ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ನನ್ನ ಅಣ್ಣ (ನಂತೆ) ! – ಪಂಜಾಬಿನ ಕಾಂಗ್ರೆಸ್ಸಿನ ಅಧ್ಯಕ್ಷ ನವಜ್ಯೋತಸಿಂಗ ಸಿದ್ಧು

ಕೆಲವು ವರ್ಷಗಳ ಹಿಂದೆ ಸಿದ್ಧುರವರು ಪಾಕಿಸ್ತಾನದ ಸೈನ್ಯದಳ ಪ್ರಮುಖರಾದ ಕಮರ ಬಾಜವರವರನ್ನು ಅಪ್ಪಿಕೊಂಡಿದ್ದರು !

* ಇಮ್ರಾನ ಖಾನರವರು ಸಿದ್ಧುರವರ ಅಣ್ಣನಾಗಿದ್ದರೆ ಸಿದ್ಧುರವರು ಅವರಿಗೆ ಪಾಕಿಸ್ತಾನವು ಕಬಳಿಸಿರುವ ಕಾಶ್ಮೀರವನ್ನು ಹಿಂದಿರುಗಿಸಲು ಏಕೆ ಹೇಳುತ್ತಿಲ್ಲ ? ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ತಡೆಯಲು ಏಕೆ ಹೇಳುತ್ತಿಲ್ಲ ? ಪಾಕಿಸ್ತಾನದಲ್ಲಿ ಆಗುವ ಹಿಂದೂ ಮತ್ತು ಸಿಖ್ಖರ ನರಮೇಧವನ್ನು ತಡೆಯಲು ಏಕೆ ಹೇಳುತ್ತಿಲ್ಲ ?

* ಇಂತಹ ರಾಷ್ಟ್ರಾಭಿಮಾನವಿಲ್ಲದ ವ್ಯಕ್ತಿಗಳನ್ನು ಕಾಂಗ್ರೆಸ್ ತನ್ನ ಪದಾಧಿಕಾರಿಗಳಾಗಿ ನೇಮಿಸುತ್ತದೆ ಎಂಬುದನ್ನು ಗಮನದಲ್ಲಿಡಿ !

(ಎಡದಿಂದ) ನವಜ್ಯೋತಸಿಂಗ ಸಿದ್ಧು ‘ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್

ನವ ದೆಹಲಿ – ಪಾಕಿಸ್ತಾನದಲ್ಲಿರುವ ಕತಾರಪೂರ ಸಾಹಿಬ ಗುರುದ್ವಾರಕ್ಕೆ ಹೋದ ಪಂಜಾಬಿನ ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷರಾದ ನವಜ್ಯೋತಸಿಂಗ ಸಿದ್ಧುರವರನ್ನು ವೈಭವದಿಂದ ಸ್ವಾಗತಿಸಲಾಗಿತ್ತು. ಆಗ ಸಿದ್ಧುವರು ‘ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ ಖಾನರವರು ನನ್ನ ಅಣ್ಣನಂತಿದ್ದಾರೆ. ಅವರು ನನಗೆ ಅಪಾರ ಪ್ರೀತಿ ನೀಡಿದ್ದಾರೆ’ ಎಂದು ಹೇಳಿದರು. ಅವರ ಈ ಹೇಳಿಕೆಗೆ ಮೇಲೆ ಭಾಜಪವು ಟೀಕಿಸಿದೆ. ಸಿದ್ಧುರವರು ಪ್ರಧಾನಮಂತ್ರಿ ಇಮ್ರಾನ ಖಾನರೊಂದಿಗಿನ ಬಾಂಧವ್ಯವನ್ನು ತೋರಿಸುತ್ತಿರುವುದು ಇದೇನೂ ಮೊದಲನೆಯ ಬಾರಿಯಲ್ಲ. ಈ ಮೊದಲು ಇಮ್ರಾನ್ ಖಾನ್ ರ ಪ್ರಮಾಣವಚನದ ಸಮಾರಂಭದಲ್ಲಿ ಸಿದ್ಧುರವರು ಉಪಸ್ಥಿತರಿದ್ದರು. ಅಲ್ಲಿ ಅವರು ಪಾಕಿಸ್ತಾನದ ಸೈನ್ಯದಳ ಪ್ರಮುಖರಾದ ಕಮರ ಬಾಜವರವರನ್ನು ಅಪ್ಪಿಕೊಂಡಿದ್ದರು.

ಈ ಬಗ್ಗೆ ಭಾಜಪದ ವಕ್ತಾರರಾದ ಸಂಬಿತ ಪಾತ್ರಾರವರು ‘ಸಿದ್ಧುರವರು ಇನ್ನೊಮ್ಮೆ ಪಾಕಿಸ್ತಾನದ ಬಗ್ಗೆ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. ಅವರು ಯಾವಾಗಲೂ ಪಾಕಿಸ್ತಾನವನ್ನು ಹೊಗಳುತ್ತಾರೆ. ಇದು ಕಾಂಗ್ರೆಸ್ಸಿನ ಸುನಿಯೋಜಿತ ಷಡ್ಯಂತ್ರವಾಗಿದೆ’ ಎಂದು ಹೇಳಿದರು.