ಶ್ರೀನಗರ – ಕಾಶ್ಮೀರಿ ಮುಸಲ್ಮಾನರ ವಿಷಯವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣದಲ್ಲಿ ಭಾಜಪದ ನಾಯಕ ಮತ್ತು ಮಾಜಿ ಸಂಸದ ವಿಕ್ರಂ ರಂಧಾವಾ ಇವರ ವಿರುದ್ಧ ಅಪರಾಧ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ನ್ಯಾಯವಾದಿ ಮುಜಾಫರ್ ಅಲಿ ಶಾಹ ಇವರು ಲಿಖಿತ ದೂರನ್ನು ದಾಖಲಿಸಿದ್ದರು.
बीजेपी नेता पर FIR हुई दर्ज #Crime #T20WorldCup @kamaljitsandhuhttps://t.co/O6hRTkcuJI
— AajTak (@aajtak) November 2, 2021
ಟಿ-೨೦ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ತಂಡ ಭಾರತದ ಮೇಲೆ ಜಯ ಸಾಧಿಸಿದ ನಂತರ ಕಾಶ್ಮೀರದ ಅನೇಕ ಭಾಗಗಳಲ್ಲಿ ಪಾಕಿಸ್ತಾನದ ವಿಜಯವನ್ನು ಆಚರಿಸಲಾಗಿತ್ತು. (ಭಾರತದಲ್ಲಿದ್ದು ಶತ್ರು ರಾಷ್ಟ್ರದ ವಿಜಯ ಆಚರಿಸುವವರು ದೇಶದ್ರೋಹಿ ಅಲ್ಲವೇ ? ಸರಕಾರವು ಇವರ ಮೇಲೆ ಯಾವ ಕ್ರಮ ಕೈಗೊಂಡಿದೆ ?, ಇದನ್ನು ಸಹ ಜನರಿಗೆ ತಿಳಿಸಬೇಕು ! – ಸಂಪಾದಕರು) ಅದನ್ನು ರಂಧಾವಾ ಇವರು ಟೀಕಿಸಿದ್ದರು. ಈ ಬಗ್ಗೆ ಜಮ್ಮು-ಕಾಶ್ಮೀರ ಭಾಜಪವು ಸಹ ರಂಧಾವಾ ಅವರಿಗೆ ‘ಕಾರಣ ತೋರಿಸಿ’ ಎಂದು ನೋಟಿಸನ್ನು ನೀಡಿದೆ. ‘ರಂಧಾವಾ ಇವರು ಬಳಸಿರುವ ಭಾಷಾ ಪ್ರಯೋಗವನ್ನು ಸಹಿಸಲು ಸಾಧ್ಯವಿಲ್ಲ’, ಎಂದು ಭಾಜಪದ ರವೀಂದರ ರೈನಾ ಇವರು ಹೇಳಿದ್ದಾರೆ.