ಪಾಲಿಯಲ್ಲಿ (ರಾಜಸ್ಥಾನ) ಸೇನಾನೆಲೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದ ಮತಾಂಧನ ಬಂಧನ

ಇಂತಹವರನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಬೇಕು ! – ಸಂಪಾದಕರು 

ಅಜುರುದ್ದೀನ್ ಮೇವಾತಿ

ಪಾಲಿ (ರಾಜಸ್ಥಾನ) – ಇಲ್ಲಿಯ ಭಾರತೀಯ ಸೇನಾ ನೆಲೆಯ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ರವಾನಿಸುತ್ತಿದ್ದ ಅಜುರುದ್ದೀನ್ ಮೇವಾತಿಯನ್ನು ಗುಪ್ತಚರ ಪೊಲೀಸರು ಬಂಧಿಸಿದ್ದಾರೆ. ಅವನ ಬಳಿ ಉರ್ದು ಭಾಷೆಯಲ್ಲಿ ಕೆಲವು ಸಂದೇಶಗಳು ಪತ್ತೆಯಾಗಿವೆ. ಆತನ ವಿಚಾರಣೆ ವೇಳೆ ಆತನ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹೆಸರಿನಲ್ಲಿ ಉರ್ದು ಭಾಷೆಯಲ್ಲಿ ಬರೆದ ಸಂದೇಶಗಳು ಪತ್ತೆಯಾಗಿವೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು. ಕೋಡ್ ವರ್ಡ್‍ಗಳಲ್ಲಿ ಬರೆದಿರುವ ದಾಖಲೆಗಳೂ ಪತ್ತೆಯಾಗಿವೆ. ಅಜರುದ್ದೀನ್ ಕಳೆದ 6 ವರ್ಷಗಳಿಂದ ಚಂಗೇಟ್ ಪ್ರದೇಶದಲ್ಲಿ ಆಲೂಗಡ್ಡೆ ಮಾರಾಟ ಮಾಡುತ್ತಿದ್ದಾನೆ. ಆತ ಮಧ್ಯಪ್ರದೇಶದ ಮೂಲದವನಾಗಿದ್ದಾನೆ.