ಹುಬ್ಬಳ್ಳಿ : ಹುಬ್ಬಳ್ಳಿಯ ದೇಶಪಾಂಡೆ ನಗರದ ಭಾಜಪ ಕಾರ್ಯಾಲಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಭಾಜಪ ಕಾರ್ಪೊರೇಟರ್ ಗಳು, MLA ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳು, ಅಧ್ಯಕ್ಷರು ಹೀಗೆ ಸುಮಾರು 68 ಜನಪ್ರತಿನಿಧಿಗಳಿಗೆ ಹಲಾಲ ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಾಲಯದ TV ಯಲ್ಲಿ ಎಲ್ಲ ಮಾಹಿತಿಗಳನ್ನು ತೋರಿಸಲಾಯಿತು. ದಕ್ಷಿಣ ಕರ್ನಾಟಕದ ಸಮಿತಿಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಶ್ರೀ. ರಮೇಶ ಶಿಂದೆಯವರ ಪರಿಚಯವನ್ನು ಆರಂಭದಲ್ಲಿ ಎಲ್ಲರಿಗೂ ಮಾಡಿಕೊಟ್ಟರು.

ಸುಮಾರು 45 ನಿಮಿಷಗಳ ಕಾಲ ವಿಷಯ ಮಾಹಿತಿ ಹಾಗೂ ಪ್ರಶ್ನೋತ್ತರಗಳು ನಡೆದವು. ಕಾರ್ಪೊರೇಟರ್ ಶ್ರೀ. ತಿಪ್ಪಣ್ಣಾ ಮಜ್ಜಿಗಿ ಇವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇಷ್ಟೆಲ್ಲ ಮಾಹಿತಿಗಳು ಮತ್ತು ಇಷ್ಟು ಗಂಭೀರ ವಿಷಯಗಳು ತಮಗೆ ಗೊತ್ತೇ ಇರಲಿಲ್ಲ, ಇದನ್ನು ಪ್ರತಿಯೊಬ್ಬರ ತನಕ ತಲುಪಿಸಬೇಕಿದೆ ಎಂದು ಎಲ್ಲರೂ ಹೇಳಿದರು. ಈ ತರಹದ ಬೈಠಕಗಳನ್ನು ತಾವು ತಮ್ಮ ಕ್ಷೇತ್ರದಲ್ಲಿಯೂ ಇಟ್ಟುಕೊಳ್ಳುತ್ತೇವೆ ಎಂದು ೨-೩ ಕಾರ್ಪೊರೇಟರ್ ಗಳು ಹೇಳಿದರು.

‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !