೧. ಪಾಪ ಮತ್ತು ಪುಣ್ಯ
೧ ಅ. ಪಾಪ
೧ ಅ ೧. ಸುಖ ಮತ್ತು ದುಃಖಗಳ ಲೆಕ್ಕಚಾರ : ‘ಜೀವವಿಡಿ ಪಾಪವನ್ನು ಮಾಡುತ್ತೇವೆ ಮತ್ತು ‘ಸುಖ ಇಲ್ಲ’ ಎನ್ನುತ್ತೇವೆ. ನೀನು ಇನ್ನೊಬ್ಬರಿಗೆ ದುಃಖವನ್ನು ಕೊಟ್ಟರೆ, ಸುಖವು ಎಲ್ಲಿಂದ ಸಿಗುತ್ತದೆ ? ನೀನು ಇನ್ನೊಬ್ಬರಿಗೆ ಸುಖವನ್ನು ಕೊಟ್ಟರೆ, ನಿನಗೆ ಸುಖವು ಸಿಗುವುದು. ನೀನು ಇನ್ನೊಬ್ಬರಿಗೆ ದುಃಖವನ್ನು ಕೊಟ್ಟರೆ, ದೇವರು ನಿನ್ನನ್ನು ದುಃಖದಲ್ಲಿ ಮುಳುಗಿಸದೆ ಬಿಡುವುದಿಲ್ಲ.’
೧ ಅ ೨. ಭಗವಂತನು ನೀವು ಮಾಡುತ್ತಿರುವ ಕರ್ಮದ ನೋಂದಣಿಯನ್ನು ಇಟ್ಟುಕೊಳ್ಳುವನು ಮತ್ತು ನಾವು ಮಾಡಿದ ಕೆಟ್ಟ ಕರ್ಮಗಳ ಫಲಗಳನ್ನು ಸತ್ತ ನಂತರ ಭೋಗಿಸಲೇ ಬೇಕಾಗುವುದು : ‘ಪಾಪಗಳನ್ನು ಮಾಡಬೇಡಿ ಮತ್ತು ಕರ್ಮಗೇಡಿಗಳಾಗಬೇಡಿ. ಯಾರನ್ನು ‘ಬ್ಲಾಕ್‌ಮೇಲ್’ ಮಾಡಬೇಡಿರಿ. ಭಗವಂತನು ನೋಡುತ್ತಿದ್ದಾನೆ. ಅವನ ಕಣ್ಣುಗಳು ಆಕಾಶದಷ್ಟು ದೊಡ್ಡದಾಗಿವೆ. ನಮ್ಮ ಕಣ್ಣುಗಳು ತುಂಬಾ ಚಿಕ್ಕದಾಗಿವೆ. ದೇವರು ನೀವು ಮಾಡುತ್ತಿರುವ ಕರ್ಮದ ನೋಂದಾಣಿಯನ್ನು ಇಟ್ಟುಕೊಳ್ಳುತ್ತಾನೆ. ಮಾಡಿದ ಕೆಟ್ಟ ಕರ್ಮದ ಫಲಗಳನ್ನು ಸತ್ತ ನಂತರ ಭೋಗಿಸಲೇ ಬೇಕಾಗುತ್ತದೆ. ನೀವು ಮಾಡಿದ ಪಾಪಕ್ಕೆ ನಿಮ್ಮ ಮನೆಯಲ್ಲಿ ಯಾರೂ ಪಾಲುದಾರರಾಗುವುದಿಲ್ಲ. ರತ್ನಾಕರಬೇಡನ ಪಾಪದಲ್ಲಿ ಯಾರೂ ಪಾಲ್ಗೊಳ್ಳಲಿಲ್ಲ. ನಮ್ಮ ಸ್ಥಿತಿ ಹಾಗೆ ಆಗುವುದು.’
೧ ಅ ೩. ಪಾಪ ದುಃಖಗಳನ್ನು ಭೋಗಿಸಿ ಅಥವಾ ಭಕ್ತಿಯನ್ನು ಮಾಡಿ ಪುಣ್ಯವನ್ನು ಸಂಗ್ರಹಿಸಿಯೇ ತೀರಿಸಬೇಕಾಗುವುದು, ಎಲ್ಲಿಯೂ ಮತ್ತು ಯಾವುದೇ ಪಾಪವನ್ನು ಮಾಡಿದರೂ ಅದನ್ನು ಭಗವಂತನಿಂದ ಮಚ್ಚಿಡಲು ಸಾಧ್ಯವಿಲ್ಲ : ‘ಪಾಪವನ್ನು ಮಾಡುವಾಗ ಒಳ್ಳೆಯದೆನಿಸುತ್ತದೆ, ಮಜಾ ಎನಿಸುತ್ತದೆ; ಆದರೆ ಆ ಪಾಪವನ್ನು ತೀರಿಸುವಾಗ ಶಿಕ್ಷೆಯಾಗುತ್ತದೆ. ದೇವರು ನಮ್ಮನ್ನು ನೋಡುತ್ತಿದ್ದಾನೆ. ಅವನ ಬಳಿ ದೊಡ್ಡ ಪಾಪ-ಪುಣ್ಯದ ಪುಸ್ತಕದ ಲೆಕ್ಕವಿದೆ. ಕತ್ತಲಿನಲ್ಲಿ ಏನೇ ಮಾಡಿದರೂ, ಅದು ಮುಚ್ಚಿಡಲಾಗುವುದಿಲ್ಲ. ಮಾಡಿದ ಪಾಪ, ದುಃಖವನ್ನು ಭೋಗಿಸಿ ತೀರಿಸಬೇಕಾಗುತ್ತದೆ ಅಥವಾ ಭಕ್ತಿಯನ್ನು ಮಾಡಿ ಪುಣ್ಯವನ್ನು ಸಂಪಾದಿಸಿ ತೀರಿಸಬೇಕಾಗುತ್ತದೆ. ಹೀಗೆ ಪಾಪವನ್ನು ತೀರಿಸಲು ಎರಡೇ ಮಾರ್ಗಗಳಿವೆ. ಅದನ್ನೂ ಇಲ್ಲಿಯೇ ತೀರಿಸಲಾಗುವುದು. ಸತ್ತ ನಂತರ ಶರೀರವು ಇರದಿದ್ದರೆ, ಪೂಜೆ, ಧ್ಯಾನ ಮತ್ತು ನಾಮಸ್ಮರಣೆ ಹೇಗೆ ಆಗುತ್ತದೆ ? ಪಾಪ ಮಾಡಿದ ಮನುಷ್ಯನಿಗೆ ಮೃತ್ಯುವಿನ ನಂತರ ತುಂಬಾ ದುಃಖವನ್ನು ಭೋಗಿಸಬೇಕಾಗುತ್ತದೆ.’
೧ ಅ ೪. ಕರ್ಮದ ಫಲವನ್ನು ಭೋಗಿಸುವಂತಾಗಬಾರದೆಂದು; ‘ನಮ್ಮ ಕೈಯಿಂದ ಪಾಪವೇ ಘಟಿಸಬಾರದು’, ಎಂದು ಎಚ್ಚರಿಕೆಯನ್ನು ವಹಿಸಬೇಕು ! : ‘ನಿಮ್ಮ ಮನೆಗೆ ಯಾವ ರೋಗವನ್ನು ಕಳುಹಿಸಬೇಕು ? ದೊಡ್ಡದು ಕಳುಹಿಸಬೇಕೋ ಚಿಕ್ಕದು ಕಳುಹಿಸಬೇಕೋ ?’, ಎಂಬುದು ದೇವರ ಕೈಯಲ್ಲಿದೆ. ದೊಡ್ಡದೊಡ್ಡ ರೋಗಗಳ ಬಗ್ಗೆ ಮೇಲೆ ಸಭೆ ಸೇರುತ್ತದೆ. ‘ಮೃತ್ಯುವನ್ನು ಯಾರಲ್ಲಿಗೆ ಕಳುಹಿಸಬೇಕು ? ರೋಗವನ್ನು ಎಲ್ಲಿ ಕಳುಹಿಸಬೇಕು ? ಸಂಕಟಗಳನ್ನು ಎಲ್ಲಿ ಕಳುಹಿಸಬೇಕು ?’, ಎಂಬುದು ದೇವರೇ ನಿಶ್ಚಯಿಸುತ್ತಾರೆ ಮತ್ತು ಕೆಳಗೆ ಬಂದ ನಂತರ ಆ ‘ಮಿಠಾಯಿ’ಯ ಪೆಟ್ಟಿಗೆಯು ಅಪ್ಪಳಿಸುತ್ತದೆ. ಅವನ ಕರ್ಮವು ಹೇಗೆ ಇರುತ್ತದೆಯೋ, ಅದರಂತೆ ಅವನಿಗೆ ಬಹುಮಾನ ಸಿಗುತ್ತದೆ. ನೀವು ಪಾಪಿಗಳಂತೆ ನಡೆದುಕೊಂಡಿದ್ದರೆ, ನಿಮ್ಮ ಮನೆಯಲ್ಲಿ ಕಿವುಡ, ಕುರುಡ, ಕುಂಟ, ಮಂದಬುದ್ಧಿ ಇಂತಹ ಮಕ್ಕಳು ಜನಿಸುತ್ತಾರೆ. ಅಂದರೆ ಜನ್ಮವಿಡಿ ತಮ್ಮ ಕರ್ಮದ ಫಲವನ್ನು ಭೋಗಿಸಿ. ಅದಕ್ಕಾಗಿ ‘ನಮ್ಮ ಕೈಯಿಂದ ಯಾವುದೇ ಪಾಪ ಘಟಿಸಬಾರದು’, ಎಂದು ಎಚ್ಚರಿಕೆ ವಹಿಸಬೇಕು. ಪುಣ್ಯದಿಂದ ಸುಖ ಮತ್ತು ಪಾಪದಿಂದ ದುಃಖವು ಬಂದೇ ಬರುತ್ತದೆ. ಎಚ್ಚರಿಕೆಯಿಂದಿರಿ, ಸತ್ಯದ ಮಾರ್ಗದಲ್ಲಿ ನಡೆಯಿರಿ, ಧರ್ಮಕ್ಕನುಸಾರ ವರ್ತಿಸಿರಿ, ನೀತಿಯಿಂದ ನಡೆದುಕೊಳ್ಳಿರಿ, ಪರೋಪಕಾರವನ್ನು ಮಾಡಿರಿ, ಆಗ ಸುಖವು ನಿಮ್ಮ ಮನೆಯಲ್ಲಿ ನೀರು ತುಂಬುವುದು. ನಿಮ್ಮ ಮನೆಯಲ್ಲಿ ಲಕ್ಷ್ಮೀಯು ಸದೈವ ವಾಸಿಸಲು ಬರುವಳು. ಧನವನ್ನು ನೀಡುವಳು ಮತ್ತು ನಿಮಗೆ ಯಾವುದು ಕಡಿಮೆ ಬೀಳುವುದಿಲ್ಲ.’
– ಪೂ. (ಹ.ಭ.ಪ.) ಸಖಾರಾಮ ರಾಮಜಿ ಬಾಂದ್ರೆ (೭೦ ವರ್ಷ), ಕಾತಳವಾಡಿ, ತಾ. ಚಿಪಳೂಣ, ರತ್ನಾಗಿರಿ ಜಿಲ್ಲೆ. (ಮಹಾರಾಷ್ಟ್ರ)
(ಪೂ. ಸಖಾರಾಮ ಬಾಂದ್ರೆ ಮಹಾರಾಜರ ಈ ಲೇಖನಗಳು ೨೦೦೫ ರಿಂದ ೨೦೨೦ ಈ ಅವಧಿಯದ್ದು)
(ಆಧಾರ : ಶೀಘ್ರದಲ್ಲಿ ಸನಾತನ ಸಂಸ್ಥೆಯು ಪ್ರಕಟಿಸಲಾಗುವ ಗ್ರಂಥದಿಂದ)