ಮಸೀದಿಯಲ್ಲಿ ನಮಾಜುಪಠಣ ಹೇಗೆ ಮಾಡಬೇಕು ? ಚರ್ಚ್‌ನಲ್ಲಿ ಪ್ರಾರ್ಥನೆ ಹೇಗೆ ಮಾಡಬೇಕು ? ಈ ವಿಷಯವಾಗಿ ಯಾರೂ ಎಂದಿಗೂ ನ್ಯಾಯಾಲಯಕ್ಕೆ ಹೋಗುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !
ನವ ದೆಹಲಿ – ಯಾವುದೇ ದೇವಸ್ಥಾನದಲ್ಲಿ ಪೂಜೆ ಹೇಗೆ ಮಾಡಬೇಕು, ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ. ತೆಂಗಿನಕಾಯಿ ಹೇಗೆ ಒಡೆಯಬೇಕು ?, ಆರತಿ ಹೇಗೆ ಮಾಡಬೇಕು ? ಎಂಬುದನ್ನು ನ್ಯಾಯಾಲಯ ಹೇಳಲು ಸಾಧ್ಯವಿಲ್ಲ. ದೇವಸ್ಥಾನದ ಪೂಜಾ ವಿಧಿಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಎಂದು ಹೇಳುತ್ತಾ ಸರ್ವೋಚ್ಚ ನ್ಯಾಯಾಲಯವು ಒಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ತೀರ್ಪು ನೀಡಿದೆ. ನ್ಯಾಯಾಲಯವು ಈ ಬಗ್ಗೆ ಹೇಳುತ್ತಾ, ಎಲ್ಲಾದರೂ ಯಾವುದೇ ಕೊರತೆಯಿದ್ದರೆ ಆಗ ಆ ವಿಷಯವಾಗಿ ನಾವು ಹೇಳಬಹುದು; ಆದರೆ ಪೂಜೆ ಮಾಡುವ ಪದ್ಧತಿಯಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’ ಎಂದಿದೆ.
Constitutional Court Can’t Interfere In Daily Rituals Of A Temple : Supreme Court In Tirupati Temple Case @SrishtiOjha11 https://t.co/9k0cmLj79G
— Live Law (@LiveLawIndia) November 16, 2021