ಸಾರ್ವಜನಿಕ ಸ್ಥಳಗಳಲ್ಲಾಗುವ ಅಕ್ರಮ(ಕಾನೂನುಬಾಹಿರ) ನಮಾಜಪಠಣವನ್ನು ನಿಲ್ಲಿಸಲು ಗುರುಗ್ರಾಮದ ಹಿಂದೂ ನಾಗರಿಕರಂತೆ ಹೋರಾಡಬೇಕಾಗಿದೆ! – ನೀರಜ ಅತ್ರಿ

‘ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಏಕೆ?’ ಈ ವಿಷಯದ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ!

ಕಳೆದ ಹಲವು ವರ್ಷಗಳಿಂದ ಪೊಲೀಸರು ಮತ್ತು ಆಡಳಿತವು ರಾಜಕೀಯ ನಾಯಕರ ದಾರಿಯಲ್ಲಿ ನಡೆಯುತ್ತಿರುವುದು ನಮ್ಮ ಅನುಭವಕ್ಕೆ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಡೆಸಲಾಗುವ ನಮಾಜು ಪಠಣವು ದೇಶದಾದ್ಯಂತ ಸಭ್ಯತೆಗೆ ಸವಾಲಾಗಿದೆ. ಗುರುಗ್ರಾಮದಲ್ಲಿ ಹಿಂದೂ ನಾಗರಿಕರು ಮತ್ತು ಸಂಘಟನೆಗಳು ರಸ್ತೆಗಳಲ್ಲಿ ಅಕ್ರಮವಾಗಿ ನಮಾಜು ಪಠಣವನ್ನು ವಿರೋಧಿಸಿದಂತೆ ದೇಶದಾದ್ಯಂತ ಎಲ್ಲೆಡೆ ವಿರೋಧವಾಗಬೇಕು ಎಂದು ವಿವೇಕಾನಂದ ಕಾರ್ಯ ಸಮಿತಿಯ ಅಧ್ಯಕ್ಷರಾದ ಶ್ರೀ.ನೀರಜ ಅತ್ರಿಯವರು ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ‘ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಏಕೆ?’ ಎಂಬ ವಿಷಯದ ಕುರಿತು ಆಯೋಜಿಸಿದ್ದ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

‘ಕಳೆದ 70 ವರ್ಷಗಳಿಂದ ಸಂವಿಧಾನವನ್ನು ಪಾಲಿಸದೇ ‘ಮತ ಬ್ಯಾಂಕ್’ ರಾಜಕಾರಣದಿಂದ ಕೆಲವು ವಿಶಿಷ್ಟ ಸಮುದಾಯಗಳಿಗೆ ವಿನಾಯಿತಿ ನೀಡಲಾಗುತ್ತಿದೆ. ಭಾರತೀಯ ಸಂವಿಧಾನದ ಪ್ರಕಾರ, ‘ಯಾರಿಗೂ ಇತರರಿಗೆ ತೊಂದರೆಯಾಗುವಂತಹ ರೀತಿಯಲ್ಲಿ ವರ್ತಿಸುವ ಹಕ್ಕು ಇಲ್ಲ.’ ಆದರೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣ ಮಾಡಿ ಪಾದಚಾರಿಗಳು, ವಾಹನಗಳ ಪ್ರಯಾಣಿಕರಿಗೆ ತೊಂದರೆಗೀಡು ಮಾಡಲಾಗುತ್ತದೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಮಾಜು ಪಠಣವನ್ನು ತಡೆಯಲು ನ್ಯಾಯಾಂಗ ಮಾರ್ಗದಿಂದ ಹೋರಾಟ ನಡೆಸುವ ಅಗತ್ಯವಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ನ್ಯಾಯವಾದಿಗಳು ಮುಂದಾಗಬೇಕು’ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಗೌರವ ಗೋಯಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಸ್ಲಿಂ ರಾಷ್ಟ್ರಗಳಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣಕ್ಕೆ ನಿಷೇಧಿಸಲಾಗಿದೆ; ಹಾಗಾದರೆ ಸೆಕ್ಯುಲರ್ ಭಾರತದಲ್ಲಿ ಈ ಮುದ್ದು ಏಕೆ?

ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ನರೇಂದ್ರ ಸುರ್ವೆಯವರು ಈ ವಿಷಯದಲ್ಲಿ ಮಾತನಾಡುತ್ತಾ, ‘ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣಕ್ಕೆ ಮಸೀದಿಗಳಲ್ಲಿ ಜಾಗದ ಕೊರತೆಯ ಕಾರಣವಿದೆ ಎಂದು ಹೇಳಲಾಗುತ್ತಿದೆ, ಇದು ಸಂಪೂರ್ಣ ತಪ್ಪು. ಹಾಗಿದ್ದರೆ ದೇವಸ್ಥಾನಗಳಲ್ಲಿ ಪೂಜೆ-ಅರ್ಚನೆ, ಆರತಿ ಇತ್ಯಾದಿಗಳಿಗೆ ಸ್ಥಳಾವಕಾಶ ಕಡಿಮೆ ಎಂದು ಹಿಂದೂಗಳೂ ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾಡುತ್ತೇವೆ ಎಂದು ಹೇಳಿದರೆ ನಡೆಯಬಹುದೇ ? ಇಂದು, ಅನೇಕ ಮುಸಲ್ಮಾನ ರಾಷ್ಟ್ರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣವನ್ನು ನಿಷೇಧಿಸಲಾಗಿದೆ ಮತ್ತು ಹಾಗೆ ಮಾಡುವವರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಹಾಗಾದರೆ ‘ಸೆಕ್ಯುಲರ್’ ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ಅಕ್ರಮವಾಗಿ ನಡೆಯುವ ನಮಾಜು ಪಠಣಕ್ಕೆ ಏಕೆ ಅನುಮತಿ ನೀಡುತ್ತಾರೆ ? ಹಿಂದೂಗಳು ಮಾತ್ರ ಗಣೇಶೋತ್ಸವ, ನವರಾತ್ರಿಯಂತಹ ನಿಯಮಿತ ಸಾರ್ವಜನಿಕ ಉತ್ಸವಗಳಿಗೆ ಅನುಮತಿ ಪಡೆಯಲು ಹರಸಾಹಸ ಪಡಬೇಕಾಗಿದೆ! ಅದೇ ಸಮಯದಲ್ಲಿ, ಗುರುಗ್ರಾಮದಂತಹ ಆಧುನಿಕ ನಗರಗಳಲ್ಲಿ, ಪೊಲೀಸ್ ರಕ್ಷಣೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣ ಮಾಡಲಾಗುತ್ತಿತ್ತು, ಎಂಬುದು ಆಶ್ಚರ್ಯದ ಸಂಗತಿಯಾಗಿದೆ. ಹಿಂದೂಗಳು ಇದನ್ನು ಖಂಡಿಸಿ ಸಂವಿಧಾನಾತ್ಮಕ ರೀತಿಯಲ್ಲಿ ಹೋರಾಟ ನಡೆಸಬೇಕು, ಎಂದರು.