ಮಸೀದಿಯ ಹತ್ತಿರ ಡಿಜೆ ನಿಲ್ಲಿಸಲು ಹೇಳಿದಕ್ಕೆ ಮತಾಂಧರಿಂದ ಥಳಿತ


ಗ್ರೀಟರ್ ನೋಯಡಾ (ಉತ್ತರಪ್ರದೇಶ) – ಮಸೀದಿಯ ಹತ್ತಿರ `ಡಿಜೆ'(ಧ್ವನಿವರ್ಧಕ) ನಿಲ್ಲಿಸಲು ಹೇಳಿದ್ದಕ್ಕೆ ಮತಾಂಧರು ತಮ್ಮದೇ ಸಮಾಜದ ಕುಟುಂಬದವರನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ನಾಸೀರ್, ನಾಜಿಮ್, ಆರೀಫ್, ರೀಜ್ವಾನ, ಶಹಬಾಜ್ ಮತ್ತು ಇತರರ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ ಮತ್ತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ನವೆಂಬರ್ 15 ರಂದು ನೆಹರುವಾಲಾದಿಂದ ರಜಪುರಾ ಗ್ರಾಮದಲ್ಲಿ ‘ಡಿಜೆ’ಯೊಂದಿಗೆ ಒಂದು ದಿಬ್ಬಣ ಬಂದಿತ್ತು. ಈ ದಿಬ್ಬಣ ಊರಿನ ಮಸೀದಿಯ ಹತ್ತಿರದಿಂದ ಹೋಗುತ್ತಿರುವಾಗ ಮಿನಸ್ ಎಂಬ ಮುಸಲ್ಮಾನ ಸಮಾಜದ ವ್ಯಕ್ತಿ `ಡಿಜೆ’ ನಿಲ್ಲಿಸಲು ಹೇಳಿದನು. ಆಗ ಆರೋಪಿಗಳು ಕೋಲು ಮತ್ತು ರಾಡನಿಂದ ಮಿನಸಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಿನಸ ಇವರದ್ದು ಒಂದು ‘ಜನರಲ್ ಸ್ಟೋರ್’ ಇದೆ. ಅವರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿಗಳು ಅವರ ಮನೆಯೊಳಗೆ ನುಗ್ಗಿ ತನ್ನ ಪತ್ನಿ ಮತ್ತು ಸಹೋದರನ ಮಗನಿಗೆ ಹೊಡೆದಿದ್ದಾರೆ. ಈ ದಾಳಿಯಲ್ಲಿ ಮಿನಸನ ಕುಟುಂಬದ 3 ಜನರು ಗಾಯಗೊಂಡಿದ್ದಾರೆ.