ಚೀನಾ ಭಾರತದ ಭೂಭಾಗವನ್ನು ಕಬಳಿಸಿದೆ, ಇದನ್ನು ಸಹ ಪ್ರಧಾನಮಂತ್ರಿ ಮೋದಿಯವರು ಒಪ್ಪಿಕೊಳ್ಳುವರೇ ? – ಡಾ. ಸುಬ್ರಮಣಿಯನ್ ಸ್ವಾಮಿ ಇವರ ಪ್ರಶ್ನೆ

ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ

ನವ ದೆಹಲಿ – ಚೀನಾ ಭಾರತದ ಭೂಭಾಗ ಕಬಳಿಸಿದೆ, ಇದನ್ನು ಸಹ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಒಪ್ಪಿಕೊಳ್ಳುವರೇ ? ಮತ್ತು ಚೀನಾದ ವಶದಲ್ಲಿರುವ ಪ್ರತಿಯೊಂದು ಇಂಚು ಭೂಮಿ ಹಿಂಪಡೆಯಲು ಪ್ರಧಾನಿ ಮೋದಿ ಮತ್ತು ಅವರ ಸರಕಾರ ಪ್ರಯತ್ನಿಸುವುದೇ ? ಎಂದು ಭಾಜಪದ ಹಿರಿಯ ನಾಯಕ ಮತ್ತು ಸಂಸದ ಸುಬ್ರಮಣಿಯನ್ ಸ್ವಾಮಿಯವರು ಪ್ರಧಾನಮಂತ್ರಿ ಅವರಿಗೆ 3 ಕೃಷಿ ಕಾನೂನು ರದ್ದುಪಡಿಸುವ ಘೋಷಣೆಯ ನಂತರ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಭಾರತ ಮತ್ತು ಚೀನಾ ಗಡಿ ಪ್ರಶ್ನೆಯ ಬಗ್ಗೆ ಕಳೆದ ಅನೇಕ ದಿನಗಳಿಂದ ಡಾ. ಸ್ವಾಮಿ ಕೇಂದ್ರ ಸರಕಾರವನ್ನು ಟೀಕಿಸುತ್ತಿದ್ದಾರೆ. ಗಡಿ ರೇಖೆಯಿಂದ ಭಾರತ ಹಿಂದೆ ಸರಿದಿದೆ ಆದರೆ ಚೀನಾ ಇಲ್ಲ’, ಹೀಗೂ ಅವರು ಈ ಮೊದಲು ಹೇಳಿದ್ದರು.