ಯಾವ ಕಾನೂನಿನ ಅಡಿಯಲ್ಲಿ ಮಸೀದಿಗಳಿಗೆ ಬೋಂಗಾ ಬಳಸಲು ಅನುಮತಿಸಲಾಗಿದೆ ? – ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಸರಕಾರಕ್ಕೆ ಪ್ರಶ್ನೆ

ಬೆಂಗಳೂರು – ಸರಕಾರವು ಅನೇಕ ಮಸೀದಿಗಳಿಗೆ ಯಾವ ಕಾನೂನಿನ ಅಡಿಯಲ್ಲಿ ಬೋಂಗಾಗಳು ಮತ್ತು ಸಾರ್ವಜನಿಕ ಭಾಷಣಕ್ಕೆ ಬಳಸುವ ಪರಿಕರಗಳನ್ನು ಬಳಸುವ ಅನುಮತಿ ನೀಡಿದೆ, ಇದರ ಉತ್ತರ ಪ್ರತಿವಾದಿ ರಾಜ್ಯ ಸರಕಾರದ ಅಧಿಕಾರಿಗಳು ನೀಡಬೇಕು. ಬೋಂಗಾಗಳ ಉಪಯೋಗಗಳನ್ನು ತಡೆಯಲು `ಶಬ್ದ ಮಾಲಿನ್ಯ ನಿಯಮಗಳು 2000′ ಅನುಸಾರ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ, ಇದರ ಮಾಹಿತಿಯನ್ನೂ ಅಧಿಕಾರಿಗಳು ನೀಡಬೇಕೆಂದು, ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ತಿಳಿಸಿದೆ.

ಈ ಪ್ರಕರಣದಲ್ಲಿ ರಾಕೇಶ ಪಿ. ಮತ್ತು ಇತರ ಕೆಲವು ಜನರು ಅರ್ಜಿಯನ್ನು ದಾಖಲಿಸಿದ್ದರು. ಅವರ ಪರವಾಗಿ ನ್ಯಾಯವಾದಿ ಶ್ರೀಧರ ಪ್ರಭು ಇವರು ವಾದ ಮಂಡಿಸಿದರು. `ಸೆಕ್ಷನ್ 5(3) ಇದರ ಪ್ರಕಾರ ಬೋಂಗಾ ಮತ್ತು ಸಾರ್ವಜನಿಕ ಭಾಷಣಕ್ಕೆ ಬಳಸುವ ಪರಿಕರಗಳನ್ನು ಬಳಸಲು ಸ್ಥಳೀಯ ಮಟ್ಟದಲ್ಲಿ ಅನುಮತಿಸಲು ಸಾಧ್ಯವಿಲ್ಲ’, ಎಂಬ ಯುಕ್ತಿ ವಾದವನ್ನು ಪ್ರಭು ಇವರು ನ್ಯಾಯಾಲಯದಲ್ಲಿ ಮಂಡಿಸಿದರು.