ಬ್ರಿಟನ್‌ನ ಶಾಲೆಯ ತರಗತಿಯಲ್ಲಿ ನಮಾಜ ಪಠಣಕ್ಕೆ ಅನುಮತಿ ನೀಡಲಿಲ್ಲವೆಂದು ವಿದ್ಯಾರ್ಥಿಗಳಿಂದ ಚಳಿಯಲ್ಲಿ ಮೈದಾನದಲ್ಲಿ ನಮಾಜ ಪಠಣ !

ಇಸ್ಲಾಮಿಕ್ ಸಂಘಟನೆಯಿಂದ ಆಕ್ರೋಶ; ಶಾಲೆಯಿಂದ ಕ್ಷಮೆಯಾಚನೆ

ಎಲ್ಲಿ ಸ್ವಂತ ಧರ್ಮವನ್ನು ಎಲ್ಲಿದ್ದರೂ, ಪಾಲಿಸುವ ಮುಸಲ್ಮಾನ ವಿದ್ಯಾರ್ಥಿಗಳು, ಹಾಗೂ ಎಲ್ಲಿ ಕಾನ್ವೆಂಟ್ ಸ್ಕೂಲ್‌ಗಳಲ್ಲಿ ಬಳೆ, ಕುಂಕುಮ ತೆಗೆಯಲು ಹೇಳಿದರೆ ಮತ್ತು ಯೇಸುವಿನ ಪ್ರಾರ್ಥನೆ ಮಾಡಲು ಹೇಳಿದರೆ ಅದೇ ರೀತಿ ವರ್ತಿಸುವ ಭಾರತೀಯ ಹಿಂದೂಗಳು !

ಲಂಡನ(ಬ್ರಿಟನ) – ಬ್ರಿಟನ್‌ನ ಗ್ರೇಟರ್ ಮ್ಯಾಂಚೆಸ್ಟರ್ ನ ಒಲ್ಡ್ಡಮ್ ಅಕಾಡೆಮಿ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ನಮಾಜ ಪಠಣಕ್ಕೆ ಅನುಮತಿ ನೀಡದ ಕಾರಣ ವಿದ್ಯಾರ್ಥಿಗಳು ಚಳಿಯಲ್ಲಿ ಮೈದಾನದಲ್ಲಿ ನಮಾಜ ಪಠಣ ಮಾಡಿದರು. ಈ ನಮಾಜ ಪಠಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಇಸ್ಲಾಮಿಕ್ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ, ನಂತರ ಶಾಲೆ ಕ್ಷಮೆಯಾಚಿಸಿದೆ.

೧. ಈ ವಿದ್ಯಾರ್ಥಿಗಳು, ಊಟದ ಬಿಡುವಿನ ಅವಧಿಯಲ್ಲಿ ನಾವು ತರಗತಿಯಲ್ಲಿ ನಮಾಜ ಪಠಣ ಮಾಡಲು ಪ್ರಯತ್ನಿಸಿದೆವು ಆಗ ಶಿಕ್ಷಕರು ನಮಗೆ ಹೊರಗೆ ನಮಾಜ ಪಠಿಸಲು ಹೇಳಿದ್ದರಿಂದ ನಾವು ಹೊರಗೆ ಹೋದೆವು ಎಂದು ಹೇಳಿದರು. ಇನ್ನೊಬ್ಬ ವಿದ್ಯಾರ್ಥಿಯು, ನಮಗೆ ಕೊಠಡಿಯಲ್ಲಿ ನಮಾಜ ಪಠಣಕ್ಕೆ ಅನುಮತಿ ನೀಡಲಿಲ್ಲ ಎಂದು ಹೇಳಿದನು.

೨. ಶಾಲೆಯು ಸ್ಪಷ್ಟೀಕರಣ ನೀಡುತ್ತಾ, ನೆರೆಯಿಂದ ಶಾಲೆಯ ೧೫ ಕೊಠಡಿಯಲ್ಲಿ ನೀರು ಬಂದಿದ್ದರಿಂದ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ನಮಾಜ ಪಠಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದೆ.