‘ಮೊಹಮ್ಮದ್ ಅಲಿ ಜಿನ್ನಾ ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದರು !’ – ಅಖಿಲೇಶ್ ಯಾದವ್, ಅಧ್ಯಕ್ಷರು, ಸಮಾಜವಾದಿ ಪಕ್ಷ

ಮುಸಲ್ಮಾನರ ಮತಕ್ಕಾಗಿ ದೇಶ ವಿಭಜನೆ ಮತ್ತು ನಂತರ 10 ಲಕ್ಷ ಹಿಂದೂಗಳ ಹತ್ಯಾಕಾಂಡಕ್ಕೆ ಕಾರಣರಾದ ಜಿನ್ನಾರವರನ್ನು ಹಾಡಿಹೊಗಳುವ ಅಖಿಲೇಶ್ ಯಾದವ್ ಅವರನ್ನು ಸರಕಾರ ಸೆರೆಮನೆಗೆ ಅಟ್ಟಿ ಅವರ ಪಕ್ಷದ ಮೇಲೆ ನಿರ್ಬಂಧ ಹೇರಬೇಕು ! – ಸಂಪಾದಕರು 

( ಎಡದಿಂದ) ಯೋಗಿ ಆದಿತ್ಯನಾಥ್, ಮೊಹಮ್ಮದ್ ಅಲಿ ಜಿನ್ನಾ ಮತ್ತು ಅಖಿಲೇಶ್ ಯಾದವ್

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸರ್ದಾರ್ ಪಟೇಲ್, ಮ. ಗಾಂಧಿ, ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಇವರೆಲ್ಲರೂ ಒಂದೇ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ಅವರು ಬ್ಯಾರಿಸ್ಟರ್ ಆದರು ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅವರು ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದರು. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಇವರು ರಾ.ಸ್ವ.ಸಂಘದ ಮೇಲೆ ನಿಷೇಧ ಹೇರಿದರು, ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇವರು ಒಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಇದರಿಂದಾಗಿ ಅವರ ಮೇಲೆ ಟೀಕೆ ವ್ಯಕ್ತವಾಗುತ್ತಿದೆ.

ಅಖಿಲೇಶ್ ಯಾದವ್ ಇವರು ಜನರಲ್ಲಿ ಕ್ಷಮೆಯಾಚಿಸಬೇಕು ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಸರ್ದಾರ್ ವಲ್ಲಭಬಾಯಿ ಪಟೇಲರನ್ನು ಜಿನ್ನಾಗೆ ಹೋಲಿಸುವುದು, ಇದು ತಾಲಿಬಾನ್ ಮಾನಸಿಕತೆಯಾಗಿದೆ. ಸಮಾಜವಾದಿ ಪಕ್ಷದ ಈ ಒಡೆದಾಳುವ ಮಾನಸಿಕತೆಗೆ ಜನರು ಎಂದಿಗೂ ಸಹಿಸುವುದಿಲ್ಲ. ಅಖಿಲೇಶ್ ಯಾದವ್ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಹೇಳಿದರು.