ಭರತಪುರ (ರಾಜಸ್ಥಾನ) ಇಲ್ಲಿಯ ಮಹಾವಿದ್ಯಾಲಯದ ಯುವತಿಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ

ಠಾಣೆಯ ಅಧಿಕಾರಿಯಿಂದ ದೂರನ್ನು ನೊಂದಾಯಿಸಲು ನಿರಾಕರಣೆ : ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರನ್ನು ಪೊಲೀಸ್ ಠಾಣೆಯಿಂದ ಹೊರದಬ್ಬಿದ ಪೊಲೀಸರು!

  • ಕಾಂಗ್ರೆಸ್‌ನ ರಾಜ್ಯಗಳಲ್ಲಿ ಅಸುರಕ್ಷಿತ ಮಹಿಳೆಯರು !
  • ದೂರನ್ನು ದಾಖಲಿಸಲು ನಿರಾಕರಿಸಿದ ಪೊಲೀಸರನ್ನು ನೌಕರಿಯಿಂದ ಶಾಶ್ವತವಾಗಿ ತೆಗೆದುಹಾಕಿ ಅವರನ್ನು ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಕಾರಾಗೃಹಕ್ಕೆ ಅಟ್ಟಬೇಕು !

ಭರತಪುರ (ರಾಜಸ್ಥಾನ) – ಇಲ್ಲಿಯ ಒಂದು ಮಹಾವಿದ್ಯಾಲಯದ ಪ್ರವೇಶದ್ವಾರದಿಂದ ವಿದ್ಯಾರ್ಥಿನಿಯನ್ನು ಅಪಹರಿಸಿ ಆಕೆಯನ್ನು ಕಾಡಿಗೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕರಿಸಿದ ಘಟನೆಯಾಗಿದೆ. ಇದರ ವಿರುದ್ಧ ದೂರು ದಾಖಲಿಸಲು ಹೋಗಿದ್ದ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರ ದೂರನ್ನು ನೊಂದಾಯಿಸಿಕೊಳ್ಳದೇ ಪೊಲೀಸ್ ಅಧಿಕಾರಿಗಳು ಅವರನ್ನು ಹೊರಗೆ ದೂಡಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಅಧಿಕಾರಿ ದೇವೇಂದ್ರ ಕುಮಾರ ವಿಷ್ಣೋಯಿ ಇವರಲ್ಲಿ ದೂರು ನೀಡಿದ ನಂತರ ಠಾಣೆಯ ಅಧಿಕಾರಿಯನ್ನು ಅಮಾನತು ಮಾಡಲಾಯಿತು. ಜೊತೆಗೆ ಬಲಾತ್ಕಾರದ ಘಟನೆಯ ವಿಚಾರಣೆ ನಡೆಸುವಂತೆ ಉಪ ಅಧೀಕ್ಷಕರಿಗೆ ಆದೇಶ ನೀಡಲಾಗಿದೆ.