ಗುಜರಾತ್‍ಗೆ ಪಾಕಿಸ್ತಾನದಿಂದ ಸಮುದ್ರಮಾರ್ಗದಿಂದ ಬಂದಿದ್ದ 300 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳು ಜಪ್ತಿ

ಗಾಂಧಿನಗರ (ಗುಜರಾತ) – ಗುಜರಾತ್ ಪೊಲೀಸರು ದ್ವಾರಕಾ ಜಿಲ್ಲೆಯಲ್ಲಿ 300 ಕೋಟಿ ರೂಪಾಯಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಲವು ವಾರಗಳ ಮೊದಲು ಕಚ್ಛನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಹೆಚ್ಚು ಕಡಿಮೆ ಮೂರು ಸಾವಿರ ಕಿಲೋ ಮಾದಕ ವಸ್ತುಗಳ ಪತ್ತೆಯಾಗಿತ್ತು. ಅದರ ನಂತರ ಇದು ಎರಡನೆಯ ದೊಡ್ಡ ಕಾರ್ಯಾಚರಣೆಯಾಗಿದೆ. ಈ ಮಾದಕ ವಸ್ತುಗಳು ಪಾಕಿಸ್ತಾನದಿಂದ ಸಮುದ್ರಮಾರ್ಗವಾಗಿ ಗುಜರಾತ್‍ಗೆ ತರಲಾಗುತ್ತಿತ್ತು, ಎಂದು ಹೇಳಲಾಗುತ್ತಿದೆ.

1. ಈ ಪ್ರಕರಣದಲ್ಲಿ ಸಜ್ಜಾದ ಎಂಬಾತನನ್ನು ಬಂಧಿಸಲಾಗಿದೆ. ಆತನಲ್ಲಿ 19 ಪ್ಯಾಕೆಟುಗಳು ಸಿಕ್ಕಿವೆ. ಆತ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಮುಂಬ್ರಾ ನಿವಾಸಿಯಾಗಿದ್ದಾನೆ. ಆತ ಇಲ್ಲಿ ತರಕಾರಿ ಮಾರುವ ವ್ಯವಸಾಯ ಮಾಡುತ್ತಿದ್ದಾನೆ. ಆತನಿಗೆ ಗುಜರಾತನ ಜಾಮನಗರದಲ್ಲಿ ವಾಸವಾಗಿರುವ ಸಲಿಮ ಯಾಕೂಬ್ ಕರಾ ಮತ್ತು ಅಲಿ ಯಾಕೂಬ್ ಕಾರಾ ಇವರಿಬ್ಬರು ಮಾದಕ ವಸ್ತುಗಳು ನೀಡಿದ್ದಾರೆ ಎಂದು ಹೇಳಿದ್ದಾನೆ. ಅದರ ನಂತರ ಅವರಿಬ್ಬರ ಮನೆಯ ಮೇಲೆ ದಾಳಿ ನಡೆಸಿ 47 ಪ್ಯಾಕೇಟುಗಳನ್ನು ವಶಪಡಿಸಲಾಗಿದೆ.

2. ಸಜ್ಜಾದ್ ಈತನು ಒಂದು ಹತ್ಯೆಯ ಪ್ರಕರಣದಲ್ಲಿ ಸೆರೆಮನೆಯಲ್ಲಿದ್ದನು. ಸಲಿಮ ಕರಾ ಇವನಿಗೆ ಈ ಮೊದಲು ಮಾದಕ ವಸ್ತು ವಿರೋಧಿ ಕಾನೂನಿನನ್ವಯ ಕ್ರಮ ತೆಗೆದುಕೊಂಡು ಬಂಧಿಸಲಾಗಿತ್ತು ಹಾಗೂ ನಕಲಿ ನೋಟು ಮತ್ತು ಶಸ್ತ್ರಾಸ್ತ್ರಗಳನ್ನು ಇರಿಸಿಕೊಂಡಿರುವ ಪ್ರಕರಣದಲ್ಲಿಯೂ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. (ಅಲ್ಪಸಂಖ್ಯಾತರ ಅಪರಾಧಿ ಪ್ರಕರಣಗಳು ಪ್ರಮಾಣ ಎಲ್ಲಕ್ಕೂ ಹೆಚ್ಚು ! ಅಪರಾಧ ಚಟುವಟಿಕೆಗಳಲ್ಲಿ ಮತಾಂಧರನ್ನು ಬಂಧಿಸಿ ಸೆರೆಮನೆಯಲ್ಲಿ ಹಾಕಿದ ನಂತರ ಅವರ ಮೇಲೆ ಯಾವುದೇ ರೀತಿಯ ಪರಿಣಾಮ ಆಗುವುದಿಲ್ಲ ಮತ್ತು ಅವರು ಸೆರೆಮನೆಯಿಂದ ಹೊರ ಬಂದ ನಂತರ ಇಂತಹ ಚಟಿವಟಿಕೆಗಳನ್ನೇ ಮಾಡುತ್ತಾರೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! ಇಂತಹವರಿಗೆ ಜೀವಾವಧಿ ಸಶ್ರಮ ಸೆರೆಮನೆಯ ಶಿಕ್ಷೆ ನೀಡಬೇಕು – ಸಂಪಾದಕರು)