ಭಾರತವನ್ನು ಅವಮಾನಿಸಿದ ‘ವೀರ ದಾಸ್‌’ನಂತಹ ಕಲಾವಿದರನ್ನು ಜೈಲಿಗಟ್ಟಿ ! – ಶ್ರೀ. ಸುನೀಲ್‌ ಪಾಲ್, ಖ್ಯಾತ ಹಾಸ್ಯನಟ

‘ಕಾಮೇಡಿಯನ್‌ ಅಲ್ಲ, ದೇಶದ್ರೋಹಿಗಳು !’ ಕುರಿತು ಆನ್‌ಲೈನ್‌ ವಿಶೇಷ ಚರ್ಚಾಕೂಟ !

ಪ್ರತಿಯೊಬ್ಬರಿಗೂ ಭಾರತದ ಗೌರವಶಾಲಿ ವಿಷಯಗಳ ಬಗ್ಗೆ ಹೆಮ್ಮೆ ಮತ್ತು ಗೌರವವಿರಬೇಕು. ಅಮೇರಿಕಾಗೆ ಹೋಗಿ ನಮ್ಮ ಭಾರತವನ್ನು ಅವಮಾನಿಸುವ ವೀರ ದಾಸ್‌ ಇವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಹಾಸ್ಯನಟರ ಕೆಲಸವೆಂದರೆ ಹಾಸ್ಯದ ಮೂಲಕ ಜನರನ್ನು ನಗಿಸುವುದು, ಹೀಗಿರುವಾಗ ದೇಶವನ್ನು ಅವಮಾನಿಸುವುದು, ಅಶ್ಲೀಲ ಅವಾಚ್ಯಗಳಿಂದ ಹಾಸ್ಯ ಮಾಡುವುದು, ನಿಂದಿಸುವುದು, ಹಿಂದೂ ದೇವತೆಗಳ ಬಗ್ಗೆ ಅಪಶಬ್ದಗಳನ್ನು ಬಳಸುವುದು ಇವು ಒಂದು ರೀತಿಯ ವೈಚಾರಿಕ ಭಯೋತ್ಪಾದನೆಯಾಗಿದೆ. ಇವರಿಗಿಂತ ರಸ್ತೆಯಲ್ಲಿನ ಕುಡುಕರೇ ಉತ್ತಮವಾಗಿ ಮನೋರಂಜನೆ ನೀಡುತ್ತಾರೆ. ದೊಡ್ಡವರ ಗೌರವ ಮತ್ತು ಸಾಮಾಜಿಕ ಮಿತಿಯನ್ನು ಪಾಲಿಸದ ಇಂತಹವರನ್ನು ಹಾಸ್ಯನಟ ಅಷ್ಟೇ ಅಲ್ಲ ನಟ ಎಂದೂ ಹೇಳಲು ಸಾಧ್ಯವಿಲ್ಲ. ಈ ಜನರು ಸಮಾಜದ ಶತ್ರುಗಳಾಗಿದ್ದಾರೆ. ದೇಶದ ಶತ್ರುವಿಗೆ ನೀಡುವ ಶಿಕ್ಷೆಯನ್ನೇ ಇವರಿಗೂ ನೀಡಬೇಕು. ಇವರನ್ನು ಸೆರೆಮನೆಯಲ್ಲಿ ಹಾಕದೇ ಇದ್ದಲ್ಲಿ ಅವರು ಸುಧಾರಿಸುವುದಿಲ್ಲ ಎಂದು ಖಂಡತುಂಡಾಗಿ ಮುಂಬಯಿಯ ಖ್ಯಾತ ಹಾಸ್ಯನಟ ಶ್ರೀ. ಸುನೀಲ್‌ ಪಾಲ್‌ ಹೇಳಿಕೆ ನೀಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಕಾಮೇಡಿಯನ್‌ ಅಲ್ಲ ರಾಷ್ಟ್ರದ್ರೋಹಿಗಳು !’, ಈ ವಿಶೇಷ ‘ಆನ್‌ಲೈನ್’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

ಈ ವೇಳೆ ಮುಂಬಯಿಯ ‘ಸಾಫ್ರನ್‌ ಥಿಂಕ್‌ ಟ್ಯಾಂಕ್‌’ನ ಸಂಸ್ಥಾಪಕರಾದ ಶ್ರೀ. ಸಿದ್ಧಾಂತ ಮೋಹಿತೆ ಅವರು ಮಾತನಾಡುತ್ತಾ, ‘ಭಾರತದಲ್ಲಿ ಹಗಲಿನಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆ ಮತ್ತು ರಾತ್ರಿ ಸಾಮೂಹಿಕ ಅತ್ಯಾಚಾರವೆಸಗಲಾಗುತ್ತದೆ’ ಎಂದು ಅಪಪ್ರಚಾರವನ್ನು ಮಾಡುವ ವೀರ ದಾಸ್‌ ಒಬ್ಬನೇ ಅಲ್ಲ. ಇದರಲ್ಲಿ ಬಾಲಿವುಡ್‌ ನ ಕೆಲವು ದೊಡ್ಡ ಕುಳಗಳ ಕೈವಾಡವೂ ಇದೆ. ಈ ಹಿಂದೆ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿತ್ತು. ವೀರ ದಾಸ್‌ ಮಾತ್ರವಲ್ಲ, ಅಗ್ರಿಮಾ ಜೋಶುವಾ, ಮುನವ್ವರ್‌ ಫಾರೂಕಿ, ಕುಣಾಲ್‌ ಕಾಮರಾ ಹೀಗೆ ಅನೇಕ ಕಲಾವಿದರು ದೇವಿ-ದೇವತೆಗಳ ಬಗ್ಗೆ ಅಸಹ್ಯಕರ ಹಾಸ್ಯ ಮಾಡುತ್ತಾರೆ. ಈ ಜನರು ಮುಸಲ್ಮಾನರ ಅಥವಾ ಕ್ರೈಸ್ತ ಧರ್ಮದ ಶ್ರದ್ಧಾಸ್ಥಾನಗಳ ಬಗ್ಗೆ ಹಾಸ್ಯ ಮಾಡಲು ಏಕೆ ಧೈರ್ಯ ಮಾಡುತ್ತಿಲ್ಲ ? ಎಂದು ಹೇಳಿದರು. ಕರ್ನಾಟಕದ ಪತ್ರಕರ್ತ ಲಕ್ಷ್ಮಿ ರಾಜಕುಮಾರ್‌ ಇವರು ಮಾತನಾಡುತ್ತಾ. ಹಾಸ್ಯನಟರ ನಡುವಳಿಕೆಯನ್ನು ನೋಡಿದರೆ ಅವರ ಮೇಲೆ ಚಿಕಿತ್ಸೆ ನೀಡುವುದು ಅತ್ಯಂತ ಅಗತ್ಯವಿದೆ. ನಮ್ಮ ದೇಶದಲ್ಲಿನ ಮಹಿಳೆಯರನ್ನು ಅವಮಾನಿಸುವ ವೀರ ದಾಸ್‌ ತನ್ನ ತಾಯಿಯನ್ನು ಅದೇ ರೀತಿ ತೂಗುತ್ತಿದ್ದಾರೆ ಎಂಬುದು ಅವರಿಗೆ ಗಮನಕ್ಕೆ ಬರುತ್ತಿಲ್ಲ ಎಂದು ಹೇಳಿದರು.

ನವ ದೆಹಲಿಯ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ನರೇಂದ್ರ ಸುರ್ವೆಯವರು ಮಾತನಾಡುತ್ತಾ, ದೇವಾನುದೇವತೆಗಳು, ಸಂತರು, ರಾಷ್ಟ್ರಪುರುಷರು, ಧರ್ಮಗ್ರಂಥ, ಭಾರತಮಾತೆಯ ಕುರಿತು ಹಾಸ್ಯ ಚಟಾಕಿ ಹಾರಿಸಿ ಜನರ ಮನಸ್ಸಿನಲ್ಲಿನ ಶ್ರದ್ಧೆಯನ್ನು ಕಡಿಮೆ ಮಾಡುವ ಪಿತೂರಿಯು ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಹಿಂದೆ ಚಲನಚಿತ್ರ, ನಂತರ ವೆಬ್‌ ಸಿರೀಸ್, ಈಗ ಸ್ಟ್ಯಾಂಡ್‌ ಅಪ್‌ ಕಾಮಿಡಿ ಹೀಗೆ ನಾನಾ ಮಾಧ್ಯಮಗಳ ಮೂಲಕ ಅವಮಾನಿಸಲಾಗುತ್ತಿದೆ. ಇತ್ತೀಚೆಗೆ ಅಲಹಾಬಾದ್‌ ಉಚ್ಚ ನ್ಯಾಯಾಲಯವು ರಾಮಾಯಣ, ಭಗವದ್ಗೀತೆ, ರಾಮ, ಕೃಷ್ಣ ಇವರು ನಮ್ಮ ರಾಷ್ಟ್ರೀಯ ಗೌರವಗಳಾಗಿರುವುದರಿಂದ ಅವುಗಳ ಗೌರವವನ್ನು ಕಾಪಾಡಲು ಕಾನೂನು ರೂಪಿಸಬೇಕು ಎಂದು ಹೇಳಿದೆ. ಆದ್ದರಿಂದ ನಾವು ಆಗ್ರಹಿಸುವುದೆಂದರೆ ಕೇಂದ್ರ ಸರಕಾರವು ಧಾರ್ಮಿಕ ಸ್ಥಳಗಳ ಅವಮಾನಗಳನ್ನು ತಡೆಯಲು ರಾಷ್ಟ್ರಮಟ್ಟದಲ್ಲಿ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ಇನ್ನು ಮುಂದೆ ದೇವತೆಗಳು ಮತ್ತು ಶ್ರದ್ಧಾಸ್ಥಾನಗಳಿಗೆ ಅವಮಾನ ಮಾಡುವುದನ್ನು ಸಹಿಸುವುದಿಲ್ಲ’ ಎಂದು ಹೇಳಿದರು.