ಪೃಥ್ವಿಯ ದಿಕ್ಕಿನತ್ತ ಬರುತ್ತಿರುವ ಕ್ಷುದ್ರಗ್ರಹದ ದಿಕ್ಕು ಮತ್ತು ವೇಗವನ್ನು ಬದಲಾಯಿಸಲು `ನಾಸಾ’ ಅದರ ಮೇಲೆ ನೌಕೆಯಿಂದ ಡಿಕ್ಕಿ ಹೊಡೆಸಲಿದೆ !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ `ನಾಸಾ’ ಡಿಸೆಂಬರ್ 1 ರಂದು `ಡಾರ್ಟ್’ (ಡಬಲ್ ಆಸ್ಟ್ರಾಯಿಡ್ ರಿಡೈರೇಕ್ಷನ್ ಟೆಸ್ಟ) ನೌಕೆಯನ್ನು ಹಾರಿಸಲಿದೆ. ಈ ನೌಕೆ ಎರಡು ಕ್ಷುದ್ರಗ್ರಹಗಳ ಗುಂಪಿನ ‘ಡಿಡಿಮೋಸ್’ಗೆ (ಅಂದರೆ ಅದರ ಸುತ್ತಲು ತಿರುಗುವ `ಡಿಮೊರ್ಫಸ್’ ಮೇಲೆ) ಡಿಕ್ಕಿ ಹೊಡೆಯಲಿದೆ. ಇದರಿಂದ ಕ್ಷುದ್ರಗ್ರಹದ ದಿಕ್ಕು ಮತ್ತು ವೇಗವನ್ನು ಬದಲಾಗುತ್ತದೆಯೇ ? ಎಂಬುದನ್ನು ನೋಡಲಾಗುವುದು. ಭವಿಷ್ಯದಲ್ಲಿ ಅಪಾಯಕಾರಿ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸದಂತೆ ತಡೆಯಲು, ಅವುಗಳ ದಿಕ್ಕನ್ನು ಬದಲಾಯಿಸಲು ಸಾಧ್ಯವೇ ? ಇದನ್ನು ಈ ಮೂಲಕವೂ ನೋಡಲಾಗುವುದು. `ನಾಸಾ’ವು ಈ ಅಭಿಯಾನಕ್ಕೆ `ಡಾರ್ಟ್’ ಎಂದು ಹೆಸರು ನೀಡಿದೆ. ಈ ಅಭಿಯಾನಕ್ಕೆ 2 ಸಾವಿರ ಕೋಟಿ ರೂಪಾಯಿ ಖರ್ಚು ಬರಲಿದೆ. ವಿಶೇಷವೆಂದರೆ ಡಿಡಿಮೋಸ್ ಕ್ಷುದ್ರಗ್ರಹವು 2003 ರಲ್ಲಿ ಭೂಮಿಯ ಹತ್ತಿರದಿಂದ ಹಾದುಹೋಗಿತ್ತು ಮತ್ತು 2022 ರಲ್ಲಿ ಮತ್ತೆ ಭೂಮಿಯ ಸಮೀಪದಿಂದ ಹಾದುಹೋಗಲಿದೆ.

‘ಡಿಡಿಮೋಸ್’ ಎರಡು ಕ್ಷುದ್ರಗ್ರಹಗಳಿರುವ ಕ್ಷುದ್ರಗ್ರಹವಾಗಿದೆ. ಇದರಲ್ಲಿ ದೊಡ್ಡ ಗ್ರಹವು ಅಂದಾಜು 780 ಮೀಟರ್ ಗಾತ್ರದಲ್ಲಿದ್ದು ಇದನ್ನು ‘ಡಿಡಿಮೋಸ್’ ಎಂದು ಕರೆಯಲಾಗುತ್ತದೆ ಹಾಗೂ ಚಿಕ್ಕ ಗ್ರಹವು ಅಂದಾಜು 160 ಮೀಟರ್ ಗಾತ್ರವನ್ನು ಹೊಂದಿದೆ ಮತ್ತು ಇದನ್ನು ‘ಡೈಮಾರ್ಫಸ್’ ಎಂದು ಕರೆಯಲಾಗುತ್ತದೆ. ಈ ಡಿಮೊರ್ಫಸ್ ಚಂದ್ರನಂತೆ ಡಿಡಿಮೋಸ್‍ನ ಸುತ್ತ ಸುತ್ತುತ್ತದೆ. ಕೇವಲ ಸಂಶೋಧನೆಗಾಗಿ, ನಿರೀಕ್ಷಣೆಗಾಗಿ ಅದರ ಮೆಲೆ ನೌಕೆಯಿಂದ ಡಿಕ್ಕಿ ಹೊಡೆಯಲಾಗುವುದು.