ಗುರುಗ್ರಾಮ (ಹರಿಯಾಣಾ) ಇಲ್ಲಿಯ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಿಸುವುದಕ್ಕೆ ಹಿಂದೂ ಸಂಘಟನೆಗಳ ಮುಂದುವರಿದ ವಿರೋಧ !

ಹರಿಯಾಣದಲ್ಲಿ ಭಾಜಪ ಸರಕಾರದ ಮುಖ್ಯಮಂತ್ರಿ ಮನೋಹರ ಲಾಲ ಕಟ್ಟರ ಇವರು ‘ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಿಸಲು ಸಾಧ್ಯವಿಲ್ಲ’, ಹೀಗೆ ಹೇಳಿಯೂ ಅಲ್ಲಿ ನಮಾಜ ಪಠಣ ಮುಂದುವರಿಯುವುದು, ಹಿಂದೂಗಳಿಗೆ ಅಪೇಕ್ಷಿತವಿಲ್ಲ ! – ಸಂಪಾದಕರು 

ಗುರುಗ್ರಾಮ (ಹರಿಯಾಣ) – ಇಲ್ಲಿ ಶುಕ್ರವಾರದಂದು ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಣಕ್ಕೆ ಕಳೆದ ಕೆಲವು ತಿಂಗಳಿಂದ ಹಿಂದೂಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಶುಕ್ರವಾರ ಡಿಸೆಂಬರ್ 17 ರಂದು ಹಿಂದೂ ಸಂಘಟನೆಗಳಿಂದ ವಿರೋಧ ವ್ಯಕ್ತ ಪಡಿಸಲಾಯಿತು, ಆ ಸಮಯದಲ್ಲಿ ನಮಾಜ್ ಪಠಿಸುತ್ತಿರುವವರ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ವಾದ ವಿವಾದ ನಡೆಯಿತು. ಆ ಸಮಯದಲ್ಲಿ ಕಾರ್ಯಕರ್ತರು `ಭಾರತ ಮಾತಾ ಕೀ ಜಯ್’ ಎಂದು ಘೋಷಣೆ ನೀಡಿದರು. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.