‘ಗ್ಲೋಬಲ್ ಟೈಮ್ಸ್’ನಿಂದ ಮತ್ತೊಮ್ಮೆ ಸಂರಕ್ಷಣಾ ತಜ್ಞ ಬಖ್ಮಾ ಚೆಲಾನಿ ಇವರ ಮೇಲೆ ಟೀಕೆ
ಭಾರತದ ರಕ್ಷಣಾ ತಜ್ಞರು ಮಾಡಿರುವ ದಾವೆಯ ನಂತರ ಚೀನಾಗೆ ಮೆಣಸಿನಕಾಯಿ ಉರಿ ತಾಗಿದಂತಾಗಿರುವ ಕಾರಣ ಚೀನಾ ಕೂಗಾಡುತ್ತಿದೆ, ಎಂಬುದೇ ಇದರಿಂದ ಸ್ಪಷ್ಟವಾಗುತ್ತದೆ ! ಆದ್ದರಿಂದ ‘ಈ ಅಪಘಾತದ ಹಿಂದೆ ಚೀನಾ ಇದೆ’, ಎಂದು ಯಾರಾದರೂ ಪದೇ ಪದೇ ಹೇಳುತ್ತಿದ್ದರೆ, ಅದು ತಪ್ಪು ಎಂದು ಹೇಗೆ ಹೇಳಲಾದೀತು ? ಎಂಬ ಪ್ರಶ್ನೆ ಉದ್ಭವಿಸುತ್ತದೆ !
ಬೀಜಿಂಗ್ (ಚೀನಾ) – ಭಾರತದ ಮೂರೂ ಸೈನ್ಯ ದಳಗಳ ಮುಖ್ಯಸ್ಥ ಬಿಪಿನ್ ರಾವತ್ ಇವರ ಮತ್ತು ಚೀನಾದ ಪ್ರಖರ ವಿರೋಧಿಯಾಗಿದ್ದ ತೈವಾನಿನ ಸೇನಾದಳದ ಮುಖ್ಯಸ್ಥ ಇವರ ಅಪಘಾತದಲ್ಲಿ ಸಾಮ್ಯತೆಯಿದೆ, ಎಂದು ಭಾರತದ ಸಂರಕ್ಷಣಾ ತಜ್ಞ ಬ್ರಹ್ಮ ಚೇಲಾನಿ ಇವರು ದಾವೆ ಮಾಡಿದ ನಂತರ ಚೀನಾದ ಸರಕಾರಿ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಟೀಕೆ ಮಾಡಿತ್ತು. ಅದರ ನಂತರ ಈ ಮುಖವಾಣಿ ಮತ್ತೊಮ್ಮೆ ಚೇಲಾನಿ ಅವರ ಮೇಲೆ ವಿಷ ಕಾರಿದೆ. ‘ಈ ರೀತಿಯ ಕಪಟ ದಾವೆಗಳಿಗೆ ಪ್ರೋತ್ಸಾಹ ನೀಡಿ ಚೇಲಾನಿಯವರು ಭಾರತೀಯ ಸೈನಿಕರ ಕೈಗಳಿಗೆ ರಕ್ತ ಬಳಿಯುತ್ತಿದ್ದಾರೆ’, ಎಂದು ಈ ದೈನಿಕದಲ್ಲಿ ಹೇಳಲಾಗಿದೆ.
ಗ್ಲೋಬಲ್ ಟೈಮ್ಸ್ “ಭಾರತದ ಹಿರಿಯ ಅಧಿಕಾರಿಗಳ ಮೃತ್ಯು ದುರದೃಷ್ಟಕರ. ಆದರೆ ಭಾರತದಲ್ಲಿನ ತಥಾಕಥಿತ ವಿದ್ವಾಂಸರಾದ ಬ್ರಹ್ಮ ಚೆಲಾನಿಯವರು ಚೀನಾ ಮತ್ತು ಭಾರತದ ಸಂಬಂಧದಲ್ಲಿ ಒತ್ತಡದ ವಾತಾವರಣ ನಿರ್ಮಾಣ ಮಾಡಲು ಪ್ರಅಯತ್ನಿಸುತ್ತಾ ಈ ದುರದೃಷ್ಟಕರ ಸಂಗತಿಯಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ. ಚೆಲಾನಿಯವರು ಭಾರತವನ್ನು ತಪ್ಪು ದಿಕ್ಕಿನಲ್ಲಿ ಕರೆದೊಯ್ಯುತ್ತಿದ್ದಾರೆ. ಚೆಲಾನಿ ಇವರಂತಹ ಜನರು ಭಾರತವನ್ನು ಹಿಂದಕ್ಕೆ ಎಳೆಯುತ್ತಾರೆ. ಚೆಲಾನಿ ಮತ್ತು ಅವರಂತಹ ಇತರ ಭಾರತೀಯರು ಗಮನದಲ್ಲಿಟ್ಟುಕೊಳ್ಳಬೇಕಾಗಿರುವುದೇನೆಂದರೆ, ಅವರ ಮುಖ್ಯಸ್ಥರನ್ನು ರಕ್ಷಿಸುವಲ್ಲಿ ವಿಫಲವಾಗಿದ್ದ ಪತನಗೊಂಡಿದ್ದ ಮಿಲಿಟರಿ ಹೆಲಿಕಾಪ್ಟರ್ ಭಾರತದ್ದೇ ಆಗಿತ್ತು. ಇಂತಹ ಅಪಘಾತವು ಅಪರೂಪವಾಗಿ ಸಂಭವಿಸುತ್ತದೆ. ಆದರೂ ಇಂತಹ ಘಟನೆಯು ಘಟಿಸಿದೆ ಎಂದರೆ ಚೀನಾ ಅಲ್ಲ, ಭಾರತವೇ ತನ್ನ ಶತ್ರು ತಾನೇ ಆಗಿದೆ. ಚೆಲಾನಿಯಂತಹ ಜನರು ಚೀನಾ ಭಾರತ ಸಂಬಂಧಗಳನ್ನು ಸುಧಾರಿಸುವಲ್ಲಿ ಯಾವ ಪಾತ್ರವನ್ನೂ ನಿರ್ವಹಿಸುವುದಿಲ್ಲ ಮತ್ತು ಪ್ರಗತಿಯಲ್ಲಿಯೂ ಯೋಗದಾನ ನೀಡುವುದಿಲ್ಲ. ತದ್ವಿರುದ್ಧ ಅವರು ಭಾರತವನ್ನೂ, ಭಾರತದ ನೆರೆಹೊರೆಯರನ್ನೂ ತೊಂದರೆಗೆ ಸಿಲುಕಿಸುತ್ತಿದ್ದಾರೆ.