ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿಯ ಗಂಗಾ ಮತ್ತು ಯಮುನಾ ನದಿಗಳ ಸಂಗಮದಲ್ಲಿ 45 ಮೀಟರ್ ಆಳದಲ್ಲಿ ಸರಸ್ವತಿ ನದಿ ಅಸ್ತಿತ್ವದಲ್ಲಿದೆ, ಎಂದು ವಿಜ್ಞಾನಿಗಳು ‘ಇಲೆಕ್ಟ್ರೋಮ್ಯಾಗ್ನೆಟಿಕ್’ ಸಮೀಕ್ಷೆಯಿಂದ ಕಂಡುಹಿಡಿದಿದ್ದಾರೆ. ಈ ಸಮೀಕ್ಷೆಯನ್ನು ‘ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್’ ಮತ್ತು `ನ್ಯಾಶನಲ್ ಜಿಯೋಫಿಜಿಕಲ್ ರಿಸರ್ಚ್ ಇನ್‍ಸ್ಟಿಟ್ಯೂಟ್’ನ ವಿಜ್ಞಾನಿಗಳ `ಅಡ್ವಾನ್ಸಡ್ ಅರ್ಥ್ ಅಂಡ್ ಸ್ಪೇಸ್ ಸೈನ್ಸ್’ ಎಂಬ `ಜರ್ನಲ್’ನಲ್ಲಿ ಪ್ರಕಟಿಸಲಾಗಿದೆ. ಸರಸ್ವತಿ ನದಿಯು 12 ಸಾವಿರ ವರ್ಷಗಳ ಹಿಂದೆ ಪೃಥ್ವಿಯಿಂದ ಕಣ್ಮರೆಯಾಯಿತು ಎಂದು ಹೇಳಲಾಗುತ್ತದೆ. ಹಿಂದೂಗಳ ಧರ್ಮಗ್ರಂಥಗಳಿಗನುಸಾರ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಉಗಮಸ್ಥಾನವು ಹಿಮಾಲಯದಲ್ಲಿದೆ.
प्रयागराज में संगम के नीचे 45 Km लंबी और 12000 साल पुरानी ‘सरस्वती’ नदी: ऋग्वेद के लिखे पर वैज्ञानिकों के इलेक्ट्रोमैग्नेटिक सर्वे की मुहर#Sarasvati #Rigved #Prayagrajhttps://t.co/1vpzRsVDVh
— ऑपइंडिया (@OpIndia_in) December 12, 2021
1. ಪ್ರಸ್ತುತ ಭಾರತದಲ್ಲಿನ ನದಿಗಳ ನೀರನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇಂತಹ ಸಮಯದಲ್ಲಿ `ಹಿಮಾಲಯದಿಂದ ಮಾತ್ರವಲ್ಲ, ಭೂಗರ್ಭದಿಂದಲೂ ನೀರು ಸಿಗುತ್ತದೆಯೇ ?’ ಎಂಬ ವೈಜ್ಞಾನಿಕ ಸಂಶೋಧನೆ ನಡೆಸುತ್ತಿದ್ದರು. ಇದಕ್ಕಾಗಿ `ಥ್ರಿಡಿ ಮ್ಯಾಪಿಂಗ್’ ಮಾಡಲು `ಇಲೆಕ್ಟ್ರೋಮ್ಯಾಗ್ನೆಟಿಕ್’ ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು.
2. ಈ ಸಮೀಕ್ಷೆಯಿಂದ ಗಂಗಾ ಮತ್ತು ಯಮುನಾ ನದಿಯ ಕೆಳಭಾಗದಲ್ಲಿ ಅತಿಪ್ರಾಚೀನ ನದಿ ಅಸ್ತಿತ್ವದಲ್ಲಿದೆ ಎಂದು ತಿಳಿದುಬಂದಿದೆ. ಈ ನದಿಯ ಪ್ರವಾಹದ ಮೂಲ ಗಂಗಾ ಮತ್ತು ಯಮುನಾ ನದಿಯೊಂದಿಗೆ ಜೋಡಿಸಲ್ಪಟ್ಟಿದೆ. ಈ ಪ್ರಾಚೀನ ನದಿಯು 45 ಕಿಲೋಮೀಟರ್ ಉದ್ದ, 4 ಕಿಲೋಮೀಟರ್ ಅಗಲ ಮತ್ತು 15 ಮೀಟರ್ ಆಳವಿದೆ. ನದಿ ತುಂಬಿದಾಗ ಭೂಮಿಯ ಮೇಲಿನ 1 ಸಾವಿರದ 300 ರಿಂದ 2 ಸಾವಿರ ಚದರ ಕಿಲೋಮೀಟರ್‍ನಷ್ಟು ಭೂಭಾಗಕ್ಕೆ ನೀರನ್ನು ಸರಬರಾಜು ಮಾಡಬಹುದು. ಇದು ಗಂಗಾ ಮತ್ತು ಯಮುನಾ ನದಿಗಳ ನೀರಿನ ಮಟ್ಟವನ್ನು ಸಮತೋಲನಗೊಳಿಸುವ ಕಾರ್ಯವನ್ನೂ ಮಾಡುತ್ತಿದೆ ಎಂಬುದು ಗಮನಕ್ಕೆ ಬಂದಿತು.
3. ‘ನ್ಯಾಶನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‍ಸ್ಟಿಟ್ಯೂಟ್’ನ ನಿರ್ದೇಶಕರು, ಸರಸ್ವತಿ ನದಿಯು ಭೂಮಿಯ 10 ಮೀಟರ್ ಕೆಳಗೆ ಇದೆ ಮತ್ತು 10 ಸಾವಿರದಿಂದ 12 ಸಾವಿರ ವರ್ಷಗಳಷ್ಟು ಹಳೆಯದಾಗಿದೆ. ಈ ಬಗ್ಗೆ ಸರ್ವೆಯ ಕಾರ್ಯ ಇನ್ನೂ ನಡೆಯುತ್ತಿದೆ. ಇದುವರೆಗೆ `ಈ ನದಿ ಕಾನಪುರದತ್ತ ಹರಿಯುತ್ತಿರುವುದು’, ಗಮನಕ್ಕೆ ಬಂದಿದೆ ಎಂದು ಹೇಳಿದರು.
4. ಪುರಾತನ ನದಿಗಳ ಶೋಧಕ್ಕೆ ಕೇಂದ್ರ ಸರಕಾರ ಏಳು ಸದಸ್ಯರ ಆಯೋಗವನ್ನು ನೇಮಿಸಿತ್ತು. 2016 ರ ವರದಿಯನ್ನು ಸಲ್ಲಿಸಿತ್ತು. ಅದರಲ್ಲಿ ಪುರಾತನವಾದ ಸರಸ್ವತಿ ನದಿಯು ಭೂಮಿಯ ಅಡಿಯಲ್ಲಿ ಹರಿಯುತ್ತಿದೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. 2018 ರಲ್ಲಿ ಕೇಂದ್ರ ಸರಕಾರವು ರಾಜಸ್ಥಾನ ಮತ್ತು ಹರಿಯಾಣಾ ರಾಜ್ಯಗಳಲ್ಲಿ ಸರಸ್ವತಿ ನದಿಯನ್ನು ಪತ್ತೆ ಮಾಡಿತ್ತು. ಸರಸ್ವತಿ ನದಿಯು ಹಿಮಾಲಯದಲ್ಲಿ ಹುಟ್ಟಿ ಅರಬೀ ಸಮುದ್ರವನ್ನು ಸೇರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.