ದೀಪಾವಳಿಯ ಮುನ್ನ ಉತ್ತರಪ್ರದೇಶದ 46 ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಲಷ್ಕರ್-ಎ-ತೊಯಬಾ ಬೆದರಿಕೆ

* ಲಷ್ಕರ್-ಎ-ತೊಯಬಾದಿಂದ ಈದ್ ಅಥವಾ ಕ್ರಿಸ್‍ಮಸ್‍ನ ಮೊದಲು ಅಂತಹ ಬೆದರಿಕೆಗಳು ಬರುವುದಿಲ್ಲ. ಇದರಿಂದ ‘ಭಯೋತ್ಪಾದಕರಿಗೆ ಧರ್ಮವಿರುತ್ತದೆ’ ಎಂಬುದು ಸಾಬೀತಾಗುತ್ತದೆ ! -ಸಂಪಾದಕರು 

* ಭಾರತದಲ್ಲಿ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಇಸ್ಲಾಮಿಕ್ ಭಯೋತ್ಪಾದಕರ ವಿರುದ್ಧ ಮಾತನಾಡುತ್ತಿಲ್ಲ, ತದ್ವಿರುದ್ಧ ಅವರನ್ನು ಬೆಂಬಲಿಸುತ್ತಿರುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! -ಸಂಪಾದಕರು 

ನವ ದೆಹಲಿ : ಉತ್ತರಪ್ರದೇಶದ 46 ಪ್ರಮುಖ ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಲಷ್ಕರ್-ಎ-ತೊಯಬಾ ಬೆದರಿಕೆಯೊಡ್ಡಿದೆ. ಭಯೋತ್ಪಾದಕರು ಈ ಬೆದರಿಕೆಯ ಪತ್ರವನ್ನು ಹಾಪುಡ್ ರೈಲು ನಿಲ್ದಾಣದ ಅಧೀಕ್ಷಕರಿಗೆ ಕಳುಹಿಸಿದ್ದಾರೆ. ಇದಾದ ಬಳಿಕ ರಾಜ್ಯದ ಎಲ್ಲ ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಪ್ರಯಾಣಿಕರನ್ನು ಕೂಡ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ.