ಪ್ರಯಾಗರಾಜ (ಉತ್ತರಪ್ರದೇಶ) – ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಮಾಜಿ ಅಧ್ಯಕ್ಷ ದಿವಂಗತ ಮಹಂತ ನರೇಂದ್ರ ಗಿರಿಯವರ ಸಂದೇಹಾಸ್ಪದ ಸಾವಿನ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐನವರು) ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿ ಆನಂದಗಿರಿ ಸಹಿತ ಮೂರು ಜನರ ವಿರುದ್ಧ ಆರೋಪ ಪತ್ರ ದಾಖಲಿಸಿದ್ದಾರೆ. ಮಹಾಂತ ನರೇಂದ್ರ ಗಿರಿಯ ಇವರ ಮೃತ್ಯುವು ಆತ್ಮಹತ್ಯೆಯೇ ಆಗಿದೆ ಎಂದು ಸಿಬಿಐ ಹೇಳಿದೆ. ಆತ್ಮಹತ್ಯೆಗೆ ಮಹಂತ ಆನಂದಗಿರಿ, ಆಧ್ಯಾ ತಿವಾರಿ ಮತ್ತು ಅವರ ಮಗ ಸಂದೀಪ ತಿವಾರಿ ಇವರು ಪ್ರಚೋದಿಸಿರುವ ಆರೋಪವಿದೆ. ಈ ಮೂರೂ ಜನರ ಮೇಲೆ 306 ಮತ್ತು 120 ಕಲಂನ ಅಡಿಯಲ್ಲಿ ಅಪರಾಧ ದಾಖಲಿಸಲಾಗಿದೆ.
Mahant Narendra Giri death: CBI files chargesheet against accused Anand Giri & others https://t.co/45dEiI06I1
— Republic (@republic) November 20, 2021
ಆನಂದಗಿರಿ ಇವರು 2008 ರಲ್ಲಿ ಗಂಗಾ ಸೇನೆಯನ್ನು ಸ್ಥಾಪಿಸಿದ್ದರು ಎಂದು ಆರೋಪಪತ್ರದಲ್ಲಿ ಹೇಳಲಾಗಿದೆ. ಕುಂಭಮೇಳದಲ್ಲಿ ಅವರು ಸ್ವತಂತ್ರ ಛಾವಣಿ ನಿರ್ಮಿಸಿದ್ದರು. ಅಲ್ಲಿಂದಲೇ ಮಹಂತ ನರೇಂದ್ರ ಗಿರಿ ಮತ್ತು ಆನಂದಗಿರಿ ಇವರಲ್ಲಿ ಬಿರುಕು ಬಿಟ್ಟಿತ್ತು. ಮಹಂತ ನರೇಂದ್ರ ಗಿರಿ ಇವರು ಗಂಗಾ ಸೇನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಠದಲ್ಲಿರುವಾಗ ಆನಂದಗಿರಿ ಇವರು ಗಂಗಾ ಸೇನೆ ಸ್ಥಾಪಿಸಲು ಅನುಮತಿ ಪಡೆದಿರಲಿಲ್ಲ ಎಂದು ಮಹಂತ ನರೇಂದ್ರ ಗಿರಿ ಇವರು ಹೇಳಿದ್ದರು.