ನೇಪಾಳದ ಲುಂಬಿನೀ ನಗರದವರೆಗೂ ರೈಲ್ವೇ ಹಾಗೂ ರಸ್ತೆ ನಿರ್ಮಿಸಲಿರುವ ಚೀನಾ !

ಚೀನಾದ ಈ ಪ್ರಯತ್ನ ಭಾರತಕ್ಕೆ ಅಪಾಯಕರ !

ಇಂತಹ ಘಟನೆಗಳಿಂದ ಭಾರತದ ವಿದೇಶಾಂಗ ನೀತಿಯು ಸತತವಾಗಿ ಸೋಲುತ್ತಿದೆ ಎಂದು ಸಿದ್ಧವಾಗುತ್ತದೆ. ಚೀನಾವು ನೆರೆ ರಾಷ್ಟ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವಾಗ ಭಾರತವು ಮತ್ತಷ್ಟು ಆಕ್ರಮಕವಾಗುವುದಿಲ್ಲ, ಎಂಬುದು ಚಿಂತಾಜನಕವಾಗಿದೆ !- ಸಂಪಾದಕರು 

ಕಾಠಮಾಂಡೂ (ನೇಪಾಳ) – ನೇಪಾಳದ ಲುಂಬಿನಿಯವರೆಗೂ ರೈಲು ಮಾರ್ಗ ಹಾಗೂ ರಸ್ತೆಯನ್ನು ತಯಾರಿಸುವುದಾಗಿ ಚೀನಾದ ವಿದೇಶಾಂಗ ಮಂತ್ರಿ ವಾಂಗ ಯೀರವರು ಘೋಷಿಸಿದ್ದಾರೆ.

‘ರಸ್ತೆ ಹಾಗೂ ರೈಲು ಮಾರ್ಗದಿಂದ ಎಲ್ಲಾ ದಿಕ್ಕುಗಳಲ್ಲಿ ಪರ್ವತಗಳಿಂದ ಕೂಡಿರುವ ನೇಪಾಳದೊಂದಿಗೆ ಜಗತ್ತಿನ ಸಂಪರ್ಕ ಹೆಚ್ಚುವುದು’, ಎಂದು ವಾಂಗ ಯೀರವರು ದಾವೆ ಮಾಡಿದ್ದಾರೆ. ಲುಂಬಿನೀ ಪ್ರದೇಶವು ನೇಪಾಳದ ದಕ್ಷಿಣ ಭಾಗದಲ್ಲಿದ್ದು ಭಾರತದ ಗಡಿಯಲ್ಲಿದೆ. ಭಾರತದ ಉತ್ತರಪ್ರದೇಶದಲ್ಲಿನ ಗೋರಖಪುರ ನಗರದಿಂದ ಈ ಭೂಭಾಗವು ಕೇವಲ ೯೫ ಕಿಮೀ ಅಂತರದಲ್ಲಿದೆ. ಮತ್ತೊಂದು ಕಡೆ ಮ್ಯಾನ್ಮಾರನಲ್ಲಿ ಕೂಡ ಹಿಂದೂ ಮಹಾಸಾಗರದವರೆಗೆ ಚೀನಾ ರೈಲು ಮಾರ್ಗ ತಯಾರಿಸುತ್ತಿದೆ.

‘ಸೌಥ ಚೈನಾ ಮಾರ್ನಿಂಗ ಪೋಸ್ಟ’ನಲ್ಲಿ ಬಂದಿರುವ ಸುದ್ಧಿಯಂತೆ, ೮೦೦ ಕೋಟಿ ಡಾಲರ (೬ ಲಕ್ಷ ೮೪೯ ಕೋಟಿ ರೂಪಾಯಿಗಳು) ಖರ್ಚು ಮಾಡಿ ದಕ್ಷಿಣ ಟಿಬೇಟನಿಂದ ಕಾಠಮಾಂಡೂವರೆಗೂ ಚೀನಾದ ಗಡಿಯ ಬಳಿ ರೈಲು ಮಾರ್ಗ ತಯಾರಿಸುವ ಯೋಜನೆ ಚೀನಾ ತಾಯರಿಸಿದೆ. ಇದರಿಂದ ನೇಪಾಳದ ಆರ್ಥಿಕವ್ಯವಸ್ಥೆಗೆ ಪ್ರಯೋಜನವಾದರೂ ಚೀನಾದ ‘ಉಪಕಾರದ’ ಋಣದ ಭಾರದಡಿಯಲ್ಲಿ ದಬ್ಬಿ ಹೋಗುವುದಂತು ನಿಶ್ಚಿತ.