ಚಲನಚಿತ್ರಗಳಲ್ಲಿ ಮುಸಲ್ಮಾನರನ್ನು ನಕಾರಾತ್ಮಕವಾಗಿ ಬಿಂಬಿಸುವುದನ್ನು ಬದಲಾಯಿಸಲು ಅಮೇರಿಕಾದ ಒಂದು ಗುಂಪಿನ ಪ್ರಯತ್ನ

* ಚಲನಚಿತ್ರಗಳಲ್ಲಿ ಬೇರೆ ಯಾವುದೇ ಧರ್ಮಗಳಿಗಿಂತ ಮುಸಲ್ಮಾನರನ್ನು ನಕಾರಾತ್ಮಕವಾಗಿ ಏಕೆ ಬಿಂಬಿಸಲಾಗುತ್ತದೆ, ಎಂದು ಅವರು ಯಾವಾಗ ವಿಚಾರ ಮಾಡಲಿದ್ದಾರೆ ?- ಸಂಪಾದಕರು

* ಜಿಹಾದಿ ಭಯೋತ್ಪಾದನೆ, ಅಪರಾಧಗಳಲ್ಲಿ ಮಂಚೂಣಿಯಲ್ಲಿ ಯಾರಿದ್ದಾರೆ, ಎಂಬುದು ಜಗತ್ತಿಗೆ ತಿಳಿದಿದೆ ಹಾಗೂ ಅದನ್ನೇ ಚಲನಚಿತ್ರಗಳಲ್ಲಿ ತೋರಿಸುತ್ತಿದ್ದರೆ ಅದನ್ನು ನಕಾರಾತ್ಮಕವೆಂದು ಹೇಗೆ ಹೇಳಲು ಸಾಧ್ಯ ?- ಸಂಪಾದಕರು

ನವ ದೆಹಲಿ – ಚಲನಚಿತ್ರಗಳಲ್ಲಿ ಮುಸಲ್ಮಾನರನ್ನು ನಕಾರಾತ್ಮಕವಾಗಿ ಬಿಂಬಿಸಲಾಗುತ್ತಿದೆ. ಅದನ್ನು ಸುಧಾರಿಸಲು ಅಮೇರಿಕಾದ `ಪಿಲರ್ಸ್’ ಹೆಸರಿನ ಗುಂಪು ವಾಲ್ಟ ಡಿಸ್ನಿ ಸಂಸ್ಥೆಯೊಂದಿಗೆ ಸೇರಿ ಒಂದು ಯೋಜನೆಯನ್ನು ರೂಪಿಸುತ್ತಿದೆ. ಈ ಗುಂಪು ಈ ಮೊದಲು ಚಲನಚಿತ್ರಗಳಿಂದ ಮುಸಲ್ಮಾನರನ್ನು ನಕಾರಾತ್ಮಕವಾಗಿ ಬಿಂಬಿಸಲಾಗುತ್ತಿದೆ ಎಂದು ವರದಿಯನ್ನು ಸಿದ್ದಪಡಿಸಿತ್ತು. ಈ ಸಂಘಟನೆಯ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಕಾಶಿಫ ಶೇಖರವರು, ನಾವು ಮುಸಲ್ಮಾನ ಕಲಾವಿದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಅದರಲ್ಲಿ ನಟರು, ನಿರ್ದೇಶಕರು, ಸಂಗೀತಕಾರರು ಇತ್ಯಾದಿಗಳ ಸಮಾವೇಶವಿದೆ. ಅವರನ್ನು ಚಲನಚಿತ್ರೋದ್ಯಮಗಳಲ್ಲಿ ಕೆಲಸ ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.

ಅಮೇರಿಕಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ನ್ಯೂಝೀಲ್ಯಾಂಡ್‍ನಲ್ಲಿ 2017 ಮತ್ತು 2019 ವರ್ಷಗಳಲ್ಲಿ ಪ್ರಸಾರಗೊಂಡ ಚಲನಚಿತ್ರಗಳ ಆಧಾರದಲ್ಲಿ ಒಂದು ವರದಿಯನ್ನು ತಯಾರಿಸಲಾಯಿತು. ಈ ಚಲನಚಿತ್ರಗಳಲ್ಲಿ ಶೇ. 39 ರಷ್ಟು ಮುಸಲ್ಮಾನ ಪಾತ್ರಗಳನ್ನು ಹಿಂಸಾಚಾರ ಮಾಡುತ್ತಿರುವಂತೆ ತೋರಿಸಲಾಗಿತ್ತು. ಕೆಟ್ಟ ಪಾತ್ರಗಳಲ್ಲಿರುವ ಪಾತ್ರಗಳಲ್ಲಿ ಶೇ. 75ರಷ್ಟು ಪಾತ್ರಗಳು ಇಸ್ಲಾಮ್‍ನ ಉಡುಪು ತೊಟ್ಟಿರುವುದನ್ನು ತೋರಿಸಲಾಗಿತ್ತು.