ಮತಾಂಧರನ್ನು ತುಷ್ಟಿಕರಿಸಿ ಕೋಮುಗಲಭೆಯನ್ನು ಭುಗಿಲೆಬ್ಬಿಸುವ ಪೊಲೀಸ್ ಅಧಿಕಾರಿ ಮತ್ತು ಮತಾಂಧರ ಮೇಲೆ ಕಾರ್ಯಾಚರಣೆ ನಡೆಸಿ ಗಲಭೆಯನ್ನು ಶಮನಗೊಳಿಸುವ ಪೊಲೀಸ್ ಅಧಿಕಾರಿ !

ಸರಕಾರವು ಕೋಮುಗಲಭೆಗಳ ಸಮಯದಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವ ಪೊಲೀಸರ ಮೇಲೆ ಕಠಿಣ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ

ಸುರಾಜ್ಯ ಸ್ಥಾಪನೆಯ ಒಂದು ಅಂಗ : ಆದರ್ಶ ಪೊಲೀಸರು

ಪೊಲೀಸರ ಬಗ್ಗೆ ಓದಲು ಸಿಗುವ ವಾರ್ತೆಗಳು, ಅವರ ಚಲನಚಿತ್ರಗಳಲ್ಲಿ ತೋರಿಸಲಾಗುವ ಖಳನಾಯಕೀಕರಣ ಮತ್ತು ಅನೇಕ ಬಾರಿ ನಮ್ಮ ಅನುಭವಗಳಿಂದ ಪೊಲೀಸರು ಮತ್ತು ಸಮಾಜದಲ್ಲಿ ಅಂತರ ನಿರ್ಮಾಣವಾಗಿರುವುದು ಕಂಡುಬರುತ್ತದೆ. ನಿಜವಾಗಿಯೂ ಇದು ಬದಲಾಗಬೇಕು. ಸಮಾಜ ಅದರ್ಶವಾಗಿದ್ದರೆ, ಪೊಲೀಸರೂ ಆದರ್ಶರಾಗುತ್ತಾರೆ ಮತ್ತು ಪೊಲೀಸರು ಆದರ್ಶವಾದರೆ, ಸಮಾಜವೂ ಆದರ್ಶದ ಕಡೆಗೆ ಹೊರಳುತ್ತದೆ. ಈ ರೀತಿ ಇದು ಪರಸ್ಪರರ ಮೇಲೆ ಅವಲಂಬಿಸಿರುವುದರಿಂದ ಜಾಗೃತಿಗಾಗಿ ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ. – ಸಂಪಾದಕರು

೧. ಗಲಭೆಯ ಸಮಯದಲ್ಲಿ ಹಿಂದೂ ವಸತಿಗಳಲ್ಲಿ ಹೆಚ್ಚಿನ ಭದ್ರತೆಯನ್ನು ಇಡುವ ಮತ್ತು ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯ ಕೊಡುವ ಪೊಲೀಸರು !

‘೧೯೮೭-೮೮ ರಲ್ಲಿ ಒಂದು ನಗರದಲ್ಲಿ ಹಿಂದೂ ಮತ್ತು ಅಲ್ಪಸಂಖ್ಯಾತರಲ್ಲಿ ಗಲಭೆಯಾಗಿತ್ತು. ನಗರದಲ್ಲಿ ಗಲಭೆಯ ಪರಿಣಾಮ ೧೦ ದಿನಗಳ ಕಾಲ ಇತ್ತು. ಇಂತಹ ಗಲಭೆಗಳ ಸಮಯದಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ದೊಡ್ಡ ಪ್ರಮಾಣದಲ್ಲಿರುತ್ತದೆ. ಆದುದರಿಂದ ಪೊಲೀಸರಿಗೆ ಪ್ರತಿದಿನ ಸರಕಾರಕ್ಕೆ ವರದಿಯನ್ನು ಕೊಡಬೇಕಾಗುತ್ತದೆ. ಇದು ಒಂದು ರೀತಿಯ ತಲೆನೋವೇ ಆಗಿರುತ್ತದೆ. ಇಂತಹ ಎಲ್ಲ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಮತಾಂಧರ ವಿಷಯದಲ್ಲಿ ‘ಸಾಫ್ಟ್ ಕಾರ್ನರ್’ ಆಗಿರುತ್ತಾರೆ. ಅಲ್ಪಸಂಖ್ಯಾತರು ಪೊಲೀಸರ ವಿರುದ್ಧ ಎಲ್ಲಿಯೂ ಧ್ವನಿ ಎತ್ತದಂತೆ ಎಚ್ಚರ ವಹಿಸುತ್ತಾರೆ. ಗಲಭೆಯ ಸಮಯದಲ್ಲಿ ಪೊಲೀಸ್ ಅಧೀಕ್ಷಕರು ಹಿಂದೂಗಳ ವಸತಿಗಳಲ್ಲಿ ಹೆಚ್ಚೆಚ್ಚು ಪೊಲೀಸ್‌ರನ್ನು ಮತ್ತು ಅಲ್ಪಸಂಖ್ಯಾತರ ವಸತಿಗಳಲ್ಲಿ ಕಡಿಮೆ ಪೊಲೀಸರನ್ನು ನೇಮಿಸಿದ್ದರು.

೨. ಮತಾಂಧರಿಂದ ಹಿಂದೂ ವಸತಿಗಳ ಮೇಲೆ ದಾಳಿಯಾಗುವುದು ಮತ್ತು ಪೊಲೀಸರು ಆದೇಶವಿಲ್ಲವೆಂದು ಮೂಕ ಪ್ರೇಕ್ಷಕರಾಗುವುದು, ಇದರಿಂದ ಗಲಭೆಯಲ್ಲಿ ಹಿಂದೂಗಳೇ ಹೆಚ್ಚು ಸಂಖ್ಯೆಯಲ್ಲಿ ಗಾಯಗೊಳ್ಳುವುದು

ಅಲ್ಪಸಂಖ್ಯಾತರಿಗೆ ಪೂರ್ಣ ಸ್ವಾತಂತ್ರ್ಯ ಸಿಕ್ಕಿರುವುದರಿಂದ ಅವರು ರಾತ್ರಿಯ ಸಮಯದಲ್ಲಿ ಹಿಂದೂಗಳ ವಸತಿಗಳ ಮೇಲೆ ದಾಳಿ ಮಾಡಿ ಹಿಂದೂಗಳನ್ನು ಥಳಿಸಿ ಓಡಿ ಹೋಗುತ್ತಿದ್ದರು. ಕೆಲವೊಮ್ಮೆ ಪೊಲೀಸರಿಗೂ ಮತಾಂಧರಿಂದ ಹೊಡೆತಗಳು ಬೀಳುತ್ತಿದ್ದವು; ಆದರೆ ಯೋಗ್ಯ ಆದೇಶವಿಲ್ಲವೆಂದು ಅವರು ಮೂಕ ಪ್ರೇಕ್ಷಕರಂತೆ ಇರಬೇಕಾಗುತ್ತಿತ್ತು. ಸಹಜವಾಗಿಯೇ ಮತಾಂಧರಿಗಿಂತ ಹಿಂದೂಗಳು ಗಾಯಗೊಳ್ಳುವ ಪ್ರಮಾಣ ಬಹಳಷ್ಟಿತ್ತು. ಈ ಸಮಯದಲ್ಲಿ ಪೊಲೀಸರಿಗೆ ಹಗಲುರಾತ್ರಿ ಕರ್ತವ್ಯವನ್ನು ನಿಭಾಯಿಸಬೇಕಾಗುವುದರಿಂದ ಅವರು ಬೇಸತ್ತು ಹೋಗುತ್ತಿದ್ದರು. ಗಲಭೆಯು ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಅದೇ ಸಮಯದಲ್ಲಿ ಆಗಿನ ಪೊಲೀಸ್ ಅಧೀಕ್ಷಕರನ್ನು ಒಮ್ಮೆಲೆ ಸ್ಥಳಾಂತರಿಸಲಾಯಿತು.

೩. ಹೊಸ ಪೊಲೀಸ್ ಅಧೀಕ್ಷಕರಿಗೆ ಪೊಲೀಸ್ ಭದ್ರತೆಯ ಕರ್ತವ್ಯದಲ್ಲಿದ್ದ ತಪ್ಪು ಪದ್ಧತಿಯಲ್ಲಿ ಇಟ್ಟಿರುವುದು ಗಮನಕ್ಕೆ ಬಂದಾಗ ಅವರು ಗಲಭೆಕೋರರ ಮೇಲೆ ಗುಂಡು ಹಾರಿಸಲು ಆದೇಶ ನೀಡುವುದು ಮತ್ತು ಅವರ ಸ್ಪಷ್ಟ ಕೃತಿಯಿಂದ ಭದ್ರತೆಗಾಗಿರುವ ಅಧಿಕಾರಿಗಳು ಮತ್ತು ಪೊಲೀಸರಿಗೆ ಧೈರ್ಯ ಬರುವುದು

ಹೊಸದಾಗಿ ಬಂದ ಪೊಲೀಸ್ ಅಧೀಕ್ಷಕರು ತಮ್ಮ ಕಾರ್ಯಭಾರವನ್ನು ಸ್ವೀಕರಿಸಿದ ನಂತರ ಮೊದಲು ಗಲಭೆಯ ವೃತ್ತಾಂತವನ್ನು ತಿಳಿದುಕೊಂಡರು ಮತ್ತು ಹೆಚ್ಚು ಗಾಯಗೊಂಡವರ ಅಧ್ಯಯನ ಮಾಡಿದರು. ಅವರು ನಗರದಲ್ಲಿನ ಗಲಭೆ ಪೀಡಿತ ಪ್ರದೇಶಗಳ ನಿರೀಕ್ಷಣೆ ಮಾಡಿದರು, ಆಗ ಅವರಿಗೆ ನಗರದಲ್ಲಿ ಅಯೋಗ್ಯ ಪದ್ಧತಿಯಿಂದ ಭದ್ರತೆಯನ್ನು ಮಾಡಿರುವುದು ಗಮನಕ್ಕೆ ಬಂದಿತು. ಅನಂತರ ಅವರು ಹಿಂದೂ ವಸತಿಗಳಿರುವಲ್ಲಿ ಆದಷ್ಟು ಕಡಿಮೆ ಭದ್ರತೆಯ ವ್ಯವಸ್ಥೆಯನ್ನು ಮಾಡಿ ಅಲ್ಪಸಂಖ್ಯಾತರ ವಸತಿಗಳಲ್ಲಿ ಹೆಚ್ಚಿನ ಭದ್ರತೆಯ ವ್ಯವಸ್ಥೆಯನ್ನು ಮಾಡಿದರು. ಅವರು ಗಲಭೆಕೋರರು ಕಂಡಲ್ಲಿ ಗುಂಡು ಹಾರಿಸಲು ಆದೇಶ ನೀಡಿದರು. ಈ ಸಮಯದಲ್ಲಿ ಅವರು ‘ಸರಕಾರಕ್ಕೆ ಏನು ಉತ್ತರ ಕೊಡಬೇಕಾಗುವುದೋ, ಅದನ್ನು ನಾನು ಕೊಡುವೆನು’, ಎಂದು ಸ್ಪಷ್ಟವಾಗಿ ಹೇಳಿದರು. ಇದರಿಂದ ಭದ್ರತೆಗಿರುವ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಧೈರ್ಯ ಬಂದಿತು. ಈ ವಾರ್ತೆಯು ಕೂಡಲೇ ನಗರದಲ್ಲಿ ಹರಡಿತು.

೪. ಪೊಲೀಸರು ಓಣಿಗಳಲ್ಲಿ ನುಗ್ಗಿ ಲಾಠಿ ಪ್ರಯೋಗಿಸಿದಾಗ ಗಲಭೆಯು ಶಾಂತವಾಗುವುದು ಮತ್ತು ಪೊಲೀಸರಿಗೆ ಆದೇಶ ಸಿಗುವುದು ಎಷ್ಟು ಆವಶ್ಯಕವಾಗಿದೆ ಎಂಬುದು ಇದರಿಂದ ಗಮನಕ್ಕೆ ಬರುವುದು

ಅದೇ ರಾತ್ರಿ ಪೊಲೀಸರು ಒಂದು ಓಣಿಯಲ್ಲಿ ನುಗ್ಗಿ ಲಾಠಿ ಚಾರ್ಜ್ (ಗಲಭೆಕೋರರನ್ನು ಲಾಠಿಯಿಂದ ಹೊಡೆಯುವುದು) ಮಾಡಿದರು. ಇದರ ಪರಿಣಾಮದಿಂದ ಮರುದಿನ ಕೂಡಲೇ ಗಲಭೆಯು ಶಾಂತವಾಯಿತು. ಆ ಅಧಿಕಾರಿಗಳ ಮುಂದಿನ ಕಾಲಾವಧಿಯು ಶಾಂತಿಯಿಂದ ಕಳೆಯಿತು. ಅಧಿಕಾರವಿದ್ದರೂ, ಅದನ್ನು ಉಪಯೋಗಿಸುವ ಧೈರ್ಯವಿರಬೇಕಾಗುತ್ತದೆ. ಹಿಂದಿನ ಪೊಲೀಸ್ ಅಧೀಕ್ಷಕರಿಗೆ ಗಲಭೆಯು ಯಾರಿಂದಾಗಿ ಆಗುತ್ತಿದೆ, ಎಂಬ ಕಲ್ಪನೆಯಿತ್ತು. ಆದರೆ ಅವರು ಕೇವಲ ರಾಜಕೀಯ ಭಯದಿಂದ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯ ಕೊಟ್ಟಿದ್ದರು. ಪೊಲೀಸರು ಗಲಭೆಯನ್ನು ನಿಯಂತ್ರಣಕ್ಕೆ ತರಬಹುದು; ಆದರೆ ಅವರಿಗೆ ಆದೇಶ ನೀಡುವ ಆವಶ್ಯಕತೆ ಇರುತ್ತದೆ. ಇಲ್ಲದಿದ್ದರೆ ಅವರು ಮೂಕಪ್ರೇಕ್ಷಕರಾಗಬೇಕಾಗುತ್ತದೆ ಮತ್ತು ಹೊಡೆತಗಳನ್ನೂ ತಿನ್ನಬೇಕಾಗುತ್ತದೆ’.

– ಓರ್ವ ಪೊಲೀಸ್ ಅಧಿಕಾರಿ

ಸಾಧಕರಿಗೆ ಸೂಚನೆ ಮತ್ತು ವಾಚಕರು ಮತ್ತು ಹಿತಚಿಂತಕರಿಗೆ ವಿನಂತಿ !

ಪೊಲೀಸರು ಮತ್ತು ಆಡಳಿತ ಇವರಿಗೆ ಸಂಬಂಧಿಸಿದಂತೆ ಬರುವ ಕಹಿ ಅನುಭವಗಳನ್ನು ತಿಳಿಸಿ !

ಪೊಲೀಸರು ಮತ್ತು ಆಡಳಿತದವರ ಬಗ್ಗೆ ಕಹಿ ಅನುಭವಗಳು ಬಂದಿದ್ದರೆ ಅವುಗಳನ್ನು ಮುಂದೆ ನೀಡಲಾದ ವಿಳಾಸಕ್ಕೆ ಕಳುಹಿಸಬೇಕು. ಈ ಲೇಖನದ ಉದ್ದೇಶವೆಂದರೆ ‘ಪೊಲೀಸರು ಮತ್ತು ಆಡಳಿತ ಹೇಗಿರಬಾರದು’ ಎಂಬುದು ಗಮನಕ್ಕೆ ಬರಬೇಕು, ಸಂಬಂಧಿಕರಿಗೆ ಅವರ ಅಯೋಗ್ಯ ಕೃತಿಗಳ ಅರಿವಾಗಿ ಅವರು ಅದರಲ್ಲಿ ಸುಧಾರಣೆಯನ್ನು ಮಾಡಿಕೊಳ್ಳಬೇಕು ಮತ್ತು ನಾಗರಿಕರು ತಮ್ಮ ರಾಷ್ಟ್ರಕರ್ತವ್ಯವೆಂದು ಇಂತಹ ವಿಷಯಗಳನ್ನು ದುರ್ಲಕ್ಷಿಸದೇ ಅವುಗಳನ್ನು ಸುಧಾರಿಸಲು ಪ್ರಯತ್ನಿಸಬೇಕು, ಹಾಗೆ ಸಮಯ ಬಂದಾಗ, ಅವರ ವಿರುದ್ಧ ದೂರನ್ನು ನೀಡಬೇಕು, ಎಂಬುದಾಗಿದೆ.

ವಿಳಾಸ : ನ್ಯಾಯವಾದಿ ನೀಲೇಶ ಸಾಂಗೋಲಕರ, ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ

ಸಂಪರ್ಕ ಕ್ರಮಾಂಕ : 9595984844

ವಿ-ಅಂಚೆ : [email protected]