ : ಇಲ್ಲಿನ ರೋಹಿಣಿ ನ್ಯಾಯಾಲಯದಲ್ಲಿ ಡಿಸೆಂಬರ್ 9 ರಂದು ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಜ್ಞಾನಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆತನೇ ‘ಕೋರ್ಟ್ ನಂಬರ್ 102′ರಲ್ಲಿ ಬಾಂಬ್ ಇಟ್ಟಿದ್ದರು. ಭಾರತ ಭೂಷಣ ಕಟಾರಿಯಾ, 47 ವರ್ಷದ ವಿಜ್ಞಾನಿಯಾಗಿದ್ದಾರೆ, `ಡಿಫೆನ್ಸ್ ಅಂಡ್ ಡೆವಲಪ್‍ಮೆಂಟ್ ಆರ್ಗನೈಜೆಶನ್'(ಡಿ.ಆರ್.ಡಿ.ಒ.) ದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ತನಿಖೆಯ ಪ್ರಕಾರ, ವಿಜ್ಞಾನಿ ತನ್ನ ಪಕ್ಕದ ಮನೆಯ ನ್ಯಾಯವಾದಿಯೊಂದಿಗೆ ವಾದ ಮಾಡಿದ್ದರು ಮತ್ತು ಅವರನ್ನು ಕೊಲ್ಲಲು ಬಾಂಬ್ ಇಟ್ಟಿದ್ದರು ಎಂದು ಬೆಳಕಿಗೆ ಬಂದಿದೆ. ಈ ವಿಜ್ಞಾನಿಯ ವಿರುದ್ಧ ಪೊಲೀಸರಿಗೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ನಂತರವೇ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇವರೊಬ್ಬರೇ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.