ಹಿಂದೂ ಹೆಸರನ್ನು ಬಳಸಿ ಮಹಿಳೆಯ ಬಾಡಿಗೆ ಮನೆಯಲ್ಲಿದ್ದ ಮತಾಂಧ; ನಂತರ ಮಹಿಳೆಯ ಮೇಲೆ ಬಲಾತ್ಕಾರ ಮತ್ತು ಆಕೆಯ ಮತಾಂತರ !

ಬಲವಂತವಾಗಿ ಗೋಮಾಂಸ ತಿನ್ನಿಸುವಿಕೆ

ಎಂಟೂವರೆ ಲಕ್ಷ ರೂಪಾಯಿ ಲೂಟಿ

* ಮುಸಲ್ಮಾನರಿಗೆ ಮನೆ ಬಾಡಿಗೆ ನೀಡಲು ನಿರಾಕರಿಸುವ ಹಿಂದುಗಳನ್ನು ಅಸಹಿಷ್ಣು ಎಂದು ಬೊಬ್ಬೆ ಹಾಕುವ ಪ್ರಗತಿಪರರು ಮತ್ತು `ಸೆಕ್ಯುಲರ್’ ಮಾಧ್ಯಮಗಳು ಈ ಬಗ್ಗೆ ಏನೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು

* ಇಂತಹ ಇನ್ನೆಷ್ಟು ಘಟನೆಗಳಾದ ಮೇಲೆ ಸರಕಾರವು ರಾಷ್ಟ್ರೀಯ ಮಟ್ಟದಲ್ಲಿ ‘ಲವ್ ಜಿಹಾದ್’ ವಿರೋಧಿ ಕಾನೂನನ್ನು ಜಾರಿ ಮಾಡಲಿದೆ ? ಸಂಪಾದಕರು

ದೆಹಲಿ – ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಮಹಿಳೆಯ ಮನೆಯಲ್ಲಿ ಬಾಡಿಗೆಗಿದ್ದ ಮತಾಂಧನು ಆ ಮಹಿಳೆಯ ಮೇಲೆ ಬಲಾತ್ಕಾರ ನಡೆಸಿ ಆಕೆಯನ್ನು ಮತಾಂತರಿಸಿದ ಖೇದಜನಕ ಘಟನೆಯು ಬೆಳಕಿಗೆ ಬಂದಿದೆ.

1. ದಾನಿಶ ಎಂಬ ಮತಾಂಧನು `ದಿನೇಶ’ ಎಂಬ ಹೆಸರನ್ನು ಇಟ್ಟುಕೊಂಡು ಸಂತ್ರಸ್ತೆಯ ಮನೆಯನ್ನು ಬಾಡಿಗೆ ಪಡೆದಿದ್ದನು.

2. ಆತನು ಸಂತ್ರಸ್ತೆ ಹಿಂದೂ ಮಹಿಳೆಯು ಸ್ನಾನ ಮಾಡುವಾಗ ಅಶ್ಲೀಲ ವೀಡಿಯೊ ತಯಾರಿಸಿದ್ದನು. ಈ ವಿಡಿಯೋವನ್ನು ಪ್ರಸಾರಮಾಡುವ ಬೆದರಿಕೆ ಒಡ್ಡಿ ಸಂತ್ರಸ್ತೆಯನ್ನು ಮೇಲೆ ಅನೇಕ ಬಾರಿ ಬಲಾತ್ಕರಿಸಿದನು.

3. ಇಷ್ಟೇ ಅಲ್ಲದೆ ಆತನು ಸಂತ್ರಸ್ತೆಯನ್ನು ಬಲವಂತವಾಗಿ ಮತಾಂತರಿಸಿ ಆಕೆಗೆ ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಾನೆ. ಆತನ ಸಂತ್ರಸ್ತೆಯಿಂದ ಒಟ್ಟು ಎಂಟೂವರೆ ಲಕ್ಷ ರೂಪಾಯಿಯನ್ನು ಲಪಟಾಯಿಸಿದ್ದಾನೆ.

4. ಕಾಲಾಂತರದಲ್ಲಿ ದಿನೇಶನು ಹಿಂದೂವಲ್ಲ, ಮುಸಲ್ಮಾನನಾಗಿದ್ದಾನೆ ಮತ್ತು ಆತನಿಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ ಎಂದು ಸಹ ಸಂತ್ರಸ್ತ ಹಿಂದೂ ಮಹಿಳೆಗೆ ತಿಳಿಯಿತು.

5. ಆರೋಪಿಯ ಸಹಚರರು ಸಹ ಸಂತಸ್ತೆಗೆ ಕಿರುಕುಳ ನೀಡಿದರು.

6. ಈ ಪ್ರಕರಣದಲ್ಲಿ ಆರೋಪಿ ಮತ್ತು ಆತನ ಸಹಚರರ ವಿರುದ್ಧ ಅಕ್ಟೋಬರ್ 29 ರಂದು ಬುರಾಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ದಿನೇಶ ರಾಣಾ ಅಲಿಯಸ ಇನಾಮ ಅಲಿ ಅಲಿಯಾಸ್ ದಾನಿಶ ರಾಣಾ ಮತ್ತು ಆತನ ಸಹಚರರ ವಿರುದ್ಧ ಬಲಾತ್ಕಾರ, ಥಳಿತ, ಅಪರಾಧ ಷಡ್ಯಂತ್ರ, ಮೋಸ ಇತ್ಯಾದಿ ಕಲಂನ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

7. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಪೊಲೀಸ್ ಅವರ ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಸಂತ್ರಸ್ತೆ ಹಿಂದೂ ಮಹಿಳೆಗೆ ಭದ್ರತೆ ನೀಡಿದ್ದಾರೆ.