ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಆದಿ ಶಂಕರಾಚಾರ್ಯರ ಸಮಾಧಿಯ ಸ್ಥಳದಲ್ಲಿ ಸ್ಥಾಪಿಸಲಾದ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಅನಾವರಣಗೊಳಿಸಲಾಯಿತು.

ಕೇದಾರನಾಥ (ಉತ್ತರಾಖಂಡ) – ಇಲ್ಲಿನ ಆದಿ ಶಂಕರಾಚಾರ್ಯರ ಸಮಾಧಿಯ ಸ್ಥಳದಲ್ಲಿ ಸ್ಥಾಪಿಸಲಾದ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಅನಾವರಣಗೊಳಿಸಲಾಯಿತು. ಶಂಕರಾಚಾರ್ಯರ ಈ ವಿಗ್ರಹವು 12 ಅಡಿ ಎತ್ತರ ಮತ್ತು 35 ಟನ್ ತೂಕವಿದೆ. ಇದೇ ಸಂದರ್ಭದಲ್ಲಿ ಪ್ರಧಾನಿಯವರು ಶಂಕರಾಚಾರ್ಯರ ಸಮಾಧಿಸ್ಥಳವನ್ನು ಉದ್ಘಾಟಿಸಿದರು. ಈ ಸಮಾಧಿಸ್ಥಳವು 2013 ರಲ್ಲಿ ಜಲಪ್ರಳಯದಲ್ಲಿ ನಾಶವಾಗಿತ್ತು. ಕೇರಳದಲ್ಲಿ ಜನಿಸಿದ ಆದಿ ಶಂಕರಾಚಾರ್ಯರು ಕೇದಾರನಾಥ ದೇವಾಲಯದ ಜೀರ್ಣೋದ್ಧಾರ ಮಾಡಿದ್ದರು. ಪ್ರಧಾನಿ ಮೋದಿ ಕೇದಾರನಾಥ ದೇವಸ್ಥಾನದಲ್ಲಿ ಪೂಜೆ-ಅರ್ಚನೆ ಮತ್ತು ರುದ್ರಾಭಿಷೇಕ ನೆರವೇರಿಸಿದರು. ಈ ಸಂದರ್ಭದಲ್ಲಿ ಉತ್ತರಾಖಂಡದ ರಾಜ್ಯಪಾಲ (ನಿವೃತ್ತ) ಲೆಫ್ಟಿನೆಂಟ್ ಜನರಲ್ ಗರುಮಿತ್ ಸಿಂಗ್ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉಪಸ್ಥಿತರಿದ್ದರು.

ನಾನು ನನ್ನ ಕಣ್ಣುಗಳಿಂದ ವಿನಾಶವನ್ನು ನೋಡಿದೆ ! – ಪ್ರಧಾನಿ ಮೋದಿ

ಈ ಸಮಯದಲ್ಲಿ ನೆರೆದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2013 ರಲ್ಲಿ ಜಲ ಪ್ರಳಯವಾಯಿತೋ, ಆಗ ನಾನು ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದೆ. ಆ ಸಮಯದಲ್ಲಿ, ನಾನು ನನ್ನನ್ನು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಇಲ್ಲಿ ಓಡಿ ಬಂದೆ. ಇಲ್ಲಿನ ವಿನಾಶವನ್ನು ನನ್ನ ಕಣ್ಣಾರೆ ಕಂಡಿದ್ದೇನೆ. ಆ ನೋವನ್ನು ಸಹಿಸಿಕೊಳ್ಳುತ್ತಿದ್ದೆ. ಇಲ್ಲಿಗೆ ಬರುವ ಜನರಿಗೆ, ನಮ್ಮ ಕೇದಾರಧಾಮವನ್ನು ಮತ್ತೆ ಮರುನಿರ್ಮಾಣ ಆಗುತ್ತದೆಯೋ ಇಲ್ಲವೋ ? ಎಂದು ಅನಿಸುತ್ತಿತ್ತು. ಆದರೆ ನನ್ನ ಒಳಗಿನ ಧ್ವನಿಯು, ಇದು ಮೊದಲಿಗಿಂತ ಹೆಚ್ಚು ಹೆಮ್ಮೆಯಿಂದ ಎದ್ದು ನಿಲ್ಲುತ್ತದೆ ಎಂದು ಹೇಳುತ್ತಿತ್ತು. ಆದಿ ಶಂಕರಾಚಾರ್ಯರ ಸಮಾಧಿ ಜೀರ್ಣೋದ್ಧಾರಕ್ಕೆ ನೀವೆಲ್ಲರೂ ಸಾಕ್ಷಿಯಾಗಿದ್ದೀರಿ. ಇದು ಭಾರತದ ಆಧ್ಯಾತ್ಮಿಕ ಸಮೃದ್ಧಿ ಮತ್ತು ಪರಂಪರೆಯ ಒಂದು ದೃಶ್ಯವಾಗಿದೆ ಎಂದು ಹೇಳಿದರು.