ಗಡಿಯಲ್ಲಿ ೧೯೬೨ ನೇ ಇಸವಿಯಂತಹ ಯುದ್ಧಸ್ಥಿತಿಯಾಗಲು ಬಿಡುವುದಿಲ್ಲ ! – ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರತಿಪಾದನೆ

ನವ ದೆಹಲಿ – ಭಾರತೀಯ ಸೈನ್ಯವು ಯಾವುದೇ ರೀತಿಯ ತುರ್ತುಸ್ಥಿತಿಗೆ ಸಿದ್ಧರಿರುವುದು ಅಗತ್ಯವಾಗಿದೆ. ಗಡಿಯಲ್ಲಿ ೧೯೬೨ ರಂತೆ ಯುದ್ಧಸ್ಥಿತಿಯಾಗಲು ಬಿಡುವುದಿಲ್ಲ, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ. ಚೀನಾದ ಗಡಿಯಲ್ಲಿ ಭಾರತೀಯ ಸೈನ್ಯಕ್ಕಾಗಿ ನಡೆಯುತ್ತಿರುವ ಮೂಲಭೂತ ಸೌಲಭ್ಯಗಳ ನಿರ್ಮಾಣದ ವಿರುದ್ಧ ಪರಿಸರದ ವಿಷಯದಲ್ಲಿ ಹೂಡಲಾದ ಒಂದು ಅರ್ಜಿಯ ಮೇಲೆ ಸರಕಾರವು ನ್ಯಾಯಾಲಯದಲ್ಲಿ ತನ್ನ ಪಕ್ಷವನ್ನು ಮಂಡಿಸುವಾಗ ಮೇಲಿನ ಅಂಶಗಳನ್ನು ಮಂಡಿಸಿತು.

ಸರಕಾರವು ನ್ಯಾಯಾಲಯದಲ್ಲಿ ಈ ಬಗ್ಗೆ ಹೇಳುತ್ತಾ, ಇತ್ತೀಚೆಗೆ ಘಟನಾವಳಿಗಳಿಂದ ಭಾರತೀಯ ಸೈನ್ಯಕ್ಕೆ ಗಡಿಯಲ್ಲಿ ರಸ್ತೆಗಳ ಅಗತ್ಯವಿದೆ. ಗಡಿಯ ಆಚೆಗೆ ದೊಡ್ಡ ಪ್ರಮಾಣದಲ್ಲಿ ಕಟ್ಟಡಕೆಲಸ ನಡೆದಿದೆ. ಅವರು (ಚೀನಾವು) ಮೂಲಭೂತ ಸೌಲಭ್ಯಗಳನ್ನು ನಿರ್ಮಿಸಿದ್ದು ವಿಮಾನಕ್ಕಾಗಿ ರನ್.ವೇ, ಹೆಲಿಪ್ಯಾಡ್, ರಸ್ತೆ, ರೈಲು ಮಾರ್ಗದ ಬಲೆ ಇತ್ಯಾದಿಗಳನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೈನ್ಯಕ್ಕೆ ಗಡಿಯವರೆಗೂ ಭಾರಿ ವಾಹನಗಳನ್ನು ಕೊಂಡೊಯ್ಯಲು ಅಗಲವಾದ ರಸ್ತೆಗಳ ಅಗತ್ಯವಿದೆ. ಯುದ್ಧತಂತ್ರದ ದೃಷ್ಟಿಯಿಂದ ಮಹತ್ವವಾಗಿರುವ ೯೦೦ ಕಿ.ಮೀ. ಯೋಜನೆಯ ದೃಷ್ಟಿಯಿಂದ ಅದು ಉತ್ತರಾಖಂಡದಲ್ಲಿನ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದ್ರೀನಾಥ ಈ ೪ ಪವಿತ್ರ ನಗರಗಳನ್ನು ಜೋಡಿಸುವುದು ಅಗತ್ಯವಾಗಿದೆ. ಸೈನಿಕರು, ಯುದ್ಧಟ್ಯಾಂಕ್.ಗಳು, ಭಾರೀ ತೋಪುಗಳು ಹಾಗೂ ಯಂತ್ರ ಸಾಮಗ್ರಿಗಳನ್ನು ಒಂದು ಸ್ಥಾನದಿಂದ ಮತ್ತೊಂದು ಸ್ಥಾನದ ವರೆಗೂ ಸಾಗಿಸ ಬೇಕಾಗುತ್ತದೆ, ಇದು ಸೈನ್ಯದ ಸಮಸ್ಯೆಯಾಗಿದೆ. ೧೯೬೨ ರಲ್ಲಿ ಚೀನಾದ ಗಡಿಯವರೆಗೂ ಕಾಲ್ನಡಿಗೆಯಲ್ಲಿ ಪೂರೈಕೆಯಾಗುತ್ತಿತ್ತು, ಈಗ ಆ ರೀತಿ ಆಗುವುದು ಬೇಡ, ಜೋಡುರಸ್ತೆಗಳು ಆಗದೆ ಹೋದರೆ ಆಗ ರಸ್ತೆ ಮಾಡುವ ಉದ್ದೇಶವೇ ಪೂರ್ಣವಾಗುವುದಿಲ್ಲ. ಆದ್ದರಿಂದ ೭ ಮೀಟರ್ ಅಗಲದ ಜೋಡುರಸ್ತೆಗೆ ಅನುಮತಿ ಸಿಗಲಿ, ಎಂದು ಕೇಂದ್ರ ಸರಕಾರವು ನ್ಯಾಯಾಲಯದಲ್ಲಿ ಬೇಡಿಕೆ ನೀಡಿತು.