ಹಿಂದೂ ಮಹಾಸಾಗರದಲ್ಲಿ ಚೀನಾದ ಯುದ್ಧ ನೌಕೆಗಳ ಮೇಲೆ ನೌಕಾದಳದ ನಿಗಾ ! – ನೌಕಾದಳ ಮುಖ್ಯಸ್ಥ ಆರ್. ಹರಿಕುಮಾರ

ನವ ದೆಹಲಿ – ಲಡಾಖಿನಲ್ಲಿ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಚೀನಾದ ಸೈನ್ಯದೊಂದಿಗೆ ಸಂಘರ್ಷ ಮತ್ತು ಒತ್ತಡದ ಘಟನೆಯ ಬಳಿಕ ಹಿಂದೂ ಮಹಾಸಾಗರದಲ್ಲಿ ಭಾರತದ ನೌಕಾದಳವು ಸನ್ನದ್ಧವಾಗಿದೆ. ಚೀನಾದ ಪ್ರತಿಯೊಂದು ನೌಕೆಯ ಮೇಲೆ ನಿಗಾ ಇಡಲಾಗಿದೆ ಎಂದು ನೂತನವಾಗಿ ಆಯ್ಕೆಯಾಗಿರುವ ಭಾರತದ ನೌಕಾದಳಮುಖ್ಯಸ್ಥ ಆಡಮಿರಲ ಆರ್. ಹರಿಕುಮಾರವರು ಮಾಹಿತಿಯನ್ನು ನೀಡಿದರು. ಅವರು ಡಿಸಂಬರ್ 4 ರಂದು `ನೌಕಾದಳ ದಿನ’ದ ನಿಮಿತ್ತ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಅಡಮಿರಲ ಹರಿಕುಮಾರರವರು ಮಾತನಾಡುತ್ತಾ, `ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಒತ್ತಡವಿತ್ತು ಆಗ ನಾವು ಹಿಂದೂ ಮಹಾಸಾಗರ ಕ್ಷೇತ್ರದಲ್ಲಿ ಯುದ್ಧನೌಕೆಯನ್ನು ನೇಮಕ ಮಾಡಿದ್ದೆವು. ಪರಿಸ್ಥಿತಿ ಹದಗೆಟ್ಟರೆ ಚೀನಾಗೆ ತಕ್ಕ ಪ್ರತ್ಯುತ್ತರ ನೀಡುವುದೇ ಇದರ ಉದ್ದೇಶವಾಗಿತ್ತು. ಚೀನಾವು 2008 ರಿಂದ ಹಿಂದೂ ಮಹಾಸಾಗರ ಕ್ಷೇತ್ರದಲ್ಲಿ ದುಷ್ಟತನ ನಡೆಸುತ್ತಿದೆ. ಹಿಂದೂ ಮಹಾಸಾಗರದಲ್ಲಿ ಹಿಂದೆ ಚೀನಾದ 8 ಯುದ್ಧನೌಕೆಗಳಿದ್ದವು, ಈಗ 3 ಇದೆ. ನಾವು ಅವರ ಮೇಲೆ ಸೂಕ್ಷ್ಮವಾಗಿ ನಿಗಾ ಇಟ್ಟಿದ್ದೇವೆ, ಎಂದರು.
ಯುದ್ಧನೌಕೆಯಲ್ಲಿ ಮಹಿಳಾ ಅಧಿಕಾರಿಗಳ ನೇಮಕ

ಆಡಮಿರಲ್ ಹರಿಕುಮಾರರವರು ಮುಂದೆ ಮಾತನಾಡುತ್ತಾ, “ನೌಕಾದಳದ ಪ್ರಮುಖರು ಯುದ್ಧನೌಕೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗಿದೆ. 15 ಮುಖ್ಯ ಯುದ್ಧನೌಕೆಗಳಲ್ಲಿ ಇಲ್ಲಿಯತನಕ ಸುಮಾರು 28 ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಶೀಘ್ರದಲ್ಲಿಯೇ ಈ ಸಂಖ್ಯೆಯು ಹೆಚ್ಚಾಗಲಿದೆ. ಈ ದಳದಲ್ಲಿನ ವಿವಿಧ ಭೂಮಿಕೆಯಲ್ಲಿ ಮಹಿಳೆಯರು ಸಹಭಾಗಿಯಾಗಿಸುವುದು ಮತ್ತು ಅವರಿಗೆ ಜವಾಬ್ದಾರಿ ಒಪ್ಪಿಸುವುದು, ಅದಕ್ಕೆ ನೌಕಾದಳ ಸಿದ್ಧಗಿದೆ. `ರಾಷ್ಟ್ರೀಯ ಸಂರಕ್ಷಣೆ ಅಕಾಡಮಿ’ಯಲ್ಲಿ ಮಹಿಳೆಯರಿಗೆ ತರಬೇತಿ ನೀಡುವ ಪದ್ಧತಿಯ ಮೇಲೆ ಕೆಲಸ ಮಾಡಲಾಗುತ್ತಿದೆ, ಎಂದರು.