ಪಂಜಾಬ್‌ಅನ್ನು ಭಾರತದಿಂದ ಪ್ರತ್ಯೇಕಿಸಿ ಸ್ವತಂತ್ರ ರಾಷ್ಟ್ರವನ್ನಾಗಿಸಲು ಲಂಡನ್‌ನಲ್ಲಿ ಖಲಿಸ್ತಾನಿ ಸಂಘಟನೆಯಿಂದ ಜನಾಭಿಪ್ರಾಯ ಸಂಗ್ರಹ

ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತವು ಬ್ರಿಟನ್ ಮೇಲೆ ಒತ್ತಡ ಹೇರಬೇಕು ಮತ್ತು ಇಂತಹ ಘಟನೆಗಳು ಬೇರೆಲ್ಲೂ ನಡೆಯದಂತೆ ಜಾಗರೂಕರಾಗಿರಬೇಕು !

ಲಂಡನ್ (ಬ್ರಿಟನ್) – ಸ್ವತಂತ್ರ ರಾಷ್ಟ್ರದ ಬೇಡಿಕೆಗೆ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯು ಜನಾಭಿಪ್ರಾಯ ಸಂಗ್ರಹಿಸಲು ಪ್ರಯತ್ನ ಆರಂಭಿಸಿದೆ. ಅಕ್ಟೋಬರ್ ೩೧ ರಂದು ಅಮೇರಿಕಾದ ಖಲಿಸ್ತಾನಿ ಸಂಘಟನೆ ‘ಸಿಕ್ಖ್ ಫಾರ್ ಜಸ್ಟಿಸ್’ ನಿಂದ ಲಂಡನ್‌ನಲ್ಲಿ ಮೊದಲ ಸುತ್ತಿನ ಜನಾಭಿಪ್ರಾಯ ಸಂಗ್ರಹಣೆಯನ್ನು ಆಯೋಜಿಸಿತ್ತು. ಇದರಲ್ಲಿ ಸಿಕ್ಖ್‌ರಿಗೆ ‘ಪಂಜಾಬ್ ಒಂದು ಸ್ವತಂತ್ರ ರಾಷ್ಟ್ರವಾಗಬೇಕೇ ಅಥವಾ ಬೇಡವೇ ?’, ಎಂಬುದರ ಕುರಿತು ಮತ ಚಲಾಯಿಸಲಿಕ್ಕಿತ್ತು. ಇದೇ ರೀತಿಯ ಮೆರವಣಿಗೆಗಳನ್ನು ಇತರ ಯುರೋಪಿಯನ್ ದೇಶಗಳಲ್ಲಿ ಮತ್ತು ಅಮೇರಿಕಾ ಮತ್ತು ಕೆನಡಾದಲ್ಲಿ ಸಹ ಆಯೋಜಿಸಲಾಗುವುದು. ಇದರಲ್ಲಿ ೧೮ ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ಮೂಲದವರಿಗೆ ಮತದಾನ ಮಾಡಲು ಅವಕಾಶವಿದೆ. ಲಂಡನ್‌ನಲ್ಲಿ ಈ ಮತದಾನವು ವೆಸ್ಟ್‌ಮಿನಿಸ್ಟರ್‌ನ ಎಲಿಜಬೆಥ ಸೆಂಟರ್‌ನಲ್ಲಿ ನಡೆಯಿತು. ಈ ವೇಳೆ ಭಾರತ ವಿರೋಧಿ ಘೋಷಣೆಗಳನ್ನು ಅದೇ ರೀತಿ ‘ಖಲಿಸ್ತಾನ್ ಜಿಂದಾಬಾದ್’ ನ ಘೋಷಣೆ ನೀಡಲಾಯಿತು ಮತ್ತು ಖಲಿಸ್ತಾನದ ಧ್ವಜವನ್ನು ಹಾರಿಸಲಾಯಿತು.

ಈ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ೩೦,೦೦೦ ಸಿಕ್ಖ್‌ರು ಮತ ಚಲಾಯಿಸಿದ್ದಾರೆ ಎಂದು ಈ ಸಂಘಟನೆಯ ಸಂಸ್ಥಾಪಕ ಗುರುಪತವಂತ ಸಿಂಹ ಪನ್ನು ಹೇಳಿದ್ದಾರೆ. ‘ಸಿಕ್ಖ್ ಫಾರ್ ಜಸ್ಟೀಸ್’ ಈ ಸಂಘಟನೆಗೆ ಭಾರತದಲ್ಲಿ ನಿಷೇಧ ಹೇರಲಾಗಿದೆ.