ದೆಹಲಿಯ ಗಲಭೆಯ ಹಿಂದೆ ಹಿಂದೂಗಳಲ್ಲಿ ಭಯ ಹುಟ್ಟಿಸುವುದೇ ಉದ್ದೇಶವಿತ್ತು ! – ದೆಹಲಿ ನ್ಯಾಯಾಲಯ

ನ್ಯಾಯಾಲಯದ ಈ ಅಭಿಪ್ರಾಯದ ಬಗ್ಗೆ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ, ಹಾಗೂ ಇತರ ಡೋಂಗಿ ಜಾತ್ಯತೀತ ರಾಜಕೀಯ ಪಕ್ಷ ಮತ್ತು ಸಂಘಟನೆ ಮಾತನಾಡುವರೇ ?

ಮತಾಂಧರಿಂದ ನಡೆಸಲಾಗುವ ಪ್ರತಿಯೊಂದು ಗಲಭೆಯ ಉದ್ದೇಶ ಇದೇ ಆಗಿರುತ್ತದೆ, ಇಂತಹ ಗಲಭೆಗಳು ಶಾಶ್ವತವಾಗಿ ತಡೆಯಲು ಪೊಲೀಸರು ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ; ಆದರೆ ಪೊಲೀಸರು ಪ್ರತಿಯೊಂದು ಸಾರಿ ಬಾಲಮುದುಡಿ ಹಿಂದುಗಳನ್ನೇ ಕಾರಣಕರ್ತರೆಂದು ನಿರ್ಧರಿಸುತ್ತಾರೆ !

ನವ ದೆಹಲಿ – ದೆಹಲಿಯ ನ್ಯಾಯಾಲಯವು ೨೦೨೦ ರಲ್ಲಿನ ದೆಹಲಿಯಲ್ಲಿ ನಡೆದಿರುವ ಗಲಭೆಯ ಪ್ರಕರಣದಲ್ಲಿ ಆರೋಪಗಳನ್ನು ನಿಗದಿಪಡಿಸಿದೆ. ನ್ಯಾಯಾಲಯವು ಈ ಸಮಯದಲ್ಲಿ, ಈ ಗಲಭೆಯ ಮುಖ್ಯ ಉದ್ದೇಶ ಹಿಂದೂಗಳಲ್ಲಿ ಭಯ ಹುಟ್ಟಿಸುವುದಾಗಿತ್ತು ಎಂದು ಒಪ್ಪಿಕೊಂಡಿದೆ.

ಹಾಗೂ ಹಿಂದೂಗಳನ್ನು ದೇಶಬಿಟ್ಟು ಹೋಗುವ ಬೆದರಿಕೆಯೊಡ್ಡುವುದು, ಅವರ ಆಸ್ತಿಯನ್ನು ಕಬಳಿಸುವುದು ಮತ್ತು ಸುಟ್ಟು ಹಾಕುವುದು ಇದೇ ಉದ್ದೇಶವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಶಾಹನವಾಜ್, ಮಹಮ್ಮದ್ ಶೋಯೆಬ್, ಶಾಹರುಖ್, ರಾಶೀದ್, ಆಝಾದ, ಅಶರಫ ಅಲಿ, ಪರ್ವೇಜ್, ಮಹಮ್ಮದ್ ಫೈಝಲ್, ರಾಶಿದ ಅಲಿಯಾಸ್ ಮೋನು ಮತ್ತು ಮಹಮ್ಮದ್ ತಾಹಿರ್ ಇವರು ಮುಖ್ಯ ಆರೋಪಿಗಳಾಗಿದ್ದಾರೆ.