ಹರಿದ್ವಾರ (ಉತ್ತರಾಖಂಡ) – ಇಲ್ಲಿ ೧೭ ರಿಂದ ೧೯ ಡಿಸೆಂಬರ ಈ ಕಾಲಾವಧಿಯಲ್ಲಿ ಹಿಂದೂ ಧರ್ಮ ಸಂಸತ್ತಿನ ಆಯೋಜನೆ ಮಾಡಲಾಗಿದೆ. ಜುನಾ ಆಖಾಡಾದ ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹನಂದ ಗಿರಿ ಇವರು ಇದರ ಆಯೋಜನೆ ಮಾಡಿದ್ದಾರೆ. ಈ ಧರ್ಮ ಸಂಸತ್ತಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂತರು, ಮಹಾಂತ ಮತ್ತು ಧರ್ಮಾಚಾರ್ಯರು ಉಪಸ್ಥಿತರಿರುವರು. ಈ ವಿಷಯವಾಗಿ ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹನಂದ ಗಿರಿ ಇವರು, ‘ಈ ಧರ್ಮ ಸಂಸತ್ತಿನ ಮುಖ್ಯ ಉದ್ದೇಶ ಸನಾತನ ಧರ್ಮವನ್ನು ಉಳಿಸುವುದಾಗಿದೆ. ಸಂಪೂರ್ಣ ಜಗತ್ತಿನಲ್ಲಿ ಹಿಂದೂಯೇತರರ ಸಂಖ್ಯೆ ಹೆಚ್ಚುತ್ತಿದೆ. ‘೨೦೨೯ ರಲ್ಲಿ ಭಾರತದ ಪ್ರಧಾನಿ ಹಿಂದೂಯೇತ ಇರುವುದು, ಎಂದು ಹೇಳಲಾಗುತ್ತಿದೆ. ಇದು ಎಲ್ಲಕ್ಕಿಂತ ಕೆಟ್ಟ ಪರಿಸ್ಥಿತಿ ಇರಬಹುದು. ಅದರಿಂದ ಹೇಗೆ ಪಾರಾಗುವುದು, ಇದರ ಬಗ್ಗೆ ಈ ಧರ್ಮ ಸಂಸತ್ತಿನಲ್ಲಿ ಚರ್ಚಿಸಲಾಗುವುದು. ಇಂದು ಜಗತ್ತಿನಲ್ಲಿ ಎಷ್ಟೆಲ್ಲಾ ಕಟ್ಟರವಾದಿಗಳ ಸಂಘಟನೆಗಳು ಇವೆಯೋ, ಅವರೆಲ್ಲರ ಗುರಿ ಭಾರತವೇ ಆಗಿದೆ ಎಂದು ಹೇಳಿದರು.