ಅಮೇರಿಕಾದಲ್ಲಿ ಔದ್ಯೋಗಿಕ ಕ್ರಾಂತಿಯ ಸಮಯದಲ್ಲಿ, ಅಂದರೆ 171 ವರ್ಷಗಳ ಹಿಂದೆ ಮಹಿಳಾ ವಿಜ್ಞಾನಿಯೊಬ್ಬರು ಹವಾಮಾನ ಬದಲಾವಣೆಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರು !

ನವ ದೆಹಲಿ – ಹತ್ತೊಂಬತ್ತನೇಯ ಶತಮಾನದಲ್ಲಿ ಭೂಮಿ ಹಾಗೂ ಅದರ ಮೇಲಿನ ಜೀವನ ಇವುಗಳ ಭವಿಷ್ಯದ ದೃಷ್ಟಿಯಿಂದ ಹವಾಮಾನದಲ್ಲಾಗುವ ಬದಲಾವಣೆಯ ಅಪಾಯದ ಬಗ್ಗೆ ಮಾನವನಿಗೆ ಎಷ್ಟೋ ಸಲ ಎಚ್ಚರಿಕೆ ನೀಡಲಾಗಿತ್ತು. ಆ ರೀತಿಯ ಒಂದು ಎಚ್ಚರಿಕೆಯನ್ನು 1850 ದಶಕದಲ್ಲಿ ಅಮೇರಿಕಾದಲ್ಲಿನ ಔದ್ಯೋಗಿಕ ಕ್ರಾಂತಿಯ ಸಮಯದಲ್ಲಿ ಯುನಿಸ ನ್ಯೂಟನ ಫೂಟ ಎಂಬ ಮಹಿಳಾ ವಿಜ್ಞಾನಿಯೊಬ್ಬರು ನೀಡಿದ್ದರು. ಹವಾಮಾನ ಬದಲಾವಣೆ ಮತ್ತು ವಿವೇಕವುಳ್ಳ ಮಹಿಳೆಯರಿಗೆ ಸಮಾಜದಲ್ಲಿ ಸಿಗುವ ನಡವಳಿಕೆ ಈ ಭವಿಷ್ಯದ ಘಟನೆಗಳ ಬಗ್ಗೆ ಅವರು ನೀಡಿದ ಸಂಕೇತಗಳನ್ನು ಆಗ ನಿರ್ಲಕ್ಷ್ಯ ಮಾಡಲಾಯಿತು. 1856 ನೇ ಇಸವಿಯಲ್ಲಿ ‘ಅಮೇರಿಕನ ಅಸೋಸಿಯೇಶನ ಫಾರ್ಅ ಡ್‍ವಾನ್ಸಮೆಂಟ ಆಫ್ ಸೈನ್ಸ’ನ ವಾರ್ಷಿಕ ಸಭೆಯಲ್ಲಿ ಯುನಿಸ ಫೂಟರವರಿಗೆ ತಮ್ಮ ಸಂಶೋಧನಾ ಪ್ರಬಂಧವನ್ನು ಪ್ರಸ್ತುತ ಪಡಿಸಲು ಅನುಮತಿಯನ್ನು ನಿರಾಕರಿಸಲಾಯಿತು.

1. `ವಾತಾವರಣದಲ್ಲಿ ಕಾರ್ಬನ ಡೈಆಕ್ಸಾಯಿಡ್‍ನ ಉಚ್ಚ ಮಟ್ಟದಿಂದ ಪೃಥ್ವಿಯ ತಾಪಮಾನದ ಮೇಲೆ ವಿಪರೀತ ಪರಿಣಾಮವಾಗುತ್ತಿದೆ. ವಾತಾವರಣದಲ್ಲಿನ ಕಾರ್ಬನ ಡೈಆಕ್ಸಾಯಿಡ ವಾಯುವಿನಿಂದ ಭೂಮಿಯ ಮೇಲಿನ ಉಷ್ಣಾಂಶವು ಹೆಚ್ಚಾಗುತ್ತಿದೆ’, ಎಂದು ಯುನಿಸ ಫೂಟರವರು ತಮ್ಮ ಸಂಶೋಧನೆಯಿಂದ ಸಾಬೀತು ಪಡಿಸಿದ್ದರು; ಆದರೆ ಹವಾಮಾನ ವಿಜ್ಞಾನ ಕ್ಷೇತ್ರವು ಅದನ್ನು ಸರಿಯಾದ ಸಮಯಕ್ಕೆ ದಾಖಲಿಸಿಕೊಳ್ಳಲಿಲ್ಲ.

2. ಕಳೆದ 140 ವರ್ಷಗಳಲ್ಲಿ ಭೂಮಿಯ ಮೇಲಿನ ಸರಾಸರಿ ಉಷ್ಣಾಂಶವು ಶೇಕಡಾ 2.2 `ಫ್ಯಾರನ್.ಹೀಟ’ ಹೆಚ್ಚಾಗಿದೆ. ಯುನಿಸ ಫೂಟರವರ ಸಂಶೋಧನೆಯ ಬಗ್ಗೆ ಆಗಲೇ ಗಮನ ಹರಿಸಿದ್ದರೆ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ, ಎಂದು ಹವಾಮಾನ ವಿಜ್ಞಾನ ಕ್ಷೇತ್ರದಲ್ಲಿನ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.