ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ರಾಜಕೀಯ ಸಂಘಟನೆ ಎಸ್.ಡಿ.ಪಿ.ಐ.ನ ಮೇಲೆ ಸಂದೇಹ
|
ತ್ರಿಶೂರ (ಕೇರಳ) – ಇಲ್ಲಿಯ ೩೫ ವರ್ಷ ವಯಸ್ಸಿನ ಭಾಜಪದ ಕಾರ್ಯಕರ್ತ ಕೊಪ್ಪಾರಾ ಬೀಜೂರವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಬೀಜೂರವರು ೨ ತಿಂಗಳ ಹಿಂದೆ ಕೊಲ್ಲಿ ದೇಶದಿಂದ ಕೆಲಸ ಹಿಂದಿರುಗಿದ್ದರು. ಸದ್ಯ ಅವರು ಇಲ್ಲಿನ ಮನಾಥಲಾ ನಾಗಾಯಕ್ಷೀ ದೇವಾಲಯದ ಸಮೀಪದಲ್ಲಿ ಸಾಕಿದ ಪಾರಿವಾಳಗಳನ್ನು ಮಾರಾಟ ಮಾಡುವ ವ್ಯವಸಾಯ ಮಾಡುತ್ತಿದ್ದರು.
BJP worker killed in Chavakkad. #Kerala @BJP4India https://t.co/1H4c3krjul via @NewIndianXpress
— TNIE Kerala (@xpresskerala) November 1, 2021
ಅಕ್ಟೋಬರ್ ೩೧ ರಂದು ಬೀಜೂರವರ ಅಂಗಡಿಯ ಹತ್ತಿರ ಸಜೀವನ ಎಂಬ ಯುವಕ ಹಾಗೂ ಇತರರಲ್ಲಿ ವಾಗ್ವಾದ ನಡೆದಿತ್ತು. ಈ ವಾದದಿಂದಲೇ ಬೀಜೂರವರನ್ನು ಸಜೀವನನೆಂದು ತಿಳಿದು ಕೊಲೆ ಮಾಡಲಾಗಿದೆ ಎಂದು ಸಂದೇಹ ವ್ಯಕ್ತ ಪಡಿಸಲಾಗುತ್ತಿದೆ. ಬೀಜೂರವರ ಕೊಲೆಯ ಬಳಿಕ ಭಾಜಪವು ಅಲ್ಲಿ ‘ಬಂದ್’ಗೆ ಕರೆ ನೀಡಿತು. ‘ಈ ಕೊಲೆಯ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅವರ ರಾಜಕೀಯ ಸಂಘಟನೆಯಾದ ಎಸ್.ಡಿ.ಪಿ.ಐ. (ಸೋಶಿಯಲ್ ಡೆಮೋಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ)ದ ಕಾರ್ಯಕರ್ತರಿದ್ದಾರೆ’, ಎಂದು ಭಾಜಪವು ಆರೋಪಿಸಿದೆ. ಈ ಕೊಲೆಯ ಮೂಲಕ ಅಲ್ಲಿ ಅಶಾಂತಿಯನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಲಾಗುತ್ತಿದೆ.