ಸಲ್ಮಾನ್ ಖುರ್ಷಿದ್ ಅವರ ಪುಸ್ತಕದ ಮೇಲೆ ನಿಷೇಧ ಹೇರದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವೆ ! – ಅಯೋಧ್ಯೆಯ ತಪಸ್ವಿ ಛಾವಣಿಯ ಸಂತ ಪರಮಹಂಸ ದಾಸ್ ಇವರಿಂದ ಎಚ್ಚರಿಕೆ

ಸಂತರಿಗೆ ಇಂತಹ ಬೇಡಿಕೆ ಮತ್ತು ಅದಕ್ಕಾಗಿ ಇಂತಹ ಎಚ್ಚರಿಕೆ ಏಕೆ ನೀಡಬೇಕಾಗುತ್ತದೆ ? ಸರಕಾರ ತಾವಾಗಿಯೇ ಹಿಂದೂಗಳ ಭಾವನೆಗಳನ್ನು ಗಮನದಲ್ಲಿಟ್ಟು ಹಿಂದೂದ್ವೇಷಿ ಪುಸ್ತಕವನ್ನು ನಿಷೇಧಿಸಬೇಕು !- ಸಂಪಾದಕರು

ಸಂತ ಪರಮಹಂಸ ದಾಸ್ (ಮಧ್ಯಭಾಗದಲ್ಲಿ )

ಅಯೋಧ್ಯೆ (ಉತ್ತರಪ್ರದೇಶ) – ಕಾಂಗ್ರೆಸ್‍ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಇವರು ಹಿಂದುತ್ವವನ್ನು ಇಸ್ಲಾಮಿಕ್ ಸ್ಟೇಟ್ ಮತ್ತು ಬೋಕೊ ಹರಾಮ್ ಈ ಜಿಹಾದಿ ಉಗ್ರರ ಸಂಘಟನೆಯ ಜೊತೆ ಹೋಲಿಕೆ ಮಾಡಿದ್ದರಿಂದ ಈ ಪುಸ್ತಕದ ಮೇಲೆ ನಿಷೇಧ ಹೇರಬೇಕು ಹಾಗೂ ಖುರ್ಶಿದ್ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಅಪರಾಧವನ್ನು ದಾಖಲಿಸಬೇಕು, ಎಂದು ಇಲ್ಲಿಯ ತಪಸ್ವಿ ಛಾವಣಿಯ ಸಂತ ಪರಮಹಂಸ ದಾಸ್ ಇವರು ಪ್ರಧಾನಮಂತ್ರಿ, ಕೇಂದ್ರೀಯ ಗೃಹಸಚಿವ ಮತ್ತು ರಾಜ್ಯದ ಮುಖ್ಯಮಂತ್ರಿ ಇವರಲ್ಲಿ ಆಗ್ರಹಿಸಿದ್ದಾರೆ. ಇದನ್ನು ಒಪ್ಪಿಕೊಳ್ಳದಿದ್ದರೆ ಆಮರಣಾಂತ ಉಪವಾಸ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಸಂತ ಪರಮಹಂಸ ದಾಸ್ ಇವರು ಖುರ್ಶಿದ್ ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದಾರೆ.