ಪ್ರತಿಯೊಬ್ಬ ಭಾರತೀಯನು ದೀಪಾವಳಿಯ ದೀಪದ ಜ್ಯೋತಿಯಂತೆ ಸೈನಿಕರಿಗೆ ಸದಾ ಕಾಲ ಅನೇಕ ಶುಭಾಶಯಗಳು ನೀಡುವರು ! – ಪ್ರಧಾನಿ ಮೋದಿ

ಗಡಿಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಶ್ರೀನಗರ (ಜಮ್ಮು-ಕಾಶ್ಮೀರ) – ನಾನು ಇಂದು ಪುನಃ ನಿಮ್ಮಲ್ಲಿ ಬಂದಿದ್ದೇನೆ. ಇಂದು ಪುನಃ ನಿಮ್ಮಿಂದ ಹೊಸ ಶಕ್ತಿ, ಆಕಾಂಕ್ಷೆ ಮತ್ತು ವಿಶ್ವಾಸವನ್ನು ತೆಗೆದುಕೊಂಡು ಹೋಗುವೆನು. ನಾನೊಬ್ಬನೇ ಇಲ್ಲಿಗೆ ಬಂದಿಲ್ಲ, ನಾನು ೧೩೦ ಕೋಟಿ ದೇಶವಾಸಿಗಳ ಆಶೀರ್ವಾದವನ್ನು ನಿಮಗಾಗಿ ತಂದಿದ್ದೇನೆ. ಪ್ರತಿಯೊಬ್ಬ ಭಾರತೀಯನು ದೀಪಾವಳಿಯ ದೀಪದ ಜ್ಯೋತಿಯಂತೆ ಸೈನಿಕರಿಗೆ ಸದಾ ಕಾಲ ಅನೇಕ ಶುಭಾಶಯಗಳನ್ನು ನೀಡುವರು, ಎಂಬ ಮಾತುಗಳಲ್ಲಿ ಪ್ರಧಾನಿ ಮೋದಿಯವರು ಭಾರತೀಯ ಸೈನಿಕರಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಭಾರತೀಯ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. ನೌಶೇರಾ ಸೆಕ್ಟರ್‌ನಲ್ಲಿ ದೀಪಾವಳಿಯನ್ನು ಆಚರಿಸುತ್ತಾ ಅವರು ಮಾತನಾಡುತ್ತಿದರು. ಈ ವೇಳೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರಧಾನಿ ಮೋದಿ ತಮ್ಮ ಮಾತನ್ನು ಮುಂದುವರೆಸುತ್ತಾ, ನೀವು ಭಾರತಮಾತೆಯ ರಕ್ಷಾಕವಚ ಆಗಿದ್ದೀರಿ. ನಿಮ್ಮಿಂದಾಗಿಯೇ ನಾವು ಭಾರತೀಯರು ಶಾಂತವಾಗಿ ನಿದ್ರಿಸಬಹುದು ಮತ್ತು ಹಬ್ಬದ ಸಮಯದಲ್ಲಿ ಸಂತೋಷವಾಗಿರಬಹುದು. ನಾನು ಪ್ರತಿ ದೀಪಾವಳಿಯನ್ನು ನಿಮ್ಮೊಂದಿಗೆ ಅಂದರೆ ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕರೊಂದಿಗೆ ಆಚರಿಸುತ್ತೇನೆ ಎಂದು ಹೇಳಿದರು.