ಚೀನಾದಲ್ಲಿನ ಮಾಂಚೂ, ಭಾರತದ ಇಸ್ಲಾಮೀ ಆಡಳಿತ ಮತ್ತು ಹಿಂದೀ ರಾಷ್ಟ್ರವಾದ !

ಚೀನಾದ ಉತ್ತರ ದಿಕ್ಕಿನ ಮಾಂಚುರಿಯಾ ಪ್ರದೇಶದ ಮಾಂಚೂ ಜನರು 1644 ರಲ್ಲಿ ಸಂಪೂರ್ಣ ಚೀನಾದ ಮೇಲೆ ವರ್ಚಸ್ಸನ್ನು ಸ್ಥಾಪಿಸಿದರು. ಮಾಂಚೂಗಳು 1912 ರ ವರೆಗೆ ಚೀನಾವನ್ನು ಆಳಿದರು. ಚೀನಾದಲ್ಲಿ 1911 ರಲ್ಲಿ ಕ್ರಾಂತಿಯಾಯಿತು ಹಾಗೂ ಚಾಂಗ್-ಕೆ-ಶೇಕ್ ಈ ಚೀನೀ ನೇತಾರನು ಅನೇಕ ವರ್ಷಗಳ ನಂತರ ಆಡಳಿತಕ್ಕೆ ಬಂದನು. ಮಾವೋ-ತ್ಸೆ-ತುಂಗ್ ಇವನು 1949 ರಲ್ಲಿ ಅವನನ್ನು ಸೋಲಿಸಿದನು. ಅಂದಿನಿಂದ ಚೀನಾದಲ್ಲಿ ಕಮ್ಯುನಿಸ್ಟ್‍ರ ಆಡಳಿತವಿದೆ. ಚೀನಾ ರಾಷ್ಟ್ರವಾದವನ್ನು ತ್ಯಾಗ ಮಾಡದೆ ಮಾಂಚೂ ಜನರನ್ನೇ ಚೀನೀ ರಾಷ್ಟ್ರವಾದವನ್ನು ಸ್ವೀಕರಿಸುವ ಹಾಗೆ ಒತ್ತಡ ಹೇರಿತು. ಇನ್ನೊಂದೆಡೆ ಭಾರತದ ಹಿಂದೀ ರಾಷ್ಟ್ರವಾದಿಗಳನ್ನು ಮೊಗಲರ ಆಡಳಿತದ ಸ್ವಾಭಿಮಾನದ ಪ್ರತಿನಿಧಿತ್ವ ಮಾಡುವ ಇಸ್ಲಾಮೀ ಮನೋವೃತ್ತಿಯನ್ನು ಹೊಸಕಿ ಹಾಕಲು ಸಾಧ್ಯವಾಗದ ಕಾರಣ ಮೊದಲು ಅವರಿಗೆ ಸ್ವತಂತ್ರ ಸಾರ್ವಭೌಮ ರಾಷ್ಟ್ರ (ಪಾಕಿಸ್ತಾನ)ವನ್ನು ನಿರ್ಮಾಣ ಮಾಡಿಕೊಟ್ಟು ಅನಂತರ ತನಗೆ ಸ್ವತಂತ್ರವಾಗಲು ಸಾಧ್ಯವಾಯಿತು. ಇಂದು ಕೂಡ ಇಸ್ಲಾಮೀ ರಾಕ್ಷಸೀ ಮಹತ್ವಾಕಾಂಕ್ಷೆಯನ್ನು ಹೆಡೆಮುರಿ ಕಟ್ಟಲು ಹಿಂದೀ ರಾಜಕಾರಣಿಗಳಿಗೆ ಯಶಸ್ಸು ಸಿಕ್ಕಿಲ್ಲ. ಮಾಂಚೂ ಜನರ ಪ್ರತ್ಯೇಕ ರಾಷ್ಟ್ರವಾದ ಎಂಬಂತಹ ಸಮಸ್ಯೆ ಚೀನಾದ ಮುಂದಿಲ್ಲ. ಭಾರತದ ಮುಂದಿರುವ ಅತೀ ದೊಡ್ಡ ಪ್ರಶ್ನೆಯೆಂದರೆ ಇಸ್ಲಾಮೀ ಉಗ್ರವಾದದ ಭಸ್ಮಾಸುರನೆ ಆಗಿದೆ.

1. ಮಾಂಚೂ ಮತ್ತು ಮುಸಲ್ಮಾನರು 

‘ನಾವು ಇತರ ಚೀನಿಯರಿಗಿಂತ ಶ್ರೇಷ್ಠರಾಗಿದ್ದೇವೆ’, ಎನ್ನುವ ಅಭಿಮಾನವನ್ನು ಮಾಂಚೂಗಳು ಯಾವತ್ತೂ ಬಿಟ್ಟಿಲ್ಲ. ಆದರೂ `ಚೀನೀ ಸಂಸ್ಕೃತಿಯನ್ನು ಸ್ವೀಕರಿಸದೇ ಚೀನಾವನ್ನು ಆಳಲು ಸಾಧ್ಯವಿಲ್ಲ’,ಎಂಬುದನ್ನು ಅವರು ಗುರುತಿಸಿದರು ಮತ್ತು ಹಾಗೆಯೇ ನಿಲುವನ್ನು ಇಟ್ಟುಕೊಂಡರು. ಭಾರತದ ಮುಸಲ್ಮಾನರು ಮಾತ್ರ ಹಿಂದಿ ಸಂಸ್ಕೃತಿಯನ್ನು ನಾಶಗೊಳಿಸುವ ಉದ್ದೇಶವನ್ನು ಪ್ರಾರಂಭದಿಂದ ಇಂದಿನ ವರೆಗೆ ಗಟ್ಟಿಯಾಗಿ ಹೃದಯದಲ್ಲಿರಿಸಿಕೊಂಡಿದ್ದಾರೆ.

2. ಮೊಗಲರ ಕಾಲದಲ್ಲಿ ಭಾರತದಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣರ ಮೂರ್ತಿಗಳನ್ನು ಮಸೀದಿಯ ಮೆಟ್ಟಿಲಿಗೆ ಉಪಯೋಗಿಸಿದರು !

ಮಾಂಚೂ ಆಡಳಿತವು `ಕನ್ಫ್ಯೂಶಸ್’ ಎಂಬ ಚೀನೀ ವಿಚಾರವಾದಿಯ ಪದ್ಧತಿಯನ್ನು ಗೌರವಿಸಿತು. ಸಾಮ್ರಾಟನ ಹುದ್ದೆಯನ್ನು ಬಿಟ್ಟು ಇತರ ಯಾವುದೆ ಹುದ್ದೆಯಲ್ಲಿ ಗುಣಮಟ್ಟಕ್ಕನುಸಾರ ಹುದ್ದೆಯನ್ನು ನೀಡುವ ಅವಕಾಶವನ್ನು ಚೀನಿಯರಿಗೆ ನೀಡಲಾಯಿತು. ಆದರೆ ಭಾರತದಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣರ ಮೂರ್ತಿಗಳನ್ನು ಮಸೀದಿಯ ಮೆಟ್ಟಿಲಿಗೆ ಉಪಯೋಗಿಸಲಾಯಿತು. ಅಕ್ಬರನ ಕಾಲದಲ್ಲಿಯೂ ಹಿಂದೂಗಳಿಗೆ ದ್ವಿತೀಯ ದರ್ಜೆಯ ಸ್ಥಾನಮಾನವನ್ನೇ ಸ್ವೀಕರಿಸಬೇಕಾಯಿತು. `ಕನ್ಫ್ಯೂಶಸ್’ನ ಸಮಾಜವ್ಯವಸ್ಥೆಯಲ್ಲಿ ಅವರು ಬದಲಾವಣೆ ಮಾಡಲಿಲ್ಲ. ಸಮೃದ್ಧಿ ಯನ್ನು ತಂದರು. ಕಾಲಕ್ರಮೇಣ ಆಡಳಿತವು ದುರ್ಬಲವಾಯಿತು ಹಾಗೂ ಬ್ರಿಟಿಷರ ಧೂರ್ತವೃತ್ತಿಯ ಮುಂದೆ ಜೀವಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಎರಡು ವಿಷಯಗಳನ್ನು ಗಮನಿಸುವ ಹಾಗಿದೆ. ಅಂದರೆ ನಿರಂತರ 3 ಪೀಳಿಗೆಗಳಲ್ಲಿ ಮಾಂಚೂಗಳು ಚೀನಾದ ಮೇಲೆ ತಮ್ಮ ನಿಯಂತ್ರಣವನ್ನಿಟ್ಟುಕೊಂಡರು.

3. ಚೀನಾದ ಭಯದ ನೆರಳಿನಲ್ಲಿರುವ ಭಾರತ !

ಚೀನೀ ಸಮಾಜದಲ್ಲಿ 17 ನೆಯ ಶತಮಾನದಲ್ಲಿ ಅಂತರಿಕ ದೋಷವಿತ್ತು. ಆದ್ದರಿಂದ ಅದು ಪಾರತಂತ್ರ್ಯಕ್ಕೆ ಹೋಯಿತು; ಆದರೆ ಚೀನಾ ಆ ದೋಷವನ್ನು ದೂರ ಮಾಡಿ ಸ್ವತಂತ್ರವಾಗಿ ಜಾಗತಿಕ ಮಹಾಶಕ್ತಿಯಾಗುವ ದಿಕ್ಕಿಗೆ ಪ್ರಯಾಣ ಆರಂಭಿಸಿತು. ಚೀನಾದ ಸಮಾಜವ್ಯವಸ್ಥೆಯಲ್ಲಿ 350 ವರ್ಷಗಳ ಹಿಂದೆ ವ್ಯಾಪಾರಿ ಮತ್ತು ಸೈನ್ಯದಲ್ಲಿನ ಜನರಿಗೆ ಅತ್ಯಂತ ಕೀಳ್ಮಟ್ಟದ ಹಾಗೂ ಉಪೇಕ್ಷೆಯ ಸ್ಥಾನವಿತ್ತು. ಇವೆರಡೂ ವಿಷಯದಲ್ಲಿ ಇಂದು ಚೀನಾ ಭಾರತಕ್ಕಿಂತ ಮುಂದಿದೆ. ಇಂದಿನ ಚೀನಾ ಮಾವೋನನ್ನು ಹಿಂದೆ ಹಾಕಿ ಬಹಿರಂಗ ಅರ್ಥವ್ಯವಸ್ಥೆಯನ್ನು ದೇಶಹಿತಕ್ಕೆ ಅನುಕೂಲವಾಗುವಷ್ಟು ಪ್ರಮಾಣದಲ್ಲಿ ಸ್ವೀಕರಿಸಿ ವ್ಯಾಪಾರದಲ್ಲಿ ಅಮೇರಿಕಾದ ಸರಿಸಾಟಿಯಾಗುವ ಮಹತ್ವಾಕಾಂಕ್ಷೆ ಯನ್ನಿಟ್ಟುಕೊಂಡಿದೆ. ಚೀನಾ 1962 ರ ಯುದ್ಧದಲ್ಲಿ ಕಬಳಿಸಿದ 36 ಸಾವಿರ ಚದರ ಮೈಲು ಪ್ರದೇಶವನ್ನು ಹಿಂತಿರುಗಿ ಪಡೆಯುವ ಇಚ್ಛೆ ಕೂಡ ಭಾರತಕ್ಕಿಲ್ಲ. ಅಂದರೆ ಭಾರತಕ್ಕೆ ಚೀನಾದ ಸೇನಾ ವರ್ಚಸ್ಸಿನ ಭಯವಿದೆ.

4. ಕ್ರೈಸ್ತ ಧರ್ಮಪ್ರಸಾರಕರ ಸಂಚುಗಳು

ಚೀನಾದ ಪ್ರಚಂಡ ಜನಸಂಖ್ಯೆಯಿಂದಾಗಿ 7 ನೆಯ ಶತಮಾನದಿಂದಲೇ ಕ್ರೈಸ್ತ ಧರ್ಮಪ್ರಚಾರಕರ ದೃಷ್ಟಿ ಆ ದೇಶದ ಮೇಲಿತ್ತು. 17 ನೆಯ ಶತಮಾನದಲ್ಲಿ ಯುರೋಪ್‍ನ ವ್ಯಾಪಾರಿಗಳು ಬಂದರು. ಅವರಿಂದ ಪೃಥ್ವಿಯ ವಿಸ್ತೀರ್ಣ ಎಷ್ಟಿದೆ ಎಂಬುದು ಚೀನಾಕ್ಕೆ ತಿಳಿಯಿತು; ಆದರೆ ಎಲ್ಲ ವಿದೇಶಿ ವ್ಯಾಪಾರಿಗಳೊಂದಿಗೆ ಚೀನಾ ಅತ್ಯಂತ ನಿಷ್ಠೂರವಾಗಿ ವರ್ತಿಸುತ್ತಿತ್ತು ಹಾಗೂ ಅವರಿಗೆ ಕಾಲೂರಲು ಬಿಡುತ್ತಿರಲಿಲ್ಲ. 18 ನೆಯ ಶತಮಾನದಲ್ಲಿ ಆಂಗ್ಲರು ಭಾರತದಲ್ಲಿ ನಿರ್ಮಾಣವಾಗುವ ಅಫೂವಿನ ಬೆಳೆಯನ್ನು ಚೀನಾದಲ್ಲಿ ಮಾರಾಟ ಮಾಡಲು ಆರಂಭ ಮಾಡಿದರು. 19 ನೆಯ ಶತಮಾನದಲ್ಲಿ ಸಂಪೂರ್ಣ ಚೀನಾ ಅಫೂವಿನ ಆಧೀನ ವಾಯಿತು. ಬ್ರಿಟಿಷ ವ್ಯಾಪಾರಿಗಳನ್ನು ಹಿಡಿದು ಅವರಲ್ಲಿದ್ದ ಅಫೂವನ್ನು ಜಪ್ತಿ ಮಾಡಿ ಅದನ್ನು ಸುಟ್ಟು ಚೀನೀ ನಾಗರಿಕರ ಅವನತಿಯನ್ನು ತಡೆಯಲು ಮಾಂಚೂ ಸರಕಾರ ಪ್ರಯತ್ನಿಸಿತು. ಅದರಿಂದ 1839 ರಿಂದ 42 ರ ಕಾಲದಲ್ಲಿ ಬ್ರಿಟನ್ ವಿರುದ್ಧ

ಚೀನಾ, ಹೀಗೆ ಮೊದಲ ಅಫೂ ಯುದ್ಧವಾಗಿ ಚೀನಾ ಸೋತು ಹೋಯಿತು. ಪರಿಣಾಮವಾಗಿ ದೊಡ್ಡ ಪ್ರಮಾಣದಲ್ಲಿ ಚೀನಾದ ಅಂತರಿಕ ಮಾರುಕಟ್ಟೆ ಬ್ರಿಟಿಷರಿಗೆ ತೆರೆಯಲ್ಪಟ್ಟಿತು. ಕ್ರೈಸ್ತ ಧರ್ಮಪ್ರಸಾರಕರ ಉತ್ತೇಜನದಿಂದ 20 ವರ್ಷಗಳಲ್ಲಿ ಎರಡನೆಯ ‘ಅಫೂ ಯುದ್ಧ’ವಾಯಿತು. ಪುನಃ ಚೀನಾ ಸೋತು ಹೋಯಿತು. ಕ್ರೈಸ್ತ ಧರ್ಮಪ್ರಸಾರದ ಮೇಲಿನ ದಿಗ್ಭಂಧನವನ್ನು ತೆರವುಗೊಳಿಸಲಾಯಿತು. ಅದಕ್ಕಿಂತ ಭಯಂಕರವೆಂದರೆ, ಚೀನಾಕ್ಕೆ ಬ್ರಿಟನ್‍ನ ಜೊತೆಗೆ ಫ್ರಾನ್ಸ್, ಅಮೇರಿಕಾ, ರಷ್ಯಾ ಇತ್ಯಾದಿ ಅನೇಕ ರಾಷ್ಟ್ರಗಳಿಗೆ ತನ್ನ ಭೂಭಾಗವನ್ನು ವಿಭಜಿಸಿ ಕೊಡಬೇಕಾಯಿತು. ಅಲ್ಲಿ ಈ ವಿದೇಶಿ ಆಡಳಿತದವರು ತಮ್ಮದೇ ನ್ಯಾಯವ್ಯವಸ್ಥೆಯನ್ನು ಸ್ಥಾಪಿಸಿದರು. ಚೀನಾದ ಸಾರ್ವಭೌಮತ್ವವು ಅತ್ಯಂತ ಸಂಕುಚಿತವಾಯಿತು.

5. ‘ಹಿಂದಿ ರಾಷ್ಟ್ರವಾದ’ದ ಅಫೂ !

ಚೀನಾ ಅದರ ಸಾಮಥ್ರ್ಯವನ್ನು ಇಂದು ಪುನಃಗಳಿಸಿದೆ. ಸಂಪೂರ್ಣ ಯುರೋಪ್ ಚೀನಾದ ವಿರುದ್ಧ ಸಂಚು ರೂಪಿಸುತ್ತಿತ್ತು. ಅದನ್ನು ಸಹಿಸಿಕೊಂಡು ಅದು ಉಳಿಯಿತು. ಬ್ರಿಟನ್ ಎರಡನೆಯ ಯುರೋಪ್ ರಾಷ್ಟ್ರಗಳಿಗೆ ತನ್ನಲ್ಲಿ ಹಸ್ತಕ್ಷೇಪ ಮಾಡಲು ಬಿಡಲಿಲ್ಲ; ಆದರೆ ಬ್ರಿಟನ್‍ನಷ್ಟೆ ಇಸ್ಲಾಮೀ ಮಾನಸಿಕತೆಯ ಅಪಾಯವೂ ಇತ್ತು. ಅದರ ಕಡೆಗೆ ದುರ್ಲಕ್ಷವಾಗಬೇಕೆಂದು ಬ್ರಿಟಿಷರು ಸ್ಥಾಪಿಸಿದ ಕಾಂಗ್ರೆಸ್ `ಹಿಂದೀ ರಾಷ್ಟ್ರವಾದ’ಕ್ಕೆ ಕುಡಿಸಿದ ಅಫೂವಿನ ಅಮಲು ಇನ್ನೂ ಇಳಿದಿಲ್ಲ. ಸರಾಯಿಯ ಗುತ್ತಿಗೆಯ ಮುಂದೆ ಪ್ರತಿಭಟನೆ ಮಾಡುವ ಕಾರ್ಯಕ್ರಮವನ್ನು ನಮಗೆ ಕೊಡಲಾಯಿತು. ಅದನ್ನು ಮಾಡಿ ನಾವು ದೇಶಭಕ್ತರೆಂದು ಸ್ವಾತಂತ್ರ್ಯೋತ್ತರ ಕಾಲದಲ್ಲಿ `ನಿವೃತ್ತಿ ವೇತನ’ ಪಡೆಯಲು ಮುಕ್ತರಾದೆವು.

6. ಚೀನಾದ ಕ್ರೈಸ್ತ ಮಿಶನರಿಗಳಿಗೆ ಸೈನ್ಯ ಸಂಘಟನೆಯಿಂದ ವಿರೋಧ

ಭಾರತದಲ್ಲಿ 1857 ರ ಸ್ವಾತಂತ್ರ್ಯಸಂಗ್ರಾಮ ನಡೆಯಿತು. ಚೀನಾದಲ್ಲಿ 1850 ರಿಂದ 1864 ಈ ಅವಧಿಯಲ್ಲಿ ನಡೆದಿರುವ ಬಂಡಾಯವು `ತಾಯಪಿಂಗ್ ಬಂಡಾಯ’ವೆಂದೆ ಪ್ರಸಿದ್ಧವಾಗಿದೆ. ಚೀನಾದಲ್ಲಿ ಸ್ವತಃ ಕ್ರೈಸ್ತನಾಗಿರುವ ಹಾಗೂ ‘ನನಗೆ ಈಶ್ವರೀ ಸಾಕ್ಷಾತ್ಕಾರವಾಗಿದೆ’, ಎಂದು ತಿಳಿದುಕೊಂಡಿರುವ ಹೂಂಗ್ ಚುಆನ್ ಎಂಬ ವಿದ್ಯಾವಂತ ಯುವಕನು ಈ ಬಂಡಾಯದ ನೇತೃತ್ವವನ್ನು ವಹಿಸಿದನು. ಸ್ವಲ್ಪ ಸಮಯದಲ್ಲಿಯೆ ಅವನು 30 ಸಾವಿರ ಯುವಕರ ಸಂಘಟನೆಯನ್ನು ಮಾಡಿದನು. ಕ್ರೈಸ್ತ ಧರ್ಮವನ್ನು ‘ಮುಖ್ಯ ಧರ್ಮ’ವೆಂದು ಘೋಷಿಸಿದನು. ಬೌದ್ಧ ಧರ್ಮೀಯರ ದೇವಸ್ಥಾನಗಳನ್ನು ಕೆಡವಿದನು. ಯಾರು ಕ್ರೈಸ್ತರಾಗಲಿಲ್ಲವೋ, ಅವರನ್ನು ಅಪಾರವಾಗಿ ಹಿಂಸಿಸಿದನು ಚೀನೀಯರ ಕುಟುಂಬ ವ್ಯವಸ್ಥೆಯನ್ನು ಕೆಡಿಸಿದನು. ಭೂಮಿ, ಅನ್ನ ಮತ್ತು ಬಟ್ಟೆಯ ಮೇಲಿನ ಖಾಸಗಿ ಮಾಲಕತ್ವವನ್ನು ನಷ್ಟಗೊಳಿಸಿದನು. ಕ್ರೈಸ್ತ ಸಾಮ್ರಾಜ್ಯವನ್ನು ಸ್ಥಾಪಿಸುವ ಉದ್ದೇಶವಿತ್ತು; ಆದರೆ ಆ ಸಮಯದಲ್ಲಿ ಬ್ರಿಟನ್‍ಗೆ ಧರ್ಮಪ್ರಸಾರಕ್ಕಿಂತ ವ್ಯಾಪಾರವೇ ಶ್ರೇಷ್ಠವೆಂದು ಅನಿಸಿತು. ದುರ್ಬಲ ಮಾಂಚೂ ಸರಕಾರವನ್ನು ಉಳಿಸಿಕೊಂಡು ಹೆಚ್ಚೆಚ್ಚು ವ್ಯಾಪಾರವನ್ನು ಬೆಳೆಸುವುದೇ ಯೋಗ್ಯವೆಂದು ಬ್ರಿಟನ್‍ಗೆ ಅನಿಸಿರುವ ಕಾರಣ ತಾಯಪಿಂಗ್‍ನ ಬಂಡಾಯಕ್ಕೆ ಬೆಂಬಲ ಸಿಗಲಿಲ್ಲ. ಆದರೂ 14 ವರ್ಷ ದಕ್ಷಿಣ ಮತ್ತು ಮಧ್ಯ ಚೀನಾದಲ್ಲಿ ಹುಂಗ್ ಚುಆನ್ ಆಡಳಿತವನ್ನು ನಡೆಸುತ್ತಿದ್ದನು, ಎಂಬುದನ್ನು ಮರೆಯುವ ಹಾಗಿಲ್ಲ. ತಾಯಪಿಂಗ್‍ನ ಬಂಡಾಯ ಯಶಸ್ವಿಯಾಗಲಿಲ್ಲ; ಆದರೆ ಅದರಿಂದ ‘ಚೀನೀ ರಾಷ್ಟ್ರವಾದ’ದ ಉದಯವಾಯಿತು. ಮಾಂಚೂ ಸರಕಾರ ತಾಯಪಿಂಗ್ ಸೇನೆಯನ್ನು ಸೋಲಿಸಲು ಸಾಧ್ಯವಾಗ ದಿರುವಾಗ ಚೀನಾದ ಅನೇಕ ಸ್ಥಳಗಳಲ್ಲಿ ಪ್ರಾದೇಶಿಕ ಸೇನೆಗಳು ಹುಟ್ಟಿಕೊಂಡವು. ಇದೇ ಸಮಯದಲ್ಲಿ ಝೇಂಗ್ ಕುಓ ಮತ್ತು ಲೀ ಹ್ಯಾಂಗ್ ಚಾಂಗ್ ಈ ಇಬ್ಬರು ವೀರ ಪುರುಷರು ಮುಂದೆ ಬಂದರು. ಚೀನೀಯರ ಸೈನಿಕೀಕರಣವನ್ನು ಅವರು ಬೆಂಬಲಿಸಿ ದರು. `ಸೈನ್ಯವನ್ನು ಸೇರುವುದು ಅವಮಾನವಾಗಿರದೆ ದೇಶರಕ್ಷಣೆಗಾಗಿ ಅತ್ಯಂತ ಆವಶ್ಯಕ ಹಾಗೂ ಎಲ್ಲಕ್ಕಿಂತ ಪ್ರತಿಷ್ಠೆಯದ್ದಾಗಿದೆ’, ಎಂದು ಅವರು ವಿಶ್ವಾಸವನ್ನು ಮೂಡಿಸಿದರು. ಅದೇ ರೀತಿ ಅವರು ಪಾಶ್ಚಾತ್ಯ ಭೌತಿಕ ವಿದ್ಯೆಗಳನ್ನು ಚೀನಾದಲ್ಲಿ ಪ್ರಸಾರ ಮಾಡಲು ಪ್ರಾರಂಭಿಸಿದರು. `ನಾವು ಎಷ್ಟು ಆಧುನಿಕ ಹಾಗೂ ವಿಜ್ಞಾನನಿಷ್ಠರಾಗುವೆವೊ, ಅಷ್ಟು ಕ್ರೈಸ್ತ ಧರ್ಮದ ಪ್ರಭಾವ ಕಡಿಮೆಯಾಗುವುದು ಹಾಗೂ `ಕನ್ಫ್ಯುಶಿಯಸ್’ ಧರ್ಮ ಶಾಶ್ವತವಾಗಿ ಉಳಿಯುವುದು’, ಎನ್ನುವ ಅವನ ವಿಚಾರವನ್ನು ಮುಂದಿಟ್ಟನು ಹಾಗೂ ಜನರಿಗೆ ಅದು ಇಷ್ಟವಾಯಿತು. ಪಾಶ್ಚಾತ್ಯ ವಿದ್ಯೆಯ ಶಾಲೆಗಳು ತೆರೆದವು. ಜನರು ಸೈನ್ಯದಲ್ಲಿ ಸೇರಿಕೊಳ್ಳಲು ಸ್ಪರ್ಧೆ ನಡೆಸಿದರು.

7. ಪರಸ್ಪರರ ಜಗಳದಿಂದಾಗಿ ಮರಾಠರ ರಾಜ್ಯಗಳು ಮುಳುಗಿದವು !

ಚೀನಾ ಸೈನಿಕೀಕರಣವನ್ನು ಆರಂಭಿಸಿರುವಾಗ ಭಾರತದಲ್ಲಿ ಮಾತ್ರ 19 ನೆಯ ಶತಮಾನದ ಪ್ರಾರಂಭದಲ್ಲಿ ಆಂಗ್ಲರು ಮರಾಠರಿಂದ ಭಾರತದ ನಿಯಂತ್ರಣವನ್ನು ತಮ್ಮಲ್ಲಿ ತೆಗೆದುಕೊಂಡರು. ಮರಾಠರು ಮೊಗಲರನ್ನು ಸೋಲಿಸಿದ್ದರು. ದೇಹಲಿಯ ಮೇಲೆ ಪ್ರಖ್ಯಾತ ಬಾದಶಹಾನ ಹೆಸರಿನಲ್ಲಿ ಮರಾಠರೇ ಆಡಳಿತ ನಡೆಸುತ್ತಿದ್ದರು. ಆದರೂ ಪೇಶವಾಯೀ ದುರ್ಬಲವಾಯಿತು. ಮೇಲಿನ ಹಂತದಲ್ಲಿದ್ದ ಮರಾಠ ಸುಭೇದಾರನಲ್ಲಿ ಪ್ರಾಮಾಣಿಕತೆ ಉಳಿಯಲಿಲ್ಲ. ಪರಸ್ಪರ ಜಗಳದಲ್ಲಿ ಮರಾಠರು ಆಂಗ್ಲರಿಗೆ ಹಸ್ತಕ್ಷೇಪ ಮಾಡಲು ಬಿಟ್ಟರು. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ಆಂಗ್ಲರ ಶಸ್ತ್ರ ಮತ್ತು ಯುದ್ಧತಂತ್ರ ನಮಗೆ ದುಬಾರಿಯಾಯಿತು, ಎಂಬುದನ್ನು ಮರಾಠರು ಗುರುತಿಸಲಿಲ್ಲ. ಅದರ ಪರಿಣಾಮವೆಂದು ರಾಜ್ಯ ಹೋಯಿತು.

8. ಬಲಿಷ್ಠ ಚೀನಾ ಮತ್ತು ಇಸ್ಲಾಮೀ ಪ್ರವೃತ್ತಿಯ ಮುಂದೆ ಮಂಡಿಯೂರಿದ ಭಾರತ !

ಎಲ್ಲೆಡೆಯ ಅಸಂತೋಷದಿಂದ ಚೀನಾದಲ್ಲಿ 1911 ರಲ್ಲಿ ಕ್ರಾಂತಿ ಆಯಿತು. ಚೀನೀ, ಮಾಂಚೂ, ಮಂಗೋಲ, ಟಿಬೇಟಿಯರು ಮತ್ತು ಇತರ ಪ್ರಾಂತದವರು ಒಟ್ಟಾಗಿ ಒಂದು ರಾಷ್ಟ್ರವನ್ನು ಸ್ಥಾಪಿಸಲು ನಿರ್ಧರಿಸಿದರು. ಚೀನಾವನ್ನು 250 ವರ್ಷ ಆಡಳಿತ ನಡೆಸಿಯೂ ಮಾಂಚೂಗಳಿಗೆ ಚೀನೀ ರಾಷ್ಟ್ರವಾದವನ್ನು ಸ್ವೀಕರಿಸಬೇಕಾಯಿತು. ಮಾಂಚೂ-ಚೀನೀ ಐಕ್ಯಕ್ಕಾಗಿ ಚೀನಿಯರಿಗೆ ಅವರ ಚೀನಿತ್ವವನ್ನು ಬಿಡುವ ಪ್ರಮೇಯ ಬರಲಿಲ್ಲ.

ಮಾಂಚೂ ಇಸ್ಲಾಮ್‍ನಷ್ಟು ದುಷ್ಟರಾಗಿರಲಿಲ್ಲ, ಆದರೂ ‘ಮಾಂಚೂ ಆಡಳಿತದಿಂದ ಚೀನೀಯರ ಜೀವನದಲ್ಲಿ ಯಾವುದೇ ಸುಧಾರಣೆಯಾಗಲಿಕ್ಕಿಲ್ಲ’, ಎಂದು ಚೀನೀಯರಿಗೆ ಅನಿಸಿತು. ಆ ಮೇಲೆ ‘ಇಷ್ಟು ಶತಮಾನಗಳ ಅನುಭವದ ನಂತರವೂ ಇಸ್ಲಾಮೀ ಪ್ರವೃತ್ತಿಯು ಹೊಸ ರಾಷ್ಟ್ರವಾದವನ್ನು ಆನಂದಿದಂದ ಸ್ವೀಕರಿಸಬಹುದು’, ಎಂದು ಹಿಂದೂಗಳಿಗೆ ಏಕೆ ಅನಿಸಿತು. 19 ನೆ ಶತಮಾನದ ಉತ್ತರಾರ್ಧದಲ್ಲಿ ಚೀನಾದಲ್ಲಿ ವ್ಯಾಪಾರಿಗಳ ಹೊಸ ಗುಂಪು ಉದಯವಾಯಿತು. ಪಾಶ್ಚಾತ್ಯ ಶಿಕ್ಷಣದಿಂದ ಪ್ರಭಾವಿತರಾದ ಈ ವರ್ಗದವರಿಗೆ ಮಾಂಚೂ ಆಡಳಿತದ ಬಗ್ಗೆ ತಿರಸ್ಕಾರವೆನಿಸುತ್ತಿತ್ತು. ಭಾರತದಲ್ಲಿ ಪಾಶ್ಚಾತ್ಯ ಶಿಕ್ಷಣದಿಂದ ಪ್ರಭಾವಿತ ರಾದ ಹಿಂದುತ್ವದ ವಿಷಯದಲ್ಲಿ ಕೀಳರಿಮೆ ಮತ್ತು ಇಸ್ಲಾಮ್‍ನ ವಿಷಯದಲ್ಲಿ ಭಯವೆನಿಸಲು ಆರಂಭವಾಯಿತು.ಚೀನಾದಲ್ಲಿ ನಿರ್ದಿಷ್ಠ ವಿದ್ಯಾವಂತ ಯುವಕರು ಸೈನ್ಯದಲ್ಲಿ ಸೇರಿಕೊಂಡರು. ರಾಜಕೀಯ ಜಾಗೃತಿಗಾಗಿ ರಾಜಕಾರಣದಲ್ಲಿ ನುಗ್ಗಿದರು. ‘ಯುರೋಪ್‍ಗೆ ಮಾತ್ರವಲ್ಲ, ಜಪಾನನ್ನು ಕೂಡ ಎದುರಿಸುವಷ್ಟು ಬಲಿಷ್ಟವಾದ ಚೀನಾವನ್ನು ತರಲಾಗುವುದು’, ಎಂದು ಪಣತೊಡಲಾಯಿತು. ‘ನಮ್ಮಲ್ಲಿ ಬಲಿಷ್ಠ ಭಾರತವಾಗಲಿ’, ಎಂಬ ಹಾಡನ್ನು ಬರೆಯಲಾಯಿತು; ಆದರೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ಉತ್ತರವನ್ನು ಹುಡುಕಲು ಸಾಧ್ಯವಾಗಿಲ್ಲ.’ (ಆಧಾರ : ಮಾಸಿಕ ‘ಧರ್ಮಭಾಸ್ಕರ’)