ಪಾಕಿಸ್ತಾನದಿಂದ ದೆಹಲಿಗೆ ಬಂದಿರುವ ಹಿಂದೂ ನಿರಾಶ್ರಿತರನ್ನು ಮತಾಂತರಿಸಿದ ಕ್ರೈಸ್ತ ಮಿಶನರಿಗಳು !

ಭಾರತದ ರಾಜಧಾನಿಯಲ್ಲಿ ಹೀಗಾಗುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡು ! ಈ ಪ್ರಯತ್ನವನ್ನು ಹಿಂದೂ ಸಂಘಟನೆಗಳು ಕಾನೂನು ಬದ್ಧ ಮಾರ್ಗದಿಂದ ತಡೆಯುವುದು ಆವಶ್ಯಕವಾಗಿದೆ !- ಸಂಪಾದಕರು

ನವದೆಹಲಿ – ಪಾಕಿಸ್ತಾನದಲ್ಲಿ ಮತಾಂಧರ ಅತ್ಯಾಚಾರದಿಂದ ಬೇಸತ್ತು ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಹಿಂದೂಗಳು ಬೇರೆ ಬೇರೆ ಕಡೆಗಳಲ್ಲಿ ವಾಸವಾಗಿದ್ದಾರೆ. ದೆಹಲಿಯಲ್ಲಿನ ಮಜುನು ಕಾ ಟಿಲಾ ಇಲ್ಲಿಯೂ ಬೃಹತ್ಪ್ರಮಾಣದಲ್ಲಿ ಹಿಂದೂಗಳು ವಾಸವಾಗಿದ್ದಾರೆ. ಇಲ್ಲಿ ಈ ಹಿಂದೂಗಳನ್ನು ಮತಾಂತರಿಸುತ್ತಿರುವುದು ಬೆಳಕಿಗೆ ಬಂದಿದೆ.

1. ಈ ಹಿಂದೂಗಳಿಗೆ ಈವರೆಗೆ ಮೂಲಭೂತ ಸೌಕರ್ಯಗಳು ಪೂರೈಕೆಯಾಗಿಲ್ಲ, ಇಂತಹ ಸಮಯದಲ್ಲಿ ಕ್ರೈಸ್ತ ಮಿಶನರಿಗಳು ಅವರಿಗೆ ಮೂಲಭೂತ ಸೌಕರ್ಯಗಳನ್ನು ನೀಡಿ ಅವರ ಮಾಹಿತಿ ಕಲೆಹಾಕುತ್ತಿದ್ದಾರೆ. ಹಿಂದೂಗಳು ಈ ಮಾಹಿತಿ ನೀಡದಿದ್ದರೆ ಅವರಿಗೆ ಸಾಹಿತ್ಯ ನೀಡುವುದಿಲ್ಲ, ಎಂದು ಸಹ ಬೆಳಕಿಗೆ ಬಂದಿದೆ.

2. ಈ ನಿರಾಶ್ರಿತ ಹಿಂದೂಗಳು ಎಲ್ಲಿ ವಾಸಿಸುತ್ತಿದ್ದಾರೆಯೋ, ಅಲ್ಲಿಯ ಹತ್ತಿರ ಒಂದು ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ಉರ್ಮಿಲಾ ರಾಣಿ ಇವರು, ಕ್ರೈಸ್ತ ಮಿಶನರಿಗಳ ಬಲೆಗೆ ಬಿದ್ದಿರುವ 3 ಹಿಂದೂ ನಿರಾಶ್ರಿತರು ಕ್ರೈಸ್ತ ಪಂಥವನ್ನು ಸ್ವೀಕರಿಸಿದ್ದಾರೆ. ಇಲ್ಲಿಗೆ ಕ್ರೈಸ್ತ ಮಿಶನರಿಗಳು ದಿನನಿತ್ಯ ಹೋಗಿ ಬರುತ್ತಾರೆ. ಜನರು ಅವರಿಗೆ ಇಲ್ಲಿ ಬರಲು ನಿರ್ಬಂಧಿಸಿಧನಂತರ ಅವರು ಬೇರೆ ಹೆಸರಿನಿಂದ ಇಲ್ಲಿ ಬರುತ್ತಲೇ ಇರುತ್ತಾರೆ ಎಂದು ಹೇಳಿದರು.

3. ದೇವಸ್ಥಾನದ ಅರ್ಚಕರು ಹೇಳಿದ ಪ್ರಕಾರ, ನಿರಾಶ್ರಿತ ಹಿಂದೂಗಳ ಬಡತನದ ಲಾಭ ಪಡೆದು ಮತಾಂತರಗೊಳ್ಳುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ಹಿಂದೂಗಳು ಮತಾಂತರವಾಗಲು ನಿರಾಕರಿಸಿದರೆ ಅವರಿಗೆ ಆಹಾರಕ್ಕಾಗಿ ತೊಂದರೆ ನೀಡಲಾಗಬಹುದು, ಎಂದು ಹಿಂದೂಗಳಿಗೆ ಅನಿಸುತ್ತದೆ. ಆದ್ದರಿಂದ ಹಿಂದೂಗಳು ಅವರನ್ನು ನೇರವಾಗಿ ವಿರೋಧಿಸುತ್ತಿಲ್ಲ. ಇಲ್ಲಿ ರಾಮಲೀಲೆಯ ಆಯೋಜನೆ ಮಾಡಲು ವಿರೋಧ ಮಾಡಲಾಗುತ್ತದೆ. ಈ ಹಿಂದೂಗಳಿಗೆ ಕ್ರಿಸ್ಮಸ್ ಆಚರಿಸಲು ಹೇಳಲಾಗುತ್ತದೆ.