2 ಆರೋಪಿಗಳ ಬಂಧನ ಮತ್ತು ಒಬ್ಬ ಪರಾರಿ
ದೇಶದಲ್ಲಿ ಪ್ರತಿದಿನ ಸಾವಿರಾರು ಹಿಂದೂಗಳ ಮತಾಂತರವಾಗುತ್ತಿರುವಾಗ ಎಲ್ಲೆಡೆ ಮತಾಂತರ ನಿಷೇಧ ಕಾನೂನು ಜಾರಿ ಮಾಡದಿರುವುದು, ಇದು ಪರೋಕ್ಷವಾಗಿ ಮತಾಂತರಕ್ಕೆ ಕುಮ್ಮಕ್ಕು ನೀಡಿದಂತೆ ಅಲ್ಲವೇ ? ಹಿಂದೂಗಳು ಸಹ ಸಂಘಟಿತರಾಗಿ ಈ ಕಾನೂನನ್ನು ಆದಷ್ಟು ಬೇಗನೆ ತರಲು ಒತ್ತಾಯಿಬೇಕು !- ಸಂಪಾದಕರು
ಖರಗೋನ (ಮಧ್ಯಪ್ರದೇಶ) – ಇಲ್ಲಿ 3 ನವೆಂಬರ್ 2021 ರಂದು 22 ಜನರು ಮತಾಂತರಗೊಂಡು ಕ್ರೈಸ್ತ ಪಂಥವನ್ನು ಸ್ವೀಕರಿಸಿದ್ದರು, ಅವರು ಹಿಂದೂ ಧರ್ಮಕ್ಕೆ ಮತ್ತೆ ಮರಳಿ ‘ಘರವಾಪಸಿ’ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ರಸಗಾವ ಮಾಲಪುರ ಇಲ್ಲಿಯ ಗ್ರಾಮಸ್ಥ ವಿಜಯ ಬಡೊಲೆ ಮತ್ತು ಆತನ ಅತ್ತೆ ಬಂಜುಲಾ ಬಡೊಲೆ ಇವರನ್ನು ಬಂಧಿಸಿದ್ದಾರೆ. ಇವರಿಬ್ಬರ ಸಹಾಯದಿಂದ ಅರುಣಾಚಲ ಪ್ರದೇಶದಿಂದ ಬಂದಿರುವ ಕ್ರೈಸ್ತ ಪ್ರಚಾರಕ ಮಾರಸನ ಲಾಯ ಇವನು 22 ಜನರ ಮತಾಂತರ ಮಾಡಿದ್ದನು. ಮಾರಸನ ಲಾಯ ಈಗ ಪರಾರಿಯಾಗಿದ್ದಾನೆ. ಮತಾಂತರಕ್ಕಾಗಿ ಆತ ಗ್ರಾಮದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಸ್ಥಳೀಯ ಜನರಿಗೆ ವಿವಿಧ ಆಮಿಷಗಳನ್ನು ಒಡ್ಡಿದ್ದನು. ಮತಾಂತರ ಮಾಡುವಾಗ ಆತ 22 ಜನರ ಮೇಲೆ ನೀರನ್ನು ಸಿಂಪಡಿಸಿ ಅವರ ಕೊರಳಿನಲ್ಲಿ `ಕ್ರಾಸ್’ (ಕ್ರೈಸ್ತರ ಧಾರ್ಮಿಕ ಚಿಹ್ನೆ) ಹಾಕಿದ್ದನು.
ಮತಾಂತರದ ಈ ಘಟನೆಯ ವಿಡಿಯೊ ಪ್ರಸಾರವಾಗಿತ್ತು. ತದನಂತರ ಭಾಜಪದ ಸಂಸದ ಗಜೇಂದ್ರ ಸಿಂಹ ಪಟೇಲ್ ಇವರು ಖರಾಗೋನದ ಪೋಲಿಸ್ ಅಧಿಕಾರಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅದಕ್ಕನುಸಾರ ಪೊಲೀಸರು ಈ ಮೇಲಿನಂತೆ ಕ್ರಮ ಕೈಗೊಂಡಿದ್ದಾರೆ.