ದಾರ್ಶನಿಕ ನಾಸ್ಟ್ರಡಾಮಸನು ನುಡಿದಿರುವ 2022 ರ ಭವಿಷ್ಯವಾಣಿ

ಪೃಥ್ವಿಯ ಮೇಲಿನ ಸಮುದ್ರದಲ್ಲಿ ವಿಶಾಲಕಾಯವಾದ ಉಲ್ಕಾಶಿಲೆಯು ಬೀಳುವುದು !

ಸಮುದ್ರದ ದಡದಲ್ಲಿರುವ ನಗರಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲಿದೆ !

2022 ರಲ್ಲಿನ ವಿನಾಶದ ನಂತರ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ !

ನವ ದೆಹಲಿ – ಫ್ರಾನ್ಸಿನ ಜಗತ್ಪ್ರಸಿದ್ಧ ದಾರ್ಶನಿಕರಾದ ನಾಸ್ಟ್ರಡಾಮಸರು 5 ಶತಕಗಳ ಹಿಂದೆ ಸಾವಿರಾರು ಭವಿಷ್ಯಗಳನ್ನು ಬರೆದಿಟ್ಟಿದ್ದು ಅವುಗಳಲ್ಲಿನ ಅನೇಕ ಭವಿಷ್ಯಗಳು ನಿಜವಾಗಿವೆ. ಇವರ ಪುಸ್ತಕದಲ್ಲಿ ಒಟ್ಟು 6 ಸಾವಿರದ 338 ಭವಿಷ್ಯಗಳನ್ನು ಹೇಳಲಾಗಿದೆ. ಇವರು 2022 ರ ಭವಿಷ್ಯವನ್ನೂ ಹೇಳಿದ್ದಾರೆ. ಇದರಲ್ಲಿ, ಪೃಥ್ವಿಯ ಮೇಲಿನ ಸಮುದ್ರದಲ್ಲಿ ಉಲ್ಕಾ ಶಿಲೆಯು (ವಿಶಾಲ ಕಾಯದ ಶಿಲೆ) ಬೀಳಲಿದ್ದು ಇದರಿಂದ ಸಮುದ್ರದಲ್ಲಿ ಬೃಹದಾಕಾರದ ಅಲೆಗಳು ಹೊರಹೊಮ್ಮಲಿವೆ. ಇದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ ಸಮುದ್ರದ ದಡದಲ್ಲಿರುವ ನಗರಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲಿದೆ. ವಿಶೇಷವೆಂದರೆ 2022 ರ ವಿನಾಶದ ನಂತರ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ ಎಂದು ಇಲ್ಲಿ ನಮೂದಿಸಲಾಗಿದೆ.

(ಸೌಜನ್ಯ : Oneindia Hindi)

ನಾಸ್ಟ್ರಡಾಮಸನು ಮುಂದುವರಿದು ಹೀಗೆ ಹೇಳಿದ್ದಾನೆ,

1. 2022 ರಲ್ಲಿ ಬೆಲೆಯೇರಿಕೆಯು ದೊಡ್ಡಪ್ರಮಾಣದಲ್ಲಿ ಹೆಚ್ಚಾಗುವುದು. ಅಮೇರಿಕಾದ ಡಾಲರ್ ನ ಮೌಲ್ಯವು ಕುಸಿಯುವುದು. ಜನರು ಚಿನ್ನ, ಬೆಳ್ಳಿ ಮತ್ತು ಅವಾಸ್ತವಿಕ ಚಲನ (ಬಿಟ್ ಕಾಯಿನ್ ಇತ್ಯಾದಿ) ಇತ್ಯಾದಿಗಳನ್ನೇ ಸಂಪತ್ತು ಎಂದು ತಿಳಿಯತೊಡಗುತ್ತಾರೆ. ಜನರು ಇದರಲ್ಲಿ ಹೆಚ್ಚಿನ ಹಣ ಹೂಡಲು ಆರಂಭಿಸುತ್ತಾರೆ ಮತ್ತು ಈ ಕಾರಣದಿಂದಾಗಿಯೇ ಪೃಥ್ವಿಯು ಧ್ವಂಸವಾಗಲಿದೆ.

2. 2022 ರಲ್ಲಿ ಅಣುಬಾಂಬ ಸ್ಫೋಟದಿಂದಾಗಿ ಹವಾಮಾನದಲ್ಲಿ ಬದಲಾವಣೆಯಾಗುವುದು. ಇದರೊಂದಿಗೆ ಪೃಥ್ವಿಯ ಸ್ಥಿತಿಯೂ ಬದಲಾಗುವ ಸಾಧ್ಯತೆಯಿದೆ.

3. ಹವಾಮಾನ ಬದಲಾವಣೆಯ ಮೊದಲನೇ 72 ಗಂಟೆಗಳವರೆಗೆ ಜಗತ್ತು ಕತ್ತಲೆಯಲ್ಲಿ ಮುಳುಗುವುದು. ಶರದ ಋತುವಿನಲ್ಲಿ ಪರ್ವತಗಳ ಮೇಲೆ ಹಿಮ ವೃಷ್ಟಿಯಾಗಬಹುದು. ಒಂದು ನೈಸರ್ಗಿಕ ಘಟನೆಯಿಂದಾಗಿ ಅನೇಕ ದೇಶಗಳ ನಡುವಿನ ಯುದ್ಧವು ಮುಕ್ತಾಯವಾಗುವುದು. ಮೂರು ದಿನಗಳವರೆಗೆ ಜಗತ್ತು ಅಂಧಕಾರದಲ್ಲಿರುವುದು ಮತ್ತು ಅನಂತರ ಆಧುನಿಕ ಜೀವನವು ಮುಕ್ತಾಯವಾಗುವುದು.

4. 2022 ರಲ್ಲಿ ಫ್ರಾನ್ಸಿನ ಮೇಲೆ ದೊಡ್ಡ ಸಂಕಟ ಬರಲಿದೆ. ದೇಶದಲ್ಲಿ ದೊಡ್ಡ ಚಂಡಮಾರುತ ಬಂದು ವಿನಾಶ ತರಲಿದೆ. ಇದರಿಂದಾಗಿ ಜಗತ್ತಿನ ಅನೇಕ ಭಾಗಗಳಲ್ಲಿ ಭೀಕರ ಬೆಂಕಿ, ಬರಗಾಲ ಮತ್ತು ನೆರೆಯ ಪರಿಸ್ಥಿತಿಗಳು ನಿರ್ಮಾಣವಾಗುವವು. ದೊಡ್ಡಪ್ರಮಾಣದಲ್ಲಿ ಹಸಿವಿನ ಸಮಸ್ಯೆ ಕಂಡುಬರಲಿದೆ.

5. 2022 ರಲ್ಲಿ ಗಣಕಯಂತ್ರದ (ಕಂಪ್ಯೂಟರ್) ಮೆದುಳು ಮನುಷ್ಯರ ಮೇಲೆ ನಿಯಂತ್ರಣ ಮಾಡಬಹುದು. ರೋಬೊಟ್ಸ್ ಗಳಿಂದ ಮಾನವಜಾತಿಯ ಅಂತ್ಯವಾಗುವುದು.

6. ಮೆನೋರ್ಕ ದ್ವೀಪದ ಭೂಮಧ್ಯದಲ್ಲಿ ಕ್ಷಿಪಣಿಯ ಪರೀಕ್ಷೆಯ ಸಂದರ್ಭದಲ್ಲಿ ದೊಡ್ಡ ಸ್ಫೋಟವಾಗುವ ಸಾಧ್ಯತೆಯಿದೆ.