ಚೀನಾದ ಕಂಪನಿಯಿಂದ ಆಮದು ಮಾಡಿಕೊಂಡ ವಸ್ತುಗಳು ಗುಣಮಟ್ಟ ಉತ್ತಮವಿಲ್ಲದ್ದರಿಂದ ಅರ್ಧ ದಾರಿಯಿಂದಲೇ ಹಿಂತಿರುಗಿಸಲಾಗಿದೆ
ಚೀನಾದ ಒಟ್ಟಾರೆ ವಸ್ತುಗಳ ಗುಣಮಟ್ಟ ಚೆನ್ನಾಗಿಲ್ಲದಿರುವ ಅನುಭವ ಜಗತ್ತಿನ ಎಲ್ಲಾ ದೇಶಗಳು ಇದುವರೆಗೆ ಅನುಭವಿಸಿವೆ. ಶ್ರೀಲಂಕಾ ಈ ರೀತಿಯ ವಸ್ತುಗಳನ್ನು ಚೀನಾಗೆ ಹಿಂದಿರುಗಿಸಿ ನೀಡಿದ ಉತ್ತರ ಇತರ ದೇಶಗಳಿಗೆ ಕಲಿಯುವಂತಿದೆ- ಸಂಪಾದಕರು
ಕೊಲಂಬೊ (ಶ್ರೀಲಂಕಾ) – ಚೀನಾದಲ್ಲಿ ಗೊಬ್ಬರ ತಯಾರಿಸುವ ಒಂದು ಕಂಪನಿಯಿಂದ ಖರೀದಿಸಲಾದ 20 ಸಾವಿರ ಟನ್ ಗೊಬ್ಬರವನ್ನು ಶ್ರೀಲಂಕಾ ಸರಕಾರ ಅದರ ಗುಣಮಟ್ಟ ಚೆನ್ನಾಗಿಲ್ಲದ್ದರಿಂದ ಅರ್ಧದಾರಿಯಿಂದಲೇ ಹಿಂತಿರುಗಿ ಕಳಿಸಿದೆ. ಆದ್ದರಿಂದ ಆಕ್ರೋಶಗೊಂಡ ಚೀನಾದ ಕಂಪನಿ ಶ್ರೀಲಂಕಾ ಸರಕಾರದ ವಿರುದ್ಧ ಸಿಂಗಾಪುರದ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದೆ.
#GTexclusive: Chinese firm Seawin Biotech has initiated international arbitration in Singapore after #SriLanka rejected its fertilizer shipment and efforts to reach a deal. https://t.co/lNHEzaZ9h2
— Global Times (@globaltimesnews) December 7, 2021