೨೦೦ ಕೋಟಿ ರೂಪಾಯಿಗಳ ವಂಚನೆ ಮಾಡಿ ತಿಹಾರ ಕಾರಗೃಹದಲ್ಲಿ ಬಂಧನದಲ್ಲಿರುವ ಸುಕೇಶ ಚಂದ್ರಶೇಕರನಿಗೆ ಪೋಲಿಸರಿಂದ ವಿಶೇಷ ಆತಿಥ್ಯ

* ೧೦ ಚಲನಚಿತ್ರ ನಟಿಯರು ಹಾಗೂ ಗೆಳತಿಯರು ಭೇಟಿಯಾಗುತ್ತಿದ್ದರು * ಕಾರಾಗೃಹದಲ್ಲಿ ಕಛೇರಿ

* ಕಾರಾಗೃಹದಲ್ಲಿ ಔತಣಕೂಟದ ಆಯೋಜನೆ  * ಅಧಿಕಾರಿಗಳಿಗೆ ಪ್ರತಿ ತಿಂಗಳು ೧ ಕೋಟಿ ಲಂಚ ನೀಡುತ್ತಿರುವುದಾಗಿ ಆರೋಪ

ದೇಶದಲ್ಲಿರುವ ಎಷ್ಟೋ ಕಾರಾಗೃಹಗಳ ಸ್ಥಿತಿ ಹೀಗೆಯೇ ಇದೆ, ಎಂಬುದು ಇಲ್ಲಿಯವರೆಗೆ ಬಹಿರಂಗವಾಗಿರುವಂತಹ ಅನೇಕ ಘಟನೆಗಳಿಂದ ಜನತೆಗೆ ಅನಿಸುತ್ತದೆ ! ದೇಶದಲ್ಲಿರುವ ಪ್ರಮುಖ ಕಾರಾಗೃಹ ‘ತಿಹಾರ’ನ ಸ್ಥಿತಿ ಹೀಗಿರುವುದು ದೇಶಕ್ಕೆ ಅಪಾಯಕರ ಎಂದು ಹೇಳಬಹುದು ! ಕೇವಲ ಇಲ್ಲಿ ಮಾತ್ರವಲ್ಲ ದೇಶದಲ್ಲಿನ ಎಲ್ಲಾ ಕಾರಾಗೃಹಗಳ ಬಗ್ಗೆ ಸರಕಾರವು ಕಠಿಣವಾದ ಉಪಾಯಯೋಜನೆಗಳನ್ನು ಮಾಡಬೇಕು ಹಾಗೂ ಸಂಬಂಧಪಟ್ಟ ಭ್ರಷ್ಟ ಅಧಿಕಾರಿಗಳನ್ನು ಕಾರಾಗೃಹಕ್ಕೆ ತಳ್ಳಬೇಕು !

ನವ ದೆಹಲಿ – ೨೦೦ ಕೋಟಿ ರೂಪಾಯಿಗಳ ವಂಚನೆ ಮಾಡಿದ ಪ್ರಕರಣದಲ್ಲಿ ತಿಹಾರ ಕಾರಾಗೃಹದಲ್ಲಿ ಬಂಧನದಲ್ಲಿರುವ ಸುಕೇಶ ಚಂದ್ರಶೇಖರರವರನ್ನು ಭೇಟಿಯಾಗಲು ಜ್ಯಾಕಲಿನ ಫರ್ನಾಂಡಿಸ, ನೊರಾ ಫತೇಹಿ ಸೇರಿದಂತೆ ೧೦ ಚಲನಚಿತ್ರ ನಟಿಯರು ಹಾಗೂ ಅವನ ಸ್ನೇಹಿತೆಯರು ಬಂದು ಹೋದರು. ಹಾಗೂ ಕಾರಾಗೃಹದಲ್ಲಿ ಸುಕೇಶನಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪೂರೈಸಲಾಗುತ್ತಿತ್ತು. ಅಲ್ಲಿ ಅವನ ಐಷಾರಾಮಿ ಕಚೇರಿಯನ್ನು ಕೂಡ ಸ್ಥಾಪಿಸಲಾಗಿದೆ. ಅಲ್ಲಿ ಔತಣಕೂಟಗಳನ್ನು ಆಯೋಜಿಸಲಾಗುತ್ತಿತ್ತು. ಈ ಎಲ್ಲಾ ವಿಷಯಗಳಿಗೋಸ್ಕರ ಸುಕೇಶ ಕಾರಾಗೃಹದಲ್ಲಿನ ಅಧಿಕಾರಿಗಳಿಗೆ ಪ್ರತಿ ತಿಂಗಳು ೧ ಕೋಟಿ ರೂಪಾಯಿಗಳ ಲಂಚ ನೀಡುತ್ತಿದ್ದನು, ಎಂದು ಜಾರಿ ನಿರ್ದೇಶನಾಲಯ (ಈಡೀಯ) ಮೂಲಗಳು ನೀಡಿವೆ, ಇಂತಹ ಸುದ್ಧಿಯು ಪ್ರಚಾರವಾಗಿದೆ. ಈ ಪ್ರಕರಣದಲ್ಲಿ ಜ್ಯಾಕಲಿನ ಫರ್ನಾಂಡಿಸ ಹಾಗೂ ನೊರಾ ಫತೆಹೀಯವರನ್ನು ಮೊದಲೇ ವಿಚಾರಣೆ ಮಾಡಲಾಗಿದೆ.

೧. ಸಿಕ್ಕಿದ ಮಾಹಿತಿಯನುಸಾರ ನಟಿಯು ತನ್ನ ಹೇಳಿಕೆಯಲ್ಲಿ, ಕಾರಾಗೃಹದಲ್ಲಿರುವ ಸುಕೇಶನ ಕಚೇರಿಯಲ್ಲಿ ಸೊಫಾ, ಶೀತಪೆಟ್ಟಿಗೆ ದೂರದರ್ಶನ ಇತ್ಯಾದಿ ಸೌಲಭ್ಯಗಳಿದ್ದವು. ಹಾಗೂ ಆ ನಟಿಗೆ ಬೇಕಾಗದೆಲ್ಲಾ ಕಾರಾಗೃಹದೊಳಗೆ ಹೋಗುವ ಅನುಮತಿ ಇತ್ತು. ಅದಕ್ಕಾಗಿ ನೋಂದಣಿ ಮಾಡುವ ಅಗತ್ಯವಿರುತ್ತಿರಲಿಲ್ಲ.

೨. ೨೦೧೭ರಲ್ಲಿ ಚುನಾವಣೆ ಆಯೋಗದ ಲಂಚ ಪ್ರಕರಣದಲ್ಲಿ ಸುಕೇಶ ಚಂದ್ರಶೇಖರನನ್ನು ಒಂದು ಉಪಹಾರಗೃಹದಿಂದ ಬಂಧಿಸಲಾಗಿತ್ತು. ಅವನು ಅಣ್ಣಾದ್ರಮುಕ (ಅಣ್ಣಾ ದ್ರವಿಡ ಮುನ್ನೇತ್ರ ಕಳಘಮ್ – ದ್ರವಿಡ ಪ್ರಗತಿ ಸಂಘ) ಪಕ್ಷಕ್ಕೆ ಚುನಾವಣೆ ಚಿನ್ಹೆಯನ್ನು ಸಿಗುವಂತೆ ಮಾಡಲು ೫೦ ಕೋಟಿ ರೂಪಾಯಿಗಳ ವ್ಯವಹಾರ ಮಾಡಿದ್ದನು. ಹಾಗೂ ಅವನು ಚುನಾವಣೆ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಹಣ ತೆಗೆದುಕೊಂಡಿದ್ದನು.