ಭಾರತೀಯ ಕ್ರಿಕೆಟ್ ಸಂಘದ ಕ್ರೀಡಾಪಟುಗಳಿಗೆ ‘ಹಲಾಲ್ ಮಾಂಸ’ ನೀಡಲಾಗುವುದು !

* ಭಾರತೀಯ ಕ್ರಿಕೆಟ ಸಂಘದಲ್ಲಿರುವ ಶೇ. 80ರಷ್ಟು ಕ್ರೀಡಾಪಟುಗಳು ಹಿಂದೂಗಳಾಗಿರುವಾಗ ಅವರಿಗೆ ಹಲಾಲ ಮಾಂಸವನ್ನು ಏಕೆ ನೀಡಲಾಗುತ್ತಿದೆ ? ಎಂಬುದರ ಉತ್ತರವನ್ನು ಭಾರತೀಯ ಕ್ರಿಕೆಟ್ ನಿಯಾಮಕ ಮಂಡಳಿಯು ಹಿಂದೂಗಳಿಗೆ ನೀಡಬೇಕಿದೆ ! ಹಾಗೆಯೇ ಹಿಂದೂ ಕ್ರೀಡಾಪಟುಗಳು ಇದರ ಕಾರಣವನ್ನು ಕೇಳಬೇಕಿದೆ ಮತ್ತು ಇಂತಹ ಮಾಂಸದ ಮೇಲೆ ಬಹಿಷ್ಕಾರ ಹೇರಬೇಕಿದೆ. ಆದರೆ ಹಿಂದೂ ಕ್ರೀಡಾಪಟುಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಮತ್ತು ಅವರು ಧರ್ಮಾಭಿಮಾನಕ್ಕಿಂತಲೂ ಹಣಕ್ಕೆ ಹೆಚ್ಚಿನ ಮಹತ್ವ ನೀಡುವುದರಿಂದ ಹೀಗೆ ಆಗುವುದರ ಸಾಧ್ಯತೆಯೂ ಕಡಿಮೆ ಇದೆ !- ಸಂಪಾದಕರು

* ಇಂದು ದುರದೃಷ್ಠವಶಾತ್ ಕ್ರಿಕೆಟಪಟುಗಳು ಭಾರತದಲ್ಲಿನ ಅಸಂಖ್ಯ ಯುವಪೀಳಿಗೆಯ ಆದರ್ಶರಾಗಿರುವುದರಿಂದ ನಾಳೆ ಅವರೂ ಕ್ರಿಕೆಟಪಟುಗಳಂತೆಯೇ ಹಲಾಲ ಮಾಂಸವನ್ನು ತಿನ್ನಲು ಆರಂಭಿಸಬಹುದು ! ಇದು ಭಾರತದಲ್ಲಿ ಹಲಾಲ ಮಾಂಸದ ಮಾರಾಟವನ್ನು ಹೆಚ್ಚಿಸುವ ಆಯೋಜನಾಬದ್ಧ ಷಡ್ಯಂತ್ರವಾಗಿದೆ ಎಂಬುದನ್ನು ತಿಳಿಯಿರಿ !- ಸಂಪಾದಕರು

ನವದೆಹಲಿ – ಭಾರತೀಯ ಕ್ರಿಕೆಟ ಸಂಘಕ್ಕೆ ಸ್ಪರ್ಧೆಯ ಸಮಯದಲ್ಲಿ ಗೋಮಾಂಸ ಮತ್ತು ಹಂದಿಯ ಮಾಂಸವನ್ನು ತಿನ್ನಲು ನೀಡಲಾಗುವುದಿಲ್ಲ. ಆದರೆ ಇತರ ಸಮಯದಲ್ಲಿ ನೀಡಲಾಗುವ ಪ್ರತಿಯೊಂದು ಮಾಂಸವೂ ‘ಹಲಾಲ್’ ಮಾಂಸವೇ ಆಗಿರಲಿದೆ ಎಂಬ ಸುದ್ದಿಯನ್ನು ‘ಇಂಡಿಯಾ ಟುಡೇ’ ಸಮೂಹದ ‘ಸ್ಫೋರ್ಟ್ಸ್ ತಕ್’ ಎಂಬ ವಾರ್ತಾವಾಹಿನಿಯು ನೀಡಿದೆ.

 ‘ಹಲಾಲ್’ ಮಾಂಸ ಅಂದರೆ ಏನು ?

ಹಲಾಲ್ ಪದ್ಧತಿಯಿಂದ ಮಾಂಸವನ್ನು ಪಡೆಯಲು ಪ್ರಾಣಿಗಳ ಕುತ್ತಿಗೆಯ ನರವನ್ನು ಕತ್ತರಿಸಿ ಅವುಗಳನ್ನು ಬಿಡಲಾಗುತ್ತದೆ. ಇದರಿಂದ ಆ ಪ್ರಾಣಿಯ ರಕ್ತ ದೊಡ್ಡಪ್ರಮಾಣದಲ್ಲಿ ಹರಿದು ಅದು ಬಹಳ ನರಳಿ ಸಾಯುತ್ತದೆ. ಈ ರೀತಿಯಲ್ಲಿ ನರಳಿಸಿ ಕೊಂದಿರುವ ಪ್ರಾಣಿಗಳ ಮಾಂಸಕ್ಕೆ ‘ಹಲಾಲ ಮಾಂಸ’ ಎಂದು ಹೇಳುತ್ತಾರೆ. ಈ ಪ್ರಾಣಿಯ ಬಲಿ ನೀಡುವಾಗ ಅದರ ಮುಖವನ್ನು ಮೆಕ್ಕಾದ ದಿಕ್ಕಿನಲ್ಲಿ ಮಾಡಲಾಗುತ್ತದೆ.