ಇಕ್ವಾಡೋರನ ಕಾರಾಗೃಹದಲ್ಲಿ ಕೈದಿಗಳ ಎರಡು ಗುಂಪಿನ ನಡುವೆ ನಡೆದ ಹಿಂಸಾಚಾರದಲ್ಲಿ 68 ಜನರು ಮೃತ


ಕ್ವಿಟೋ (ಇಕ್ವಾಡೋರ) – ಇಕ್ವಾಡೋರನಲ್ಲಿ ಎಲ್ಲಕ್ಕಿಂತ ದೊಡ್ಡ ಕಾರಾಗೃಹವಾಗಿರುವ ‘ಲಿಟೊರಲ ಪೆನಿಟೆಂಶರೀ’ಯಲ್ಲಿ ನವೆಂಬರ್ 13 ರಂದು ಅಮಲು ಪದಾರ್ಥಗಳಿಗೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ಕೈದಿಗಳ ಎರಡು ಗುಂಪಿನ ನಡುವೆ ನಡೆದ ಹಿಂಸಾಚಾರದಲ್ಲಿ 68 ಕೈದಿಗಳು ಮೃತಪಟ್ಟಿದ್ದು 25 ಜನರು ಗಾಯಗೊಂಡಿದ್ದಾರೆ. ಆ ಸಮಯದಲ್ಲಿ ಗುಂಡು ಹಾರಾಟ ನಡೆಸಲಾಯಿತು. ಆ ಹಿಂಸಾಚಾರದ ಸಮಯದಲ್ಲಿ ಎಷ್ಟೋ ಸಮಯದ ವರೆಗೂ ಕಾರಾಗೃಹದಲ್ಲಿನ ಪರಿಸ್ಥಿತಿ ಕೈಮೀರಿ ಹೋಗಿತ್ತು ಎಂದು ಕಾರಾಗೃಹದ ಅಧಿಕಾರಿಗಳು ಮಾಹಿತಿ ನೀಡಿದರು. ಗುಆಸ ಪ್ರಾಂತ್ಯದ ಗವರ್ನರ ಪಾಬ್ಲೋ ಅರೊಸೆಮೆನಾರವು ಈ ಹಿಂಸಾಚಾರವು ಹೆಚ್ಚು ಕಡಿಮೆ 8 ಗಂಟೆಗಳ ಕಾಲ ನಡೆಯಿತು. ಆಗ ಕೈದಿಗಳು `ಡೈನಾಮೈಯಿಟ್’ ಮೂಲಕ ಒಂದು ಗೋಡೆಯನ್ನು ಧ್ವಂಸಗೊಳಿಸಲು ಪ್ರಯತ್ನಿಸಿದರು ಹಾಗೂ ಬೆಂಕಿ ಹಚ್ಚಿದರು ಎಂದು ಹೇಳಿದರು.