ಆರ್ಥಿಕ ಅವ್ಯವಹಾರ ಕಾನೂನಿನ ಉಪಯೋಗ ಜನರನ್ನು ಕಾರಾಗೃಹಕ್ಕೆ ಅಟ್ಟಿಸಲು ಅಸ್ತ್ರವೆಂದು ಉಪಯೋಗಿಸಲು ಸಾಧ್ಯವಿಲ್ಲ !

ಜಾರಿ ನಿರ್ದೆಶನಾಲಯದ ಕಿವಿ ಹಿಂಡಿದ ಸರ್ವೋಚ್ಚ ನ್ಯಾಯಾಲಯ !

ನವ ದೆಹಲಿ – ಆರ್ಥಿಕ ಅವ್ಯವಹಾರ ಕಾನೂನನ್ನು ಅಸ್ತ್ರದ ಹಾಗೆ ಉಪಯೋಗಿಸಿ ಜನರನ್ನು ಕಾರಾಗೃಹದಲ್ಲಿ ಇರಿಸಲು ಸಾಧ್ಯವಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯ ಈಡಿಯ ಕಿವಿಹಿಂಡಿದೆ. ಜಾರ್ಖಂಡ್‌ನಲ್ಲಿನ ಉಷಾ ಮಾರ್ಟಿನ್ ಲಿಮಿಟೆಡ್ ಈ ಕಂಪನಿಯಿಂದ ಆರ್ಥಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿದ್ದ ಒಂದು ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯವು ಈ ಟಿಪ್ಪಣಿ ನೀಡಿದೆ.

‘ಈಡಿ’ಯಿಂದ ಆರ್ಥಿಕ ಅವ್ಯವಹಾರ (ನಿಯಂತ್ರಣ) ಕಾನೂನಿನ ಯದ್ವಾತದ್ವಾ ಉಪಯೋಗದಿಂದ ಈ ಕಾನೂನಿನ ಮಹತ್ವದ ಮೇಲೆ ಪರಿಣಾಮ ಬೀರುವುದು ಎಂದು ನ್ಯಾಯಾಲಯವು ಹೇಳಿದೆ. ಈಡಿಯ ಕಾನೂನನ್ನು ದುರ್ಬಲ ಮಾಡುತ್ತದೆ. ನೀವು ಈ ಕಾನೂನಿನ ಉಪಯೋಗ ೧೦ ಸಾವಿರ ಮತ್ತು ೧೦೦ ರೂಪಾಯಿಗಳ ಅವ್ಯವಹಾರಗಳಲ್ಲಿ ಮಾಡಿದರೆ, ಆಗ ಏನ ಸ್ಥಿತಿ ಆಗುವುದು ? ನೀವು ಲಕ್ಷಾಂತರ ಜನರನ್ನು ಕಾರಾಗೃಹಕ್ಕೆ ಅಟ್ಟಲು ಸಾಧ್ಯವಿಲ್ಲ ಎಂದು ಹೇಳಿತು.